ETV Bharat / state

ಟಗರು ಕಾಳಗಕ್ಕೆ ದಾವಣಗೆರೆ ಹಾಟ್ ಸ್ಪಾಟ್.. ರೋಚಕ ಹೋರಾಟಕ್ಕೆ ಸಾಕ್ಷಿಯಾದ ಪ್ರೇಕ್ಷಕರು! - ETv Bharat news

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ತ್ಯಾವಣಗಿ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ನಿಮಿತ್ತ ಸ್ಥಳೀಯ ಗೆಳೆಯರ ಬಳಗದಿಂದ‌ ರಾಜ್ಯಮಟ್ಟದ ಗ್ರಾಮೀಣ ಕ್ರೀಡೆ ಆಯೋಜಿಸಲಾಗಿತ್ತು. ಇಲ್ಲಿ ಟಗರು ಕಾಳಗದಲ್ಲಿ ಕೊಬ್ಬುತುಂಬಿದ ಕುರಿಗಳು ಗೆಲ್ಲಲು ಸೆಣಸಾಟ ನಡೆಸಿದವು.‌

davanagere is a hot spot for sheep fighting
ಟಗರು ಕಾಳಗಕ್ಕೆ ದಾವಣಗೆರೆ ಹಾಟ್ ಸ್ಪಾಟ್
author img

By

Published : Nov 14, 2022, 4:51 PM IST

ದಾವಣಗೆರೆ: ಟಗರು ಕಾಳಗ ನೋಡುವುದೇ ಒಂದು ಕ್ರೇಜ್,‌ ಯುವಕರು ವಯಸ್ಕರು ಎನ್ನದೇ ಎಲ್ಲರೂ ಟಗರು ಕಾಳಗವನ್ನು ಕಣ್ತುಂಬಿಕೊಳ್ಳುವುದೇ ವಿಶೇಷವಾಗಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ತ್ಯಾವಣಗಿ ಗ್ರಾಮದಲ್ಲಿ ನಡೆದ ಕಟಗರು ಕಾಳಗದಲ್ಲಿ ಕೊಬ್ಬು ತುಂಬಿದ ಕುರಿಗಳು ಗೆಲ್ಲಲು ಸೆಣಸಾಟ ನಡೆಸಿದವು.‌

ಕನ್ನಡ ರಾಜ್ಯೋತ್ಸವ ನಿಮಿತ್ತ ಸ್ಥಳೀಯ ಗೆಳೆಯರ ಬಳಗದಿಂದ‌ ರಾಜ್ಯಮಟ್ಟದ ಗ್ರಾಮೀಣ ಕ್ರೀಡೆ ಆಯೋಜಿಸಲಾಗಿತ್ತು. ಟಗರು ಕಾಳಗದ ಸೆಣಸಾಟಕ್ಕೆ ಇಡೀ ಜನ ಫಿದಾ ಆದರು. ದಾವಣಗೆರೆ, ಬಾಗಲಕೋಟೆ, ಹಾವೇರಿ, ಗದಗ, ಶಿವಮೊಗ್ಗ, ಸೇರಿದಂತೆ ಚಿತ್ರದುರ್ಗದಿಂದ ಆಗಮಿಸಿದ್ದ ಟಗರುಗಳು ಕಾದಾಟದಲ್ಲಿ ಪಾಲ್ಗೊಂಡಿದವು. ‌ಹಾಲು ಹಲ್ಲು, ಎರಡು, ಮೂರು, ಹಾಗು ನಾಲ್ಕು ಹಲ್ಲು ಸೇರಿದ್ದಂತೆ ಆರು ಹಲ್ಲು ಎಂಟು ಹಲ್ಲಿನ‌ ಟಗರುಗಳು ಕಾಳಗದಲ್ಲಿ ತಲೆಗೆ ತಲೆಕೊಟ್ಟು ಅದ್ಭುತ ಪ್ರದರ್ಶನ ನೀಡಿದವು.

ಟಗರು ಕಾಳಗಕ್ಕೆ ದಾವಣಗೆರೆ ಹಾಟ್ ಸ್ಪಾಟ್: ಇಲ್ಲಿ ನಡೆಯುವ ಟಗರು ಕಾಳಗ ಇಡೀ ರಾಜ್ಯದಲ್ಲಿ ಹೆಸರುವಾಸಿ. ಆದರೆ, ಟಗರುಗಳ ಸಾಕಣೆ ಪ್ರಮಾಣ ಕಡಿಮೆ ಆಗಿದ್ದರಿಂದ ಗ್ರಾಮೀಣ ಸ್ಪರ್ಧೆ ಟಗರು ಕಾಳಗ ಕಮ್ಮಿ ಆಗಿಲ್ಲ, ದಾವಣಗೆರೆಯಲ್ಲಿ ಮಾತ್ರ ಸಾಕಷ್ಟು ಜನ ಟಗರುಗಳನ್ನು ಸಾಕುವ ಮೂಲಕ ಅದಕ್ಕೆ ಟ್ರೈನಿಂಗ್ ನೀಡಿ ಕಣಕ್ಕೆ ಇಳಿಸುತ್ತಾರೆ.

