ETV Bharat / state

ಜಿಲ್ಲಾ ಕೇಂದ್ರದಲ್ಲೇ ಮೂಲ ಸೌಕರ್ಯಗಳಿಂದ ಜನ ವಂಚಿತ.. ಶೌಚಾಲಯವಾದರೂ ಮಾಡಿಕೊಡುವಂತೆ ಅಳಲು - ಈಟಿವಿ ಭಾರತ್​ ಕರ್ನಾಟಕ

ದಾವಣಗೆರೆಯ ಮೂವತ್ತನೇ ವಾರ್ಡ್​ ಹೊಸಚಿಕ್ಕನಹಳ್ಳಿಗೆ 76 ಮನೆಗಳಿಗೆ ಅಗತ್ಯ ಮೂಲ ಸೌಕರ್ಯಗಳೇ ಇಲ್ಲದೇ ಒದ್ದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ವಾರ್ಡ್​ ನಿರ್ಮಾಣವಾಗಿ 20ವರ್ಷವಾದರೂ ಒಂದೇ ಒಂದು ಶೌಚಾಲಯ ಇಲ್ಲದಿರುವುದು ವಿಪರ್ಯಾಸ.

Davanagere 30th ward dont  have Basic needs
ಸೌಕರ್ಯದಿಂದ ವಂಚಿತವಾಗಿರುವ ಹೊಸಚಿಕ್ಕನಹಳ್ಳಿ
author img

By

Published : Sep 10, 2022, 12:00 PM IST

ದಾವಣಗೆರೆ: ಅವರು ಕಾಲುವೆ ಮೇಲೆ ಜೀವನ ಸಾಗಿಸ್ತಾ ಬದುಕು ಕಟ್ಟಿಕೊಂಡ ಬಡ ದಲಿತ ಕುಟುಂಬಗಳು.. ಕಳೆದ ಇಪ್ಪತ್ತು ವರ್ಷಗಳ ಹಿಂದೆ ಅಧಿಕಾರಿಗಳು ಅವರಿಗೆ 76 ಮನೆಗಳನ್ನು ನೀಡಿದ್ದರು. ಆದರೆ ಮೂಲಭೂತ ಸೌಲಭ್ಯಗಳನ್ನು ನೀಡುವಲ್ಲಿ ಎಡವಿದ್ದಾರೆ. ಮಹಾನಗರ ಪಾಲಿಕೆ ವ್ಯಾಪ್ತಿಗೆ ಬಂದು ಇಪ್ಪತ್ತು ವರ್ಷಗಳು ಕಳೆದರು ರಸ್ತೆ, ನೀರು, ಶೌಚಾಲಯದಂತಹ ಮೂಲಭೂತ ಸೌಲಭ್ಯಗಳಿಲ್ಲದೆ ಅಲ್ಲಿನ ಜನರ ಜೀವನ ಅಯೋಮಯವಾಗಿದೆ.

ದಾವಣಗೆರೆಯಿಂದ ಕೂಗಳತೆಯಲ್ಲಿರುವ ಹೊಸಚಿಕ್ಕನಹಳ್ಳಿಯಲ್ಲಿ ಹಿಂದುಳಿದ ಸಮುದಾಯಕ್ಕೆ‌ ಸೇರಿದ‌ ಜನರ ಜೀವನ ತೀರಾ ಸಂಕಷ್ಟದಲ್ಲಿದೆ. ಕಾಲುವೆ ಮೇಲೆ ಜೀವನ ಸಾಗಿಸುತ್ತ ಬದುಕು ಕಟ್ಟಿಕೊಂಡಿದ್ದ ಜನರಿಗೆ ಅಂದಿನ ಜಿಲ್ಲಾಧಿಕಾರಿ ಕೆ ಶಿವರಾಂ ಅವರು ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಮೂವತ್ತನೇ ವಾರ್ಡಿನ ಹೊಸಚಿಕ್ಕನಹಳ್ಳಿಯಲ್ಲಿ 76 ನಿವೇಶನಗಳನ್ನು ನೀಡಿದ್ದರು.‌

ಕುಡಿಯಲು ನೀರಿಲ್ಲ.. ಆದರೆ ಎರಡು ದಶಕಗಳು ಕಳೆದರೂ ಕೂಡ ಆ ಕಾಲೋನಿಗೆ ಮೂಲ‌ಭೂತ ಸೌಲಭ್ಯಗಳನ್ನು ನೀಡುವಲ್ಲಿ ಅಧಿಕಾರಿ‌ ವರ್ಗ ಎಡವಿದೆ. ದುರದೃಷ್ಟ ಅಂದರೆ ಗ್ರಾಮದಲ್ಲಿರುವ ರಸ್ತೆಗಳು ಡಾಂಬರ್ ಕಾಣದೆ ಎಲ್ಲಿ ನೋಡಿದರೂ ಕೆಸರುಮಯವಾಗಿದೆ. 20 ವರ್ಷಗಳು ಉರುಳಿದರು ಕೂಡ 76 ಮನೆಗಳಿಗೆ ಮೂರು ನೀರಿನ ನಳ್ಳಿಗಳು ಮಾತ್ರ ಇವೆ. ನೀರಿಗಾಗಿ ಹಾಹಾಕಾರ ಕೂಡ ತಲೆದೋರಿದೆ. ನಳಗಲ್ಲಿ ನೀರು ಬಂದರೂ ಕೂಡ ಅದು ಕುಡಿಯಲು ಯೋಗ್ಯವಾಗಿಲ್ಲವಂತೆ. ಹೀಗಾಗಿ ಎರಡು ಕಿಲೋ ಮೀಟರ್​ ದೂರ‌ ತೆರಳಿ ನೀರು ತರುವ ಪರಿಸ್ಥಿತಿ ನಿರ್ಮಾಣ ಆಗಿದೆ.

