ದಾವಣಗೆರೆ: ಪ್ರಸ್ತುತ ದಿನಗಳಲ್ಲಿ ಲಕ್ಷಗಟ್ಟಲೆ ಹಣ ಪೀಕುವ ಡಾಕ್ಟರ್‌ಗಳೇ ಹೆಚ್ಚು. ಆದರೆ ದಾವಣಗೆರೆಯ ವೈದ್ಯರೊಬ್ಬರು ಬಡವರ ಪಾಲಿಗೆ ಆರಾಧ್ಯ ದೈವವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಆಸ್ಪತ್ರೆಗೆ ಬರುವ ಬಡ ಹಾಗೂ ಮಧ್ಯಮ ವರ್ಗದ ಜನರಿಂದ ಕೇವಲ ಮೂವತ್ತು ರೂಪಾಯಿ ಹಣಪಡೆದು ಚಿಕಿತ್ಸೆ ನೀಡುತ್ತಾ ದಾವಣಗೆರೆಯ ನಡೆದಾಡುವ ವೈದ್ಯ ದೇವರಾಗಿದ್ದಾರೆ. ರೋಗಿಗಳ ಮೇಲೆ ಇವರ ಹಸ್ತ ಸ್ಪರ್ಷವಾದ್ರೆ ಸಾಕು ತಮ್ಮಲ್ಲಿರುವ ಕಾಯಿಲೆ ಗುಣಮುಖವಾಗುತ್ತದೆ ಎನ್ನುವ ನಂಬಿಕೆ ಜನರಲ್ಲಿದೆ.
ದಾವಣಗೆರೆ ನಗರದ ಎಂಸಿಸಿ ಬಿ ಬ್ಲಾಕ್‌ನಲ್ಲಿ ಕ್ಲಿನಿಕ್ ಇಟ್ಟಿಕೊಂಡು ಇವರು ಬಡ ರೋಗಿಗಳ ಸೇವೆ ಸಲ್ಲಿಸುತ್ತಿದ್ದಾರೆ. ಡಾ. ಎಸ್ ಎಂ ಎಲಿ ಯವರು ದಾವಣಗೆರೆಯ ಪ್ರತಿಷ್ಠಿತ ಜೆಜೆಎಂ ಮೆಡಿಕಲ್ ಕಾಲೇಜ್ ನಲ್ಲಿ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿ 2005 ರಲ್ಲಿ ನಿವೃತ್ತಿ ಹೊಂದಿ ನಂತರ ಬಡ ರೋಗಿಗಳ ಸೇವೆಗೆ ಟೊಂಕ ಕಟ್ಟಿ ನಿಂತಿದ್ದಾರೆ.
ವಿಶೇಷ ಅಂದ್ರೆ ಹಣ ಇಲ್ಲ ಎಂದು ಆಸ್ಪತ್ರೆಗೆ ಬರುವವರಿಗೆ ಹಣ ಇಲ್ಲದೆ ಚಿಕಿತ್ಸೆ ನೀಡುವ ಮೂಲಕ ಔಷಧ ಕೂಡ ನೀಡ್ತಾರೆ. ಇದರಿಂದ ಇವರ ಬಳಿ ಶಿವಮೊಗ್ಗ, ಚಿತ್ರದುರ್ಗ, ಹಾವೇರಿ ಸೇರಿದಂತೆ ಬೇರೆ ಬೇರೆ ಕಡೆಗಳಿಂದ ರೋಗಿಗಳು ಚಿಕಿತ್ಸೆಗೆ ಆಗಮಿಸುತ್ತಾರೆ. 84 ರ ಇಳಿ ವಯಸ್ಸಿನಲ್ಲಿ ಬೇಸರಪಟ್ಟುಕೊಳ್ಳದೆ ಬಂದಿರುವ ರೋಗಿಗಳನ್ನು ವಾಪಸ್ ಕಳುಹಿಸದೆ ಚಿಕಿತ್ಸೆ ಕೊಡುತ್ತಾರೆ.
