ದಾವಣಗೆರೆ: ನಗರದ ಎಸ್‌ಪಿ ಕಚೇರಿಯಲ್ಲಿ ಇ-ಕಚೇರಿಯನ್ನು ಜಿಲ್ಲಾಧಿಕಾರಿ ಮಹಾಂತೇಶ್ ಬಿಳಗಿ ಹಾಗೂ ಎಸ್‌ಪಿ ಹನುಮಂತರಾಯ ಉದ್ಘಾಟಿಸಿದರು.
ಜಿಲ್ಲಾ ಪೋಲೀಸ್ ಇಲಾಖೆ ಇಂದಿನಿಂದ ಸಾರ್ವಜನಿಕರಿಗೆ ಹಾಗೂ ದೂರುದಾರರಿಗೆ ಉತ್ತಮ ಸೇವೆ ನೀಡಲು ಇ- ಕಚೇರಿ ಆರಂಭಿಸಲಾಗಿದ್ದು, ಇಂದಿನಿಂದ ದೂರುದಾರರು ತಮ್ಮ ದೂರು ಹಾಗೂ ಇನ್ನಿತರ ಮಾಹಿತಿಯನ್ನು ಇ-ಕಚೇರಿಯಲ್ಲಿ ಅರ್ಜಿ ನೀಡಿ ತಮ್ಮ ಮೊಬೈಲ್ನಲ್ಲಿ ಎಸ್‌ಎಂಎಸ್ ಮೂಲಕ ಮಾಹಿತಿ ಪಡೆಯಬಹುದಾಗಿದೆ.
ಯಾವುದೇ ಹಂತದ ವಿಚಾರಣೆ, ದೂರು ಹಾಗೂ ಮಾಹಿತಿಯನ್ನು ಸಾರ್ವಜನಿಕರಿಗೆ ಸುಲಭವಾಗಿ ತಲುಪಿಸಲು ಜನಸ್ನೇಹಿಯಾದ ಪೊಲೀಸ್ ಸೇವೆ ನೀಡಲು ಇ-ಕಚೇರಿ ಇಂದಿನಿಂದ ಕಾರ್ಯಾರಂಭ ಮಾಡಿದೆ.