ದಾವಣಗೆರೆ: ನಾಮಪತ್ರ ಹಿಂಪಡೆಯುವ ಬಗ್ಗೆ ಸಿಎಂ ನನ್ನೊಂದಿಗೆ ಚರ್ಚಿಸಿದ್ದಾರೆ. ನಾನು ಕೂಡ ಬಿಜೆಪಿ ಟಿಕೆಟ್ನ ಪ್ರಬಲ ಆಕಾಂಕ್ಷಿಯಾಗಿದ್ದೆ. ಕೊನೆ ಗಳಿಗೆಯಲ್ಲಿ ಟಿಕೆಟ್ ಕೈ ತಪ್ಪಿತು ಎಂದು ಹಾನಗಲ್ ಬಿಜೆಪಿ ಬಂಡಾಯ ಅಭ್ಯರ್ಥಿ ಸಿ.ಆರ್. ಬಳ್ಳಾರಿ ಹೇಳಿದ್ದಾರೆ.
ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ಮಾತನಾಡಿದ ಅವರು, ನಾಮಪತ್ರ ಹಿಂಪಡೆಯುವ ಬಗ್ಗೆ ಸಿಎಂ ಕರೆದು ನನ್ನೊಂದಿಗೆ ಚರ್ಚಿಸಿದ್ದಾರೆ. ಎರಡೂ ಕ್ಷೇತ್ರಗಳು ಪ್ರತಿಷ್ಠೆಯ ಕಣವಾಗಿರುವುದರಿಂದ ನಾಮಪತ್ರ ಹಿಂಪಡೆಯಲು ಕೇಳಿದ್ದಾರೆ. ನಾನು ಒಂದು ದಿನದ ಕಾಲವಕಾಶ ಕೇಳಿದ್ದೇನೆ. ನಾಳೆ ಹಾನಗಲ್ನಲ್ಲಿ ಪಂಚಮಸಾಲಿ ಮುಖಂಡರ ಜತೆ ಚರ್ಚಿಸಿ ಬಳಿಕ ನಾಮಪತ್ರ ವಾಪಸ್ ಪಡೆಯುವ ನಿರ್ಣಯ ಕೈಗೊಳ್ಳುತ್ತೇನೆ ಎಂದರು.
ಇದಕ್ಕೂ ಮುನ್ನ ಮಾತನಾಡಿದ ಸಿಎಂ ಬೊಮ್ಮಾಯಿ, ನಾಮಪತ್ರ ವಾಪಸ್ ಪಡೆಯುವ ನಿರ್ಧಾರವನ್ನು ಸಿ ಆರ್ ಬಳ್ಳಾರಿ ಅವರಿಗೇ ಬಿಟ್ಟಿದ್ದೇನೆ ಎಂದಿದ್ದರು.