ETV Bharat / state

Davanagere crime: ನಡು ರಸ್ತೆಯಲ್ಲಿ​ ಜಗಳವಾಡುತ್ತಿದ್ದವರನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ.. ಓರ್ವ ಆರೋಪಿ ಬಂಧನ

ನಡು ರಸ್ತೆಯಲ್ಲಿ ಜಗಳವಾಡುತ್ತಿದ್ದವರನ್ನು ಪ್ರಶ್ನಿಸಿದ್ದ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದ ರೌಡಿಶೀಟರ್​ನನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ.

author img

By

Published : Aug 5, 2023, 5:26 PM IST

davangere-police-have-arrested-the-rowdy-sheeter-who-assaulted-a-person
ನಡು ರಸ್ತೆಯಲ್ಲಿ​ ಜಗಳವಾಡುತ್ತಿದ್ದವರನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ: ಓರ್ವ ಆರೋಪಿ ಬಂಧನ

ದಾವಣಗೆರೆ: ವ್ಯಕ್ತಿಯೊಬ್ಬನ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದ ರೌಡಿಶೀಟರ್​ನನ್ನು ನಗರದ ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ಜಬೀ ಬಂಧಿತ ಆರೋಪಿ, ನಡು ರಸ್ತೆಯಲ್ಲೇ ಜಗಳವಾಡುತ್ತಿದ್ದವರನ್ನು, ಏಕೆ ರಸ್ತೆ ಬ್ಲಾಕ್ ಮಾಡಿ ಜನಸಾಮಾನ್ಯರಿಗೆ ತೊಂದರೆ ಕೊಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದ ವ್ಯಕ್ತಿಗೆ ರೌಡಿಶೀಟರ್ ನಡು ರಸ್ತೆಯಲ್ಲೇ ಮನಬಂದಂತೆ ಥಳಿಸಿದ್ದ ಘಟನೆ 20 ದಿನಗಳ ಹಿಂದೆ ದಾವಣಗೆರೆ ನಗರದ ಎಸ್ ಎಸ್ ಲೇಔಟ್​ನ ​ಒಳಾಂಗಣ ಕ್ರೀಡಾಂಗಣ ರಸ್ತೆಯಲ್ಲಿ ನಡೆದಿತ್ತು. ಘಟನೆಯಲ್ಲಿ ದಿಲೀಪ್ ಹಲ್ಲೆಗೊಳಗಾಗಿದ್ದರು.

ಬಂಧಿತ ಜಬೀ ಸಹಚರ ಮುತ್ತುರಾಜ್ ತಲೆ ಮರೆಸಿಕೊಂಡಿದ್ದು ಆತನ ಬಂಧನಕ್ಕೆ ವಿದ್ಯಾನಗರ ಠಾಣೆಯ ಪೊಲೀಸರು ಬಲೆ ಬೀಸಿದ್ದಾರೆ. ಈ ಘಟನೆ ನಡೆಯುವುದಕ್ಕೂ ಮುನ್ನ ಆರೋಪಿ ಜಬೀ ಕಳೆದ ಎರಡು ದಿನಗಳ ಹಿಂದೆಯಷ್ಟೇ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದ. ಈ ಹಿಂದೆ ದಾವಣಗೆರೆ ನಗರದ ಗ್ರೀನ್ ಪಾರ್ಕ್ ಹೋಟೆಲ್​ನಲ್ಲಿ ಗಲಾಟೆ ಮಾಡಿದ್ದ ವಿಚಾರವಾಗಿ ಆರೋಪಿ ಜಬೀ ಜೈಲು ಸೇರಿದ್ದ. ತಪ್ಪನ್ನು ಪ್ರಶ್ನಿದ್ದ ವ್ಯಕ್ತಿ ಮೇಲೆ ನಡು ರಸ್ತೆಯಲ್ಲೇ ಹಲ್ಲೆ ಮಾಡಿದ್ದರಿಂದ ಸಾರ್ವಜನಿಕರು ರೌಡಿಗಳಿಂದ ರಕ್ಷಣೆಯೇ ಇಲ್ಲದಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು. ಇನ್ನು, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಘಟನೆಯ ಹಿನ್ನೆಲೆ: ಆರೋಪಿ ಜಬೀ ಮತ್ತು ಆತನ ಸಹಚರನಾದ ಮುತ್ತುರಾಜ್ ಇಬ್ಬರು ದಾವಣಗೆರೆ ನಗರದ ಎಸ್​ ಎಸ್ ಬಡಾವಣೆಯ ಒಳಾಂಗಣ ಕ್ರೀಡಾಂಗಣದ ಬಳಿ ತೆರಳುತ್ತಿರುವಾಗ ಆಟೋ ಚಾಲಕನೋರ್ವ ಸೀಟುಗಳ ಸಾಮರ್ಥ್ಯ ಮೀರಿ ಶಾಲಾ ಮಕ್ಕಳನ್ನು ಕೂರಿಸಿಕೊಂಡು ಹೋಗುತ್ತಿದ್ದುದನ್ನು ಪ್ರಶ್ನಿಸಿದ್ದರು. ಒಳಿಕ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ, ಇದರಿಂದ ಇಡೀ ರಸ್ತೆ ಬಂದ್​ ಆಗಿ ಸಂಚಾರ ದಟ್ಟಣೆ ಉಂಟಾಗಿತ್ತು.

ರಸ್ತೆ ಬಂದ್​ ಮಾಡಿಕೊಂಡು ಜನ ಸಾಮಾನ್ಯರಿಗೆ ಏಕೆ ತೊಂದರೆ ಕೊಡುತ್ತಿದ್ದೀರಿ ಎಂದು ದಿಲೀಪ್ ಬಂಧಿತ ಆರೋಪಿಯನ್ನು ಪ್ರಶ್ನಿಸಿದ್ದರು. ಇದರಿಂದ ಕೋಪಗೊಂಡ ಜಬೀ ಹಾಗೂ ಮುತ್ತುರಾಜ್ ದಿಲೀಪ್ ಮೇಲೆ ಹಲ್ಲೆ ನಡೆಸಿದ್ದರು. ಈ ಘಟನೆಯಿಂದ ಸಾರ್ವಜನಿಕರು ಕೆಲ ಕಾಲ ಆತಂಕಕ್ಕೆ ಒಳಗಾಗಿದ್ದರು. ಜಬೀ ಹಾಗು ಮುತ್ತುರಾಜ್ ವಿರುದ್ಧ ವಿದ್ಯಾನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾದ ಬೆನ್ನಲ್ಲೇ ಆರೋಪಿ ಜಬೀನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಇನ್ನು, ತಲೆಮರೆಸಿಕೊಂಡಿರುವ ಮುತ್ತುರಾಜ್ ನನ್ನು ಬಂಧಿಸಲು ಬಲೆ ಬೀಸಿದ್ದೇವೆ ಎಂದು ವಿದ್ಯಾನಗರ ಪೊಲೀಸ್​ ಠಾಣೆಯ ಪಿಎಸ್ಐ ಈಟಿವಿ ಭಾರತಕ್ಕೆ ದೂರವಾಣಿ ಮೂಲಕ ತಿಳಿಸಿದ್ದಾರೆ.

ಇದನ್ನೂ ಓದಿ: ನಿರ್ಲಕ್ಷಿಸುತ್ತಿದ್ದಾಳೆ ಎಂದು ಪ್ರಿಯತಮೆಯ ಮೇಲೆ ಮಾರಣಾಂತಿಕ ಹಲ್ಲೆ: ಆರೋಪಿ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.