ETV Bharat / state

ಖಾಸಗಿ ಮೆಡಿಕಲ್ ಸೆಂಟರ್​​ಗೆ ದಾವಣಗೆರೆ ಡಿಸಿ ದಿಢೀರ್ ಭೇಟಿ - ಸಿಟಿ ಸ್ಕ್ಯಾನ್ ವ್ಯವಸ್ಥೆ ಪರಿಶೀಲಿಸಿದ ಜಿಲ್ಲಾಧಿಕಾರಿ

ದಾವಣಗೆರೆಯ ಖಾಸಗಿ ಮೆಡಿಕಲ್ ಸೆಂಟರ್​​ಗೆ ಭೇಟಿ ನೀಡಿದ ಅಧಿಕಾರಿಗಳು ಸಿಟಿ ಸ್ಕ್ಯಾನ್ ವ್ಯವಸ್ಥೆಯ ಪರಿಶೀಲನೆ ನಡೆಸಿದರು.

Davangere DC visits to private medical centers
ಮೆಡಿಕಲ್ ಸೆಂಟರ್​​ಗೆ ದಾವಣಗೆರೆ ಡಿಸಿ ದಿಢೀರ್ ಭೇಟಿ
author img

By

Published : May 6, 2021, 7:09 AM IST

ದಾವಣಗೆರೆ: ಸಿಟಿ ಸ್ಕ್ಯಾನ್​ಗೆ ಜನರಿಂದ ಹೆಚ್ಚು ಹಣ ಪೀಕುತ್ತಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ, ಅಧಿಕಾರಿಗಳು ನಗರದ ಖಾಸಗಿ ಮೆಡಿಕಲ್ ಸೆಂಟರ್​​ಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಹೆಗಡೆ ಡಯಾಗ್ನಸ್ಟಿಕ್ ಸೆಂಟರ್​ಗೆ ಭೇಟಿ ನೀಡಿ ಸಿಟಿ ಸ್ಕ್ಯಾನ್ ಬಗ್ಗೆ ಪರಿಶೀಲನೆ ನಡೆಸಿದರು. ರೋಗಿಗಳು ಮತ್ತವರ ಸಂಬಂಧಿಕರೊಂದಿಗೆ ಮಾತನಾಡಿ, ನಿಗದಿತ ದರ ಪಡೆಯುತ್ತಿದ್ದಾರೆಯೇ ಎಂದು ವಿಚಾರಿಸಿದರು. ಅಲ್ಲದೆ, ಸರ್ಕಾರದ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಹಣ ಪಡೆಯದಂತೆ ಮೆಡಿಕಲ್ ಸೆಂಟರ್ ಮುಖ್ಯಸ್ಥರಿಗೆ ಸೂಚನೆ ನೀಡಿದರು.

ಇದನ್ನೂ ಓದಿ : ದಾವಣಗೆರೆ: ಜೈನ ಸಮುದಾಯದಿಂದ ಕೋವಿಡ್ ಕೇರ್ ಸೆಂಟರ್ ಆರಂಭ

​​ದರ ವಿವರದ ಬೋರ್ಡ್​ ವೀಕ್ಷಿಸಿದ ಡಿಸಿ, ಪ್ರತಿ ಸ್ಕ್ಯಾನ್ ಆದ ನಂತರ ಸ್ಯಾನಿಟೈಸ್ ಮಾಡಿ ಮುಂದಿನ ಪರೀಕ್ಷೆ ನಡೆಸುವಂತೆ ತಾಕೀತು ಮಾಡಿದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.