ETV Bharat / state

ಗ್ರಾ.ಪಂಚಾಯತಿ ಚುನಾವಣೆಗೆ ಸಕಲ ಸಿದ್ಧತೆ ನಡೆದಿದೆ: ಡಿಸಿ ಮಹಾಂತೇಶ್ ಬೀಳಗಿ - Gram Panchayat elections

ದಾವಣಗೆರೆ ಜಿಲ್ಲೆಯಲ್ಲಿ 191 ಗ್ರಾಮ ಪಂಚಾಯತಿಗಳಿದ್ದು, ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ 89 ಗ್ರಾ.ಪಂ. ಚುನಾವಣೆ ನಡೆಯಲಿದ್ದು, ಎರಡನೇ ಹಂತದಲ್ಲಿ 102 ಪಂಚಾಯತಿಗಳಿಗೆ ಚುನಾವಣೆ ನಿಗದಿ ಮಾಡಲಾಗಿದೆ.

District Collector Mahantesh beelagi statement
ಗ್ರಾಮ ಪಂಚಾಯತಿ ಚುನಾವಣೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ: ಡಿಸಿ ಮಹಾಂತೇಶ್ ಬೀಳಗಿ
author img

By

Published : Dec 2, 2020, 4:21 PM IST

ದಾವಣಗೆರೆ: ಚುನಾವಣೆ ಆಯೋಗ ಗ್ರಾಮ ಪಂಚಾಯತಿ ಚುನಾವಣೆ ಘೋಷಣೆ ಮಾಡಿದ್ದು, ಚುನಾವಣೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆಯೆಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.

ಗ್ರಾಮ ಪಂಚಾಯತಿ ಚುನಾವಣೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ: ಡಿಸಿ ಮಹಾಂತೇಶ್ ಬೀಳಗಿ

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದಾವಣಗೆರೆ ಜಿಲ್ಲೆಯಲ್ಲಿ 191 ಗ್ರಾಮ ಪಂಚಾಯತಿಗಳಿದ್ದು, ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ 89 ಗ್ರಾ.ಪಂ. ಚುನಾವಣೆ ನಡೆಯಲಿದೆ. ಎರಡನೇ ಹಂತದಲ್ಲಿ 102 ಪಂಚಾಯತಿಗಳಿಗೆ ಚುನಾವಣೆ ನಿಗದಿ ಮಾಡಲಾಗಿದೆ. ಒಟ್ಟು 8,37,727 ಮತದಾರರಿದ್ದು, 42,3482 ಪುರುಷರು ಹಾಗೂ 41,4,243 ಮಹಿಳೆಯರಿದ್ದಾರೆ ಎಂದರು.

ಶಾಂತಿ ಹಾಗೂ ಸುವ್ಯವಸ್ಥೆ ಬಗ್ಗೆ ಅಧಿಕಾರಿಗಳ ಜೊತೆ ಈಗಾಗಲೇ ಸಭೆ ನಡೆಸಲಾಗಿದ್ದು, ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳ ಮೇಲೆ ಎಸ್​ಪಿಯವರು ವಿಶೇಷ ಗಮನ ಹರಿಸಲಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲಾಗಿದೆ. ಜೊತೆಗೆ ಕೋವಿಡ್ ನಿಯಮಾವಳಿ ಹಾಗೂ ನೀತಿ ಸಂಹಿತೆ ನಿರ್ದೇಶನ ಉಲ್ಲಂಘನೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.