ದಾವಣಗೆರೆ: ತಾಲೂಕಿನ ಹದಡಿ ಗ್ರಾಮ ಪಂಚಾಯಿತಿಯಲ್ಲಿ ಬೆಳಗ್ಗೆಯಿಂದಲೂ ಒಂದಲ್ಲ ಒಂದು ಗಲಾಟೆಗಳು ನಡೆಯುತ್ತಲೇ ಇವೆ. ಮತಗಟ್ಟೆಯ ಕೂಗಳತೆಯಲ್ಲಿ ಮಾರಾಮಾರಿ ಆಗಿದ್ದು, ಪೊಲೀಸರು ಮಧ್ಯ ಪ್ರವೇಶ ಮಾಡಿ ಪರಿಸ್ಥಿತಿ ತಿಳಿಗೊಳಿಸಿದ್ದರು. ಈ ವಿಚಾರ ಮಾಸುವ ಮುನ್ನವೇ ಗ್ರಾಮದಲ್ಲಿ ಇದೀಗ ಪೊಲೀಸರು ಹಾಗೂ ಪ್ರಚಾರಕರ ಮಧ್ಯೆ ವಾಗ್ವದ ನಡೆದಿದೆ.
ಮಟಗಟ್ಟೆಯ ಕೂಗಳತೆಯಲ್ಲಿ ಮತಯಾಚನೆ ಮಾಡುತ್ತಿದ್ದ ಕೆಲವರನ್ನು ಪೊಲೀಸರು ದೂರ ತೆರಳಿ ಮತಯಾಚಿಸುವಂತೆ ಹೇಳಿದ್ದರು. ಆದರೂ ಮಾತನ್ನು ಲೆಕ್ಕಿಸದ ಕೆಲವರು, ಅಭ್ಯರ್ಥಿಗಳ ಪರ ಮತಯಾಚಿಸುತ್ತಿದ ವೇಳೆ ಗಾಂಧಿ ನಗರ ಪೊಲೀಸ್ ಠಾಣೆಯ ಪಿಎಸ್ಐ ಕೃಷ್ಣಪ್ಪ ಕೆಂಡಮಂಡಲರಾದರು. ಪರಿಣಾಮ ಅದು ವಾಗ್ವಾದಕ್ಕೆ ತಿರುಗಿದೆ.
ದಾವಣಗೆರೆ ಹೆಬ್ಬಾಳು ಗ್ರಾಮದಲ್ಲಿ ಮತದಾನ ಸಂಪೂರ್ಣ ಸ್ಥಗಿತ : ಮತದಾರರಲ್ಲಿ ಗೊಂದಲ
ಪಿಎಸ್ಐ ಕೃಷ್ಣಪ್ಪ ಸಾಕಷ್ಟು ಬಾರಿ ಹೇಳಿದರೂ ಮತ ಯಾಚನೆ ಮಾಡುತ್ತಿದ್ದವರನ್ನು ಗದರಿಸಿದ್ದಾರೆ. ಶಾಂತಿಯುತವಾಗಿ ನಡೆಯುತ್ತಿದ್ದ ಚುನಾವಣೆಯನ್ನ ಪೊಲೀಸರೇ ಕೆಡಸಿದ್ದಾರೆ ಎಂದು ವೃದ್ಧನೊಬ್ಬ ಪೊಲೀಸರ ಕಾಲಿಗೆ ಬೀಳಲು ಮುಂದಾದ ಪ್ರಸಂಗ ಕೂಡ ನಡೆಯಿತು.