ETV Bharat / state

ದಾವಣಗೆರೆ ಪೊಲೀಸರ ಭರ್ಜರಿ ಬೇಟೆ: ಕಳ್ಳತನವಾದ ಕೇವಲ 6 ತಾಸಿನಲ್ಲಿ ಆರೋಪಿ ಅರೆಸ್ಟ್ - ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ಖದೀಮ

ದಾವಣಗೆರೆಯ ಪೊಲೀಸರ ಭರ್ಜರಿ ಕಾರ್ಯಾಚರಣೆ. ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ಖದೀಮನನ್ನು ಕೇವಲ 6 ತಾಸಿನಲ್ಲಿ ಹೆಡೆಮುರಿ ಕಟ್ಟಿದ್ದಾರೆ.

Davangere Police arrested thief with in six hours
ದಾವಣಗೆರೆಯ ಪೊಲೀಸರ ಭರ್ಜರಿ ಕಾರ್ಯಾಚರಣೆ: ಕಳ್ಳತನ ಆರೋಪಿ ಬಂಧನ
author img

By

Published : Oct 30, 2022, 3:21 PM IST

ದಾವಣಗೆರೆ: ನಗರದ ದೇವರಾಜ್ ಅರಸ್ ಬಡಾವಣೆಯಲ್ಲಿ ಕಳೆದ ದಿ‌ನ ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ಖದೀಮನನ್ನು ಕೇವಲ 6 ತಾಸಿನಲ್ಲಿ ಪತ್ತೆ ಹಚ್ಚುವಲ್ಲಿ ಇಲ್ಲಿನ ಪೊಲೀಸರು ಯಶಸ್ವಿಯಾಗಿದ್ದಾರೆ. ಅವಿನಾಶ್ (30) ಬಂಧಿತ ಆರೋಪಿ.

ದಾವಣಗೆರೆ ವಿಶ್ವವಿದ್ಯಾನಿಲಯದ ಡೆಪ್ಯೂಟಿ ರಿಜಿಸ್ಟರ್ ಶಾಂತಕುಮಾರ್ ಅವರ ಮನೆಯಲ್ಲಿ ಶನಿವಾರ ಕಳ್ಳತನ ನಡೆದಿತ್ತು. ಮನೆಯ ಇಂಟರ್ ಲಾಕ್ ತೆಗೆದು ಅಪಾರ ಪ್ರಮಾಣದ ಹಣ ಹಾಗೂ ಚಿನ್ನಾಭರಣ ದೋಚಿ ಆರೋಪಿ ಪರಾರಿಯಾಗಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತನಿಂದ 110 ಗ್ರಾಂ ಬಂಗಾರ, 33 ಗ್ರಾಂ ಬೆಳ್ಳಿ ಹಾಗೂ ನಗದು ವಶಕ್ಕೆ ಪಡೆಯಲಾಗಿದೆ. ಸಿಪಿಐ ಗುರುಬಸವರಾಜ್ ನೇತೃತ್ವದ ತಂಡದಿಂದ ಕಾರ್ಯಾಚರಣೆ ನಡೆದಿದೆ. ಈ ಸಂಬಂಧ ಬಸವನಗರ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕ್ಷಮಾಪಣೆ ಚೀಟಿಯೊಂದಿಗೆ ಜೈನ ಮಂದಿರಕ್ಕೆ ಕದ್ದ ಮಾಲು ಹಿಂದಿರುಗಿಸಿದ ಕಳ್ಳ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.