ಜಿಲ್ಲಾ ಕೇಂದ್ರದಲ್ಲೇ ಮೂಲ ಸೌಕರ್ಯಗಳಿಂದ ಜನ ವಂಚಿತ

ಹೊಲ ಗದ್ದೆಗಳಲ್ಲೇ ಶೌಚ.. ಈ ವಾರ್ಡ್​ಗೆ ಶೌಚಾಲಯ ಇಲ್ಲದೆ ಬೇರೆಯವರ ಹೊಲ ಗದ್ದೆಗಳಲ್ಲೇ ಶೌಚ ಮಾಡುತ್ತಿರುವುದು ವಿಪರ್ಯಾಸವಾಗಿದೆ. ವಾಸಿಸಲು ಜಾಗ ಏನೋ ನೀಡಿದ್ದಾರೆ. ಆದರೆ ಅಲ್ಲಿ ಜೀವನ ನಡೆಸಲು ಮೂಲಭೂತ ಸೌಕರ್ಯಗಳಿಲ್ಲದೇ ನರಳುವಂತಾಗಿದೆ. ರಸ್ತೆ ಡಾಂಬರೀಕರಣ ಆಗದೇ ಇರುವುದರಿಂದ ಮಳೆ ಬಂದರೆ ಸಂಪೂರ್ಣ ಹಾಳಾಗಿ ಕೆಸರುಮಯವಾಗುತ್ತದೆ. ಮಳೆ ಬಂದರೆ ವಾರ್ಡ್​ ಸಂಪರ್ಕವನ್ನೇ ಕಳೆದುಕೊಳ್ಳುತ್ತದೆ. ಇದರಿಂದ ಮಕ್ಕಳು ಶಾಲೆಗೆ ಹೋಗಲಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು : ಇದೆ ವೇಳೆ ಹೊಸಚಿಕ್ಕನಹಳ್ಳಿಗೆ ಭೇಟಿ ನೀಡಿದ್ದ ದಾವಣಗೆರೆ ತಹಶಿಲ್ದಾರ್ ಬಸನಗೌಡ ಕೊಟ್ಟೂರು ಮಾತನಾಡಿ, ಜಿಲ್ಲಾಧಿಕಾರಿ ಆದೇಶದ ಮೇರೆಗೆ ಸ್ಥಳ ಪರಿಶೀಲನೆ ಮಾಡಿದ್ದೇವೆ. ರಸ್ತೆ, ಕಾಲುವೆ, ಕುಡಿಯುವ ನೀರಿನ ಕೊರತೆ ಇದೆ. 2007-08 ರಲ್ಲಿ ಇವರಿಗೆ ಹಕ್ಕು ಪತ್ರ ನೀಡಿದ್ದು, ಅಲ್ಲಿಂದ ಇಲ್ಲಿತನಕ ಮೂಲಭೂತ ಸೌಕರ್ಯ ಸಿಕ್ಕಿಲ್ಲ. ಇದನ್ನು ಜಿಲ್ಲಾಧಿಕಾರಿ ಶಿವಾನಂದ ಕಪಾಶಿಯವರ ಗಮನಕ್ಕೆ ತಂದು ಸರಿಪಡಿಸುವ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

ವಾರ್ಡ್​ಗೆ ಅಗತ್ಯ ಸೌಲಭ್ಯಗಳ ಕುರಿತು ಬಹಳ ವರ್ಷಗಳಿಂದ ಜನರು ಅಧಿಕಾರಿಗಳ ಮುಂದೆ ಮನವಿ ಪತ್ರ ಇಟ್ಟರೂ ಅದು ಪ್ರತದಲ್ಲೇ ಉಳಿದಿದೆಯೇ ವಿನಃ ಕಾರ್ಯಕೂಪಕ್ಕೆ ಯಾವ ಅಧಿಕಾರಿಯೂ ಮುಂದಾಗಿಲ್ಲ ಎಂಬ ಆರೋಪಗಳು ಕೇಳಿಬರುತ್ತಲೇ ಇವೆ. ಇನ್ನಾದರೂ ಅಧಿಕಾರಿಗಳು ಇಲ್ಲಿನ ಜನರ ಸಮಸ್ಯೆ ಬಗೆಹರಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ : ಕಾರವಾರ: 3 ಕಿಲೋ ಮೀಟರ್​ ರಸ್ತೆಗಾಗಿ ಮನವಿ ಹಿಡಿದು 130ಕಿ.ಮೀ ದೂರ ಬಂದರೂ ಸಿಗದ ಸಚಿವರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.