ದಾವಣಗೆರೆ: ಮುಂಗಾರು ಪೂರ್ವ ಮಳೆಗೆ ದಾವಣಗೆರೆ ಜಿಲ್ಲೆಯ ಜನರು ಹೈರಾಣಾಗಿದ್ದಾರೆ. ಎಡಬಿಡದೆ ಸುರಿಯುತ್ತಿರುವ ವರ್ಷಧಾರೆಗೆ ಗ್ರಾಮೀಣ ಭಾಗದಲ್ಲಿ ಮನೆ-ಮಠ ಕಳೆದುಕೊಂಡು ದಿಕ್ಕು ತೋಚದಂತಾಗಿದೆ. ಹೀಗಾಗಿ ಟ್ಯಾಕ್ಟರ್ಗಳಲ್ಲಿ ಬೇರೆಡೆ ಮಕ್ಕಳ ಸಮೇತವಾಗಿ ಸ್ಥಳಾಂತರವಾಗುತ್ತಿದ್ದಾರೆ.
ಹರಿಹರದ ಸಲಗನಹಳ್ಳಿ ಸೇರಿದಂತೆ ಹಲವೆಡೆ ಬೆಳೆ ಮುಳುಗಡೆಯಾಗಿದ್ದು, ನಿರಂತರವಾಗಿ ಸುರಿದ ಬಾರಿ ಮಳೆಗೆ ಗ್ರಾಮದ ಜನ ಜೀವನ ಕಂಗಾಲಾಗಿದೆ. ಅಲ್ಲದೇ, ಭಾನುವಳ್ಳಿ, ಎಕ್ಕೆಗುಂದಿ ಗ್ರಾಮದ ರಸ್ತೆ ಸಂಪರ್ಕ ಕಲ್ಪಿಸುವ ನೂತನ ರಸ್ತೆ ಕಾಮಗಾರಿ ಹಾಗೂ ಸೇತುವೆ ನಿರ್ಮಿಸುತ್ತಿದ್ದು, ತಾತ್ಕಾಲಿಕವಾಗಿ ನಿರ್ಮಾಣ ಮಾಡಿದ್ದ ಸೇತುವೆ ಕೊಚ್ಚಿಹೋಗಿದೆ.
ಹೀಗಾಗಿ ಭಾನುವಳ್ಳಿಯ ಬಹುತೇಕ ಮನೆಗಳಿಗೆ ನೀರು ನುಗ್ಗಿ, ಜನರು ಇಡೀ ರಾತ್ರಿ ಜಾಗರಣೆ ಮಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಮನೆಯಲ್ಲಿದ್ದ ಸಾಮಗ್ರಿಗಳು ಕೂಡ ನೀರು ಪಾಲಾಗಿ ಸಂಕಷ್ಟಕ್ಕೆ ಸಿಲುಕುವಂತೆ ಆಗಿದೆ. ದೇವರಬೆಳಕೆರೆ ಗ್ರಾಮದಲ್ಲೂ ಮಳೆ ಆರ್ಭಟಕ್ಕೆ ಮನೆಗಳು ನೆಲಸಮವಾಗಿವೆ.
ಇದನ್ನೂ ಓದಿ: ರಾಜ್ಯಾದ್ಯಂತ ಇನ್ನೂ ಎರಡು ದಿನ ಮಳೆ