ಬೆಂಗಳೂರು: ದಾವಣಗೆರೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಒಟ್ಟು ಮೂರು ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕ ಅವಧಿಗೆ ನೇಮಕಾತಿ ನಡೆಯಲಿದೆ.
ಹುದ್ದೆಗಳ ವಿವರ: ಆಡಳಿತ ಸಹಾಯಕ/ಗುಮಾಸ್ತ -1, ಸ್ವಾಗತಕಾರರು-ಡಾಟಾ ಎಂಟ್ರಿ ಆಪರೇಟರ್ -1, ಜವಾನ- 1.
ವಿದ್ಯಾರ್ಹತೆ:
- ಆಡಳಿತ ಸಹಾಯಕ/ ಗುಮಾಸ್ತ: ಅಧಿಕೃತ ವಿಶ್ವವಿದ್ಯಾಲಯದಿಂದ ಪದವಿ ಹೊಂದಿರಬೇಕು. ಕಂಪ್ಯೂಟರ್ ಜ್ಞಾನ ಹೊಂದಿರಬೇಕು
- ಸ್ವಾಗತಕಾರರು-ಟಾಡಾ ಎಂಟ್ರಿ ಆಪರೇಟರ್: ಅಧಿಕೃತ ವಿಶ್ವವಿದ್ಯಾಲಯದಿಂದ ಪದವಿ ಹೊಂದಿರಬೇಕು. ಸಾಮಾನ್ಯ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
- ಜವಾನ: ಕನಿಷ್ಟ 10ನೇ ತರಗತಿ ಪೂರ್ಣಗೊಳಿಸಿರಬೇಕು.
ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಸಂದರ್ಶನ, ಕೌಶಲ್ಯ, ಕಂಪ್ಯೂಟರ್ ಮತ್ತು ಬೆರಳಚ್ಚು ನಿಖರತೆ ಮತ್ತು ನೈಪುಣ್ಯತೆ ಆಧಾರಿಸಿ ನೇಮಕಾತಿ ಮಾಡಲಾಗುವುದು. ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ.
ವೇತನ:
- ಆಡಳಿತ ಸಹಾಯಕ/ಗುಮಾಸ್ತ - 19,000 ರೂ ಮಾಸಿಕ
- ಸ್ವಾಗತಕಾರರ/ ಡಾಟಾ ಎಂಟ್ರಿ ಆಪರೇಟರ್ - 17,271 ರೂ ಮಾಸಿಕ
- ಜವಾನ- 15,202 ರೂ ಮಾಸಿಕ
ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅಧಿಸೂಚನೆಯೊಂದಿಗೆ ನೀಡಲಾಗಿರುವ ನಿಗದಿತ ಅರ್ಜಿ ನಮೂನೆಯಲ್ಲಿ ಅಭ್ಯರ್ಥಿಗಳು ತಮ್ಮ ಸ್ವ ವಿವರಗಳನ್ನೊಳಗೊಂಡ ಮಾಹಿತಿ, ಶೈಕ್ಷಣಿಕ ಪ್ರಮಾಣ ಪತ್ರ ಸೇರಿದಂತೆ ಅಗತ್ಯ ದಾಖಲಾತಿ ವಿವರಗಳನ್ನು ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಕೆ ವಿಳಾಸ: ಸದಸ್ಯ ಕಾರ್ಯದರ್ಶಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಹಳೆ ನ್ಯಾಯಾಲಯಗಳ ಸಂಕೀರ್ಣ, ಹೈಸ್ಕೂಲ್ ಮೈದಾನದ ಹತ್ತಿರ, ದಾವಣಗೆರೆ.
ನವೆಂಬರ್ 20ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ದಿನಾಂಕ ಡಿಸೆಂಬರ್ 8 ಆಗಿದೆ. ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು davanagere.dcourts.gov.in ಇಲ್ಲಿಗೆ ಭೇಟಿ ನೀಡಿ.
ಇದನ್ನೂ ಓದಿ: ಕೆಪಿಎಸ್ಸಿ ನೇಮಕಾತಿ; ಕಾನೂನು ಸಲಹೆಗಾರರ ಹುದ್ದೆಗೆ ಅರ್ಜಿ ಆಹ್ವಾನ