ದಾವಣಗೆರೆ: ದಸರಾ ಧರ್ಮ ಸಮ್ಮೇಳನದ ಒಂಬತ್ತು ದಿನಗಳ ಕಾಲ ಶರನ್ನವರಾತ್ರಿ ಕಾರ್ಯಕ್ರಮ ಜರುಗಿದ್ದು, ಇಂದು ಸಮ್ಮೇಳನಕ್ಕೆ ತೆರೆ ಬಿದ್ದಿದೆ.
ಹತ್ತನೇ ದಿನವಾದ ಇಂದು ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದ್ದು, ಇದಕ್ಕೂ ಮುನ್ನ ನಗರದ ಹಳೇ ಪೇಟೆಯಲ್ಲಿ ಲೋಕ ಕಲ್ಯಾಣಾರ್ಥವಾಗಿ ರಂಬಾಪುರಿ ಜಗದ್ಗುರುಗಳು ಪೂರ್ಣ ಕುಂಬ ಹೊತ್ತು ಸಾಗಿದರು. ನಂತರ ವೀರಭದ್ರ ಸ್ವಾಮಿಗೆ ರಂಬಾಪುರಿ ಶ್ರೀಗಳು ಪೂಜೆ ಸಲ್ಲಿಸಿದರು.
ರಂಭಾಪುರಿ ಜಗದ್ಗುರುಗಳೊಂದಿಗೆ ನೂರಾರು ಮಹಿಳೆಯರು ಪೂರ್ಣಕುಂಬ ಹೊತ್ತು ಸಾಗಿದ್ದು, ಗಂಗಾ ಪೂಜೆ ಮಾಡಿ ಪೂರ್ಣಕುಂಬ ಹೊತ್ತು ಸಾಗಿದರೆ ಮಳೆ-ಬೆಳೆ, ಲೋಕ ಸುಭೀಕ್ಷವಾಗಿರುತ್ತದೆ ಎಂಬುದು ನಂಬಿಕೆ.