ETV Bharat / state

ದಾವಣಗೆರೆಯಲ್ಲಿ ನಾಳೆ ನಡೆಯಬೇಕಿದ್ದ ಎಸ್​​ಡಿಪಿಐ ಸಮಾವೇಶ ರದ್ದು: 144 ಸೆಕ್ಷನ್ ಜಾರಿ - ದಾವಣಗೆರೆಯಲ್ಲಿ 144 ಸೆಕ್ಷನ್

ನಾಳೆ ದಾವಣಗೆರೆಯಲ್ಲಿ ನಡೆಯಬೇಕಿದ್ದ ಎಸ್​​ಡಿಪಿಐ ಜನಾಧಿಕಾರ ಸಮಾವೇಶ ರದ್ದುಗೊಂಡಿದೆ. ಸಮಾವೇಶ ರದ್ದುಗೊಳಿಸುವಂತೆ ಅಯೋಜಕರಿಗೆ ಜಿಲ್ಲಾಧಿಕಾರಿ ಹಾಗೂ ಎಸ್​ಪಿ ಸೂಚಿಸಿದ್ದಾರೆ.

davanagere-sdpi-convention-canceled
ದಾವಣಗೆರೆಯಲ್ಲಿ ನಾಳೆ ನಡೆಯಬೇಕಿದ್ದ ಎಸ್​​ಡಿಪಿಐ ಸಮಾವೇಶ ರದ್ದು
author img

By

Published : Jun 11, 2022, 5:19 PM IST

Updated : Jun 11, 2022, 5:50 PM IST

ದಾವಣಗೆರೆ: ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಆಕ್ಷೇಪಾರ್ಹ ಹೇಳಿಕೆಯಿಂದ‌ ಉದ್ವಿಗ್ನ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ನಾಳೆ ನಗರದಲ್ಲಿ ನಡೆಯಬೇಕಿದ್ದ ಎಸ್​​ಡಿಪಿಐ ಜನಾಧಿಕಾರ ಸಮಾವೇಶವನ್ನು ರದ್ದುಗೊಳಿಸಲಾಗಿದೆ. ಸಮಾವೇಶ ರದ್ದು ಮಾಡುವಂತೆ ಅಯೋಜಕರಿಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹಾಗೂ ಎಸ್​ಪಿ ಸಿ ಬಿ ರಿಷ್ಯಂತ್ ಸೂಚನೆ ನೀಡಿದ್ದಾರೆ.

ನಗರದ ಮಗಾನಹಳ್ಳಿ ರಸ್ತೆಯಲ್ಲಿರುವ ಮಿಲ್ಲತ್ ಮೈದಾನದಲ್ಲಿ ನಾಳೆ ಸಮಾವೇಶ ಹಮ್ಮಿಕೊಳ್ಳಲಾಗಿತ್ತು.‌ ಆದರೆ ನೂಪುರ್ ಶರ್ಮಾ ಹೇಳಿಕೆ ಖಂಡಿಸಿ ಪ್ರತಿಭಟನೆಗಳು ‌ನಡೆಯುತ್ತಿರುವಾಗ ಸಮಾವೇಶ ನಡೆಸುವುದು ಸೂಕ್ತವಲ್ಲ ಎಂದು ಪೊಲೀಸ್​ ಇಲಾಖೆ ಅವಕಾಶ ನೀಡದೆ ರದ್ದುಗೊಳಿಸಿದೆ. ತಮ್ಮ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಎಸ್​ಡಿಪಿಐ ಮುಖಂಡರನ್ನು ಎಸ್​​ಪಿ ಮನವೊಲಿಸಿದ್ದಾರೆ.

ಎಸ್​​ಡಿಪಿಐ ಸಮಾವೇಶ ರದ್ದತಿ ಬಗ್ಗೆ ಎಸ್​ಪಿ ಮಾಹಿತಿ

144 ಸೆಕ್ಷನ್: ಜಿಲ್ಲೆಯಲ್ಲಿ ಅಹಿತಕರ ಘಟನೆ‌ ನಡೆಯದಂತೆ ದಾವಣಗೆರೆ ಜಿಲ್ಲಾಡಳಿತದಿಂದ 144 ಸೆಕ್ಷನ್ ಜಾರಿ ಮಾಡಲಾಗಿದ್ದು, ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಇಂದು ಸಂಜೆ 06ರಿಂದ ನಾಳೆ ರಾತ್ರಿ 10 ಗಂಟೆವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಭೆ ಸಮಾರಂಭ, ಜನರು ಗುಂಪು ಸೇರದಂತೆ ತಾಕೀತು ಮಾಡಿದ್ದಾರೆ.

ಇದನ್ನೂ ಓದಿ: ಕುಟುಂಬದ ಎಲ್ಲ ಸದಸ್ಯರು ಸಾಮೂಹಿಕ ಆತ್ಮಹತ್ಯೆ.. ಅದೃಷ್ಟವಶಾತ್​ ಬದುಕುಳಿದ ಬಾಲಕಿ

Last Updated : Jun 11, 2022, 5:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.