ETV Bharat / state

ಸೋತವರಿಗೆ ಯಾವುದೇ ಕಾರಣಕ್ಕೂ ಸಚಿವ ಸ್ಥಾನ ನೀಡಬೇಡಿ: ರೇಣುಕಾಚಾರ್ಯ - MLA MP renukacharya

ಸೋತವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದಕ್ಕೆ ವಿರೋಧ ಇದೆ. ಎರಡರಿಂದ ಮೂರು ಬಾರಿ ಜನರಿಂದ ಆರಿಸಿ ಬಂದಿರುವವರಿಗೆ ಆದ್ಯತೆ ಕೊಡಿ ಎಂದು ಹೊನ್ನಾಳಿ ಶಾಸಕ ಎಂ.ಪಿ‌.ರೇಣುಕಾಚಾರ್ಯ ಹೇಳಿದ್ದಾರೆ‌.

M. P. Renukacharya
ಶಾಸಕ ಎಂ. ಪಿ‌. ರೇಣುಕಾಚಾರ್ಯ
author img

By

Published : Nov 24, 2020, 5:22 PM IST

ದಾವಣಗೆರೆ: ಸೋತವರಿಗೆ ಯಾವುದೇ ಕಾರಣಕ್ಕೂ ಸಚಿವ ಸ್ಥಾನ ನೀಡಬೇಡಿ. ಎರಡರಿಂದ ಮೂರು ಬಾರಿ ಜನರಿಂದ ಆರಿಸಿ ಬಂದಿರುವವರಿಗೆ ಆದ್ಯತೆ ಕೊಡಿ. ಈ ಬಗ್ಗೆ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ಕೇಂದ್ರದ ವರಿಷ್ಠರೊಂದಿಗೆ ಈಗಾಗಲೇ ಮಾತನಾಡಿದ್ದೇನೆ ಎಂದು ಹೊನ್ನಾಳಿ ಶಾಸಕ ಎಂ.ಪಿ‌.ರೇಣುಕಾಚಾರ್ಯ ಹೇಳಿದರು‌.

ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮೊದಲ ಬಾರಿ ಶಾಸಕರಾಗಿದ್ದರೂ ಸಚಿವರನ್ನಾಗಿಸಿ. ಸೋತವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದಕ್ಕೆ ವಿರೋಧ ಇದೆ. ಸೋತವರಿಗೆ ಮಣೆ ಹಾಕುವುದಾದರೆ ನಾವು ನಮ್ಮ ಕ್ಷೇತ್ರದಲ್ಲಿ ಸೋಲಬೇಕಿತ್ತಾ? ಗೆದ್ದಿದ್ದೇ ತಪ್ಪಾಗಿದೆ ಎಂಬಂತಾಗಿದೆ. ಸಂಘಟನೆ, ಭಾರತ್ ಮಾತಾ ಕೀ ಜೈ ಎಂಬ ಘೋಷಣೆ ಕೂಗುತ್ತಾ ನಮ್ಮನ್ನು ಗೆಲ್ಲಿಸಿದ ಕಾರ್ಯಕರ್ತರ ಪಾಡೇನು ಎಂದು ಪ್ರಶ್ನಿಸಿದರು.

ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್‌ ಅವರು ಸಿಎಂ ಬಗ್ಗೆ ಹಗುರವಾಗಿ ಬಹಿರಂಗವಾಗಿ ಹೇಳಿಕೆ ಕೊಡಬಾರದು. ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಲು ಅವರು ಕೇಂದ್ರದ ವರಿಷ್ಠರೇನಲ್ಲ. ಸರ್ಕಾರಕ್ಕೆ ಮುಜುಗರ ತರುವ ರೀತಿಯಲ್ಲಿ ವರ್ತಿಸಬಾರದು ಎಂದ ಅವರು, ವೀರಶೈವ ಲಿಂಗಾಯತ ನಿಗಮ ರಚಿಸಿ 500 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿರುವುದು ಸಮರ್ಥನೀಯ‌. ಜನಸಂಖ್ಯೆಗೆ ಅನುಗುಣವಾಗಿ ನೀಡಿದ್ದರಲ್ಲಿ ತಪ್ಪೇನಿದೆ ಎಂದರು.

ದಾವಣಗೆರೆ ಜಿಲ್ಲೆಗೆ ಸಚಿವ ಸ್ಥಾನ ನೀಡುವ ಸಂಬಂಧ ಎಲ್ಲಾ ಶಾಸಕರು ಒಟ್ಟಾಗಿ ಸಿಎಂ ಗಮನಕ್ಕೆ ತಂದಿದ್ದೇವೆ. ಮನದಾಳದ ಮಾತುಗಳನ್ನು ಹೇಳಿದ್ದೇವೆ. ಮಧ್ಯ ಕರ್ನಾಟಕದ ಹೆಬ್ಬಾಗಿಲು ದಾವಣಗೆರೆಗೆ ಸಚಿವ ಸ್ಥಾನ ನೀಡಬೇಕೆಂಬುದು ಎಲ್ಲಾ ಶಾಸಕರ ಒಕ್ಕೊರಲ ಒತ್ತಾಯವಾಗಿದೆ. ಇಂಥಹವರನ್ನೇ ಸಚಿವರನ್ನಾಗಿಸಿ ಎಂಬ ಆಗ್ರಹ ಮಾಡಿಲ್ಲ. ಅವಕಾಶ ಕೊಡಿ ಎಂಬ ಬೇಡಿಕೆ ಅಷ್ಟೇ ನಮ್ಮದು. ಸಚಿವ ಸಂಪುಟ ವಿಸ್ತರಣೆಯಲ್ಲಿ ಅವಕಾಶ ಸಿಗುತ್ತೆ ಎಂಬ ವಿಶ್ವಾಸ ಇದೆ ಎಂದು ರೇಣುಕಾಚಾರ್ಯ ತಿಳಿಸಿದರು‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.