![ಕೇವಲ ಮೂವತ್ತು ರೂಪಾಯಿಗೆ ಚಿಕಿತ್ಸೆ](https://etvbharatimages.akamaized.net/etvbharat/prod-images/kn-dvg-01-30-30rupee-doctor-spl-pkg-7204336_30062022191317_3006f_1656596597_50.jpg)
ಮೂವತ್ತು ರೂಪಾಯಿ ಪಡೆಯುವುದು ವಿಶೇಷ: ಅಲ್ಲದೆ ಬಡ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆಯ ಜೊತೆ ಔಷಧಿಗಳನ್ನು ನೀಡುತ್ತಾರೆ. ಇಂತಹ ವೈದ್ಯರು ನೂರ್ಕಾಲ ಸುಖವಾಗಿ ಬಾಳಲಿ ಎಂದು ರೋಗಿಗಳು ಹಾರೈಸುತ್ತಾರೆ. ಇಪ್ಪತೈದು ವರ್ಷಗಳಿಂದ ಬರುತ್ತಿರುವ ರೋಗಿ ತಬಸ್ಸುಮ್ ಅವರು ಸಕ್ಕರೆ ಖಾಯಿಲೆಗೆ ತೋರಿಸುತ್ತಿದ್ದಾರೆ. ಈ ವೈದ್ಯರು ಹಣ ಪಡೆಯದೆ ಚಿಕಿತ್ಸೆ ನೀಡಿರುವುದನ್ನು ಸಾಕಷ್ಟು ಬಾರಿ ನೋಡಿದ್ದೇನೆ. ಇಲ್ಲವಾದಲ್ಲಿ ಕೇವಲ ಮೂವತ್ತು ರೂಪಾಯಿ ಪಡೆಯುವುದು ವಿಶೇಷ ಎಂದು ಹರ್ಷ ವ್ಯಕ್ತಪಡಿಸಿದರು.
ಮಕ್ಕಳಂತೆ ನೋಡಿ ಚಿಕಿತ್ಸೆ: ದಾವಣಗೆರೆಯಲ್ಲಿ ಎಲಿ ಡಾಕ್ಟರ್ ಎಂದರೆ ಗೊತ್ತಿಲ್ಲದ ವ್ಯಕ್ತಿಯೇ ಇಲ್ಲ. ಅಷ್ಟರಮಟ್ಟಿಗೆ ಖ್ಯಾತಿ ಗಳಿಸಿದ್ದಾರೆ. 84 ರ ಇಳಿ ವಯಸ್ಸಿನಲ್ಲೂ ರೋಗಿಗಳನ್ನು ತಮ್ಮ ಮಕ್ಕಳಂತೆ ನೋಡಿ ಚಿಕಿತ್ಸೆ ನೀಡ್ತಾರೆ. ಅಲ್ಲದೆ ರೋಗಿಗಳಿಗೆ ಸ್ಕ್ಯಾನಿಂಗ್ ಪರೀಕ್ಷೆಗೆ ಏನಾದ್ರು ಬರೆದುಕೊಟ್ಟರೆ ಸ್ಕಾನಿಂಗ್ ಸೆಂಟರ್ ನವ್ರು ಕೂಡ ಕಡಿಮೆ ಹಣ ತೆಗೆದುಕೊಳ್ಳುತ್ತಾರೆ. ಅಷ್ಟರ ಮಟ್ಟಿಗೆ ಗೌರವ ಉಳಿಸಿಕೊಂಡಿದ್ದಾರೆ.
ದಿನಕ್ಕೆ ಐವತ್ತು ಜನರಿಗೆ ಚಿಕಿತ್ಸೆ: ಇವರ ಸೇವೆಯನ್ನು ಗುರುತಿಸಿ ದಾವಣಗೆರೆ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.