ಹೀಗೆ ಸೆಣಸಾಟ ನಡೆಸುವ ಟಗರುಗಳು ಮೈದಾನದಲ್ಲಿ ಪರಸ್ಪರ ಗೆಲುವಿಗೆ ಹೋರಾಡುತ್ತವೆ. ಇದಲ್ಲದೇ ಕಾಳಗದಲ್ಲಿ ಮಾಲೀಕನ ಆಜ್ಞೆಯಂತೆ ಟಗರು ಎದುರಾಳಿ ಟಗರಿನ ವಿರುದ್ಧ ತಮ್ಮ ಶಕ್ತಿ ಪ್ರದರ್ಶನ ಮಾಡುತ್ತಿದ್ದವು.

ಮೈದಾನಕ್ಕೆ ಇಳಿದ ನೂರಕ್ಕು ಹೆಚ್ಚು ಟಗರುಗಳು ತ್ಯಾವಣಿಗೆ ಗ್ರಾಮದಲ್ಲಿ ಇಂದು ಬೆಳಿಗ್ಗೆ ನಡೆದ ಟಗರು ಕಾಳಗದಲ್ಲಿ ತಮ್ಮ ಶಕ್ತಿ ಪ್ರದರ್ಶನ ಮಾಡಿ ಗೆಲುವು ಸಾಧಿಸಲು ತೀವ್ರ ಪೈಪೋಟಿ ನಡೆಸಿದವು. ವಿವಿಧ ರಾಜ್ಯದಿಂದ ಆಗಮಿಸಿದ್ದಾ 100 ಕ್ಕೂ ಹೆಚ್ಚು ಟಗರುಗಳು ಎರಡರಿಂದ ಎಂಟು ಹಲ್ಲುಗಳ ಟಗರುಗಳು ಸೆಣಸಾಟ ನಡೆಸಿದವು.

ಒಟ್ಟು ನಾಲ್ಕು ವಿಭಾಗದಲ್ಲಿ ಗೆದ್ದ ಟಗರುಗಳಿಗೆ ಪ್ರಥಮ ಮತ್ತು ದ್ವಿತೀಯ, ತೃತೀಯ, ಆಕರ್ಷಕ ಟ್ರೋಫಿ ನೀಡುವ ಜತೆಗೆ ಆರು ಮತ್ತು ಎಂಟು ಹಲ್ಲಿನ ಟಗರುಗಳಿಗೆ ಮೊದಲ ಬಹುಮಾನವಾಗಿ 2000 ದಿಂದ 41,000 ಸಾವಿರ ರೂಪಾಯಿ ತನಕ ಟಗರು ಮಾಲೀಕರಿಗೆ ಬಹುಮಾನ ನೀಡಲಾಗುವುದು ಎಂದು ಆಯೋಜಕರು ಹೇಳಿದರು.

ಮೈದಾನಕ್ಕಿಳಿದ ಟಗರುಗಳ ಹೆಸರು ಮಾತ್ರ ವಿಚಿತ್ರ: ಮೈದಾನಕ್ಕಿಳಿದಿದ್ದ ಟಗರುಗಳ ಹೆಸರುಗಳು ಮಾತ್ರ ಯುವಕರನ್ನು ಆಕರ್ಷಿಸುವಂತಿದ್ದವು. ಹಟಿಂಗ್ ರಾಕ್ಷಸ, ಕಂದಗಲ್ ಮಾರಿ, ತ್ಯಾವಣಿಗೆ ಬಿಲ್ಲಾ, ಕುಡುಕು - 03, ದುರ್ಗದ ಹುಲಿ, ಒಂಟಿಸಲಗ, ಹಂಟಿಂಗ್ ಅಪ್ಪು ಹೀಗೆ ಒಂದಾ ಎರಡಾ ಟಗರುಗಳ ಹೆಸರು ಮಾತ್ರ ವಿಚಿತ್ರವಾಗಿದ್ದವು.

ಹತ್ತಾರು ಹೆಸರುಗಳನ್ನು ಇಟ್ಟುಕೊಂಡ ಟಗರು ಸ್ಪರ್ಧೆಯಲ್ಲಿ ಸೆಣಸಾಟ ನಡೆಸಿದವು. ಅದರಲ್ಲೂ ಮಾರಿಕಾಂಬ ಹಾಗೂ ಚೌಡೇಶ್ವರಿ, ದುರ್ಗದ ಹುಲಿ, ಕಂದಗಲ್ ಮಾರಿ ನಡುವೆ ನಡೆದ ಟಗರಿನ ಕಾಳಗ ನೋಡಲು ರೋಮಾಂಚನವಾಗಿತ್ತು.

ಇದನ್ನೂ ಓದಿ: ವಿಜಯಪುರ: ಎದುರಾಳಿಯ ಡಿಚ್ಚಿಗೆ ಕಾಳಗದ ಅಖಾಡದಲ್ಲೇ ಪ್ರಾಣ ಬಿಟ್ಟ ಎರಡು ಟಗರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.