ದಾವಣಗೆರೆ: ಖಾಸಗಿ ಕಂಪನಿಯೊಂದರ ವಸ್ತುಗಳನ್ನು ಆನ್ಲೈನ್ ಮುಖೇನಾ ಖರೀದಿ ಮಾರಾಟ ಮಾಡಿದರೆ ಕಮಿಷನ್ ನೀಡುವ ಆಮಿಷ ಒಡ್ಡಿ ಅಪರಿಚಿತ ವ್ಯಕ್ತಿಯೊಬ್ಬ ಮಹಿಳೆಯೊಬ್ಬರಿಗೆ ಬರೋಬ್ಬರಿ 18.66 ಲಕ್ಷ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ದಾವಣಗೆರೆ ನಗರದ ಕೆಕೆ ಕಾಲೋನಿ ನಿವಾಸಿ ಜ್ಯೋತಿ ಎಂಬ ಮಹಿಳೆ ಹಣ ಕಳೆದುಕೊಂಡವರು.
ಹಣ ಕಳೆದುಕೊಂಡ ಜ್ಯೋತಿಯವರಿಗೆ ಈ ಹಿಂದೆ ಆರೋಪಿ ದೂರವಾಣಿ ಕರೆ ಮಾಡಿದ್ದಾನೆ. ಖಾಸಗಿ ಕಂಪನಿಯ ಹೆಸರು ಹೇಳಿ ಕಂಪನಿಯ ವಸ್ತುಗಳನ್ನು ಆನ್ಲೈನ್ನಲ್ಲಿ ಖರೀದಿ ಮಾಡಿ ಮಾರಾಟ ಮಾಡಿದರೆ ಕಮಿಷನ್ ನೀಡುವ ಆಮಿಷ ಒಡ್ಡಿದ್ದರು. ಕಮಿಷನ್ ಆಸೆಗೆ ಬಿದ್ದ ಜ್ಯೋತಿ ಹಣದ ಆಮಿಷಕ್ಕೆ ಒಳಗಾಗಿ ಬರೋಬ್ಬರಿ 18.66 ಲಕ್ಷವನ್ನು ಕಳೆದುಕೊಂಡಿದ್ದಾರೆ.
ಇನ್ನು ಆರೋಪಿ ತಾನು ಸಂಸ್ಥೆಯೊಂದರ ಮ್ಯಾನೇಜರ್ ಎಂದು ಹೇಳಿಕೊಂಡು ಕಮಿಷನ್ ಕೊಡುವುದಾಗಿ ನಂಬಿಸಿ ಜ್ಯೋತಿ ಅವರಿಂದ ಆನ್‌ಲೈನ್ ಮೂಲಕ ಆರೋಪಿ (ಹೆಸರು ತಿಳಿದು ಬಂದಿಲ್ಲ) ಜುಲೈ 01 ರಿಂದ ಜುಲೈ 11 ರ ತನಕ ಹಂತ ಹಂತವಾಗಿ 18.66 ಲಕ್ಷ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ. ಇನ್ನು ಆರಂಭದಲ್ಲಿ ಸ್ವಲ್ಪಮಟ್ಟಿಗೆ ಕಮಿಷನ್ ಹಣ ಎಂದು ಆರೋಪಿ ಜ್ಯೋತಿ ಅವರಿಗೆ ವರ್ಗಾವಣೆ ಮಾಡಿದ್ದಾನೆ ಎಂದು ಜ್ಯೋತಿಯವರು ದೂರು ನೀಡಿದ್ದಾರೆ. ಈ ಘಟನೆ ಸಂಬಂಧ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ನಿಶಾ ನರಸಪ್ಪ ವಿರುದ್ದ 30ಕ್ಕೂ ಹೆಚ್ಚು ಜನರಿಂದ ದೂರು: ಪುನೀತ್, ಶಿವರಾಜ್‌ಕುಮಾರ್ ಹೆಸರಲ್ಲೂ ವಂಚನೆ
48 ಸಾವಿರ ಕಳವು ಮಾಡಿದ ಚಾಲಾಕಿ ಕಳ್ಳ: ಗೃಹೋಪಯೋಗಿ ವಸ್ತುಗಳ ಮಾರಾಟದ ಅಂಗಡಿಯಲ್ಲಿ ಕಳ್ಳರು ಹಗಲು ಹೊತ್ತಿನಲ್ಲೇ ಕಳ್ಳತನ ಮಾಡಿರುವ ಘಟನೆ ದಾವಣಗೆರೆ ನಗರದ ಬಸವನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಜರುಗಿದೆ. ಬರೋಬ್ಬರಿ 48 ಸಾವಿರ ನಗದು ಹಾಗು 09 ಗ್ರಾಂ ಬಂಗಾರದ ಸರ ಕಳವು ಮಾಡಲಾಗಿದೆ. ಅಂಗಡಿಯ ಹೊರಗೆ ಬೇರೆಯವರೊಂದಿಗೆ ಮಾತನಾಡುತ್ತ ನಿಂತಿದ್ದಾಗ ಅಪರಿಚಿತ ವ್ಯಕ್ತಿಯು ಕ್ಯಾಶ್ ಟೇಬಲ್‌ನಲ್ಲಿದ್ದ ಹಣವನ್ನು ಕಳವು ಮಾಡಿದ್ದಾನೆಂದು ಅಂಗಡಿ ಮಾಲೀಕರು ಬಸವನಗರ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮೈಸೂರಲ್ಲಿ ಶುಂಠಿ ಕಳ್ಳತನ ಪ್ರಕರಣ: ಹುಣಸೂರಿನ ಸಣ್ಣೇನಹಳ್ಳಿಯಲ್ಲಿ ಹೊಲದಲ್ಲಿ ಬೆಳೆದಿದ್ದ 5 ಲಕ್ಷ ರೂಪಾಯಿ ಮೌಲ್ಯದ ಶುಂಠಿ ಬೆಳೆಯನ್ನು ಕಳ್ಳರು ರಾತ್ರಿ ವೇಳೆ ಕಿತ್ತು ಕದ್ದೊಯ್ದಿರುವ ಘಟನೆ ನಡೆದಿದೆ. ಕಳೆದ ಶನಿವಾರ ರಾತ್ರಿ ಯಾರೋ ಕಳ್ಳರು ಸಣ್ಣೇನಹಳ್ಳಿ ಚಂದ್ರೇ ಗೌಡರ ಜಮೀನಿನಲ್ಲಿ ಸುಮಾರು ಅರ್ಧ ಎಕರೆಯಷ್ಟು ಜಮೀನಿನಲ್ಲಿ, 5 ಲಕ್ಷ ರೂ ಬೆಲೆ ಬಾಳುವ ಶುಂಠಿ ಬೆಳೆಯನ್ನು ಕಳುವು ಮಾಡಿಕೊಂಡು ಹೋಗಿದ್ದಾರೆ. ಈ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: 5 ಲಕ್ಷ ಮೌಲ್ಯದ ಶುಂಠಿ ಕಳ್ಳತನ: ಪ್ರಕರಣ ದಾಖಲು
ಇದನ್ನೂ ಓದಿ: ಎಐ ಬಳಸಿ ವ್ಯಕ್ತಿಗೆ ವಂಚನೆ.. ಸೈಬರ್ ಬ್ರ್ಯಾಂಚ್ನಿಂದ ಹಣ ಮರಳಿ ಪಡೆದ ವ್ಯಕ್ತಿ!