ದಾವಣಗೆರೆ: ರಾಜ್ಯದೆಲ್ಲೆಡೆ ವ್ಯಾಪಕವಾಗಿ ಹಬ್ಬಿರುವ ಕೊರೊನಾ ನಿಯಂತ್ರಿಸಲು ಲಾಕ್ಡೌನ್ ಜಾರಿ ಮಾಡಲಾಯಿತು. ಲಾಕ್ಡೌನ್ನಿಂದ ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಾ ಬರುತ್ತಿವೆ. ಆದ್ರೆ ಲಾಕ್ಡೌನ್ ಹೊಡೆತ ಪ್ರತೀ ಕ್ರೇತ್ರದ ಮೇಲೂ, ಪ್ರತಿಯೊಬ್ಬರ ಮೇಲೂ ಬಿದ್ದಿರೋದೊಂತೂ ಸುಳ್ಳಲ್ಲ. ಬೆಣ್ಣೆನಗರಿಯ ಹೂವಿನ ವ್ಯಾಪಾರಿಗಳು ಸಹ ಭಾರೀ ನಷ್ಟ ಅನುಭವಿಸಿದ್ದು, ಜೀವನ ನಿರ್ವಹಣೆಗೆ ಪರದಾಡುತ್ತಿದ್ದಾರೆ.
ಒಂದೆಡೆ ಸರಿಯಾದ ಹೂವು ಸಿಗದೆ ರೈತರು ಮಾರುಕಟ್ಟೆಗೆ ಹೂವು ತರಲು ಹಿಂದೇಟು ಹಾಕುತ್ತಿದ್ದಾರೆ. ಇನ್ನು ಜಮೀನಿನಲ್ಲಿ ಬೆಳೆದ ಹೂವಿಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಇಲ್ಲದಿರುವುದು ನಷ್ಟಕ್ಕೆ ದಾರಿ ಮಾಡಿಕೊಟ್ಟಂತೆ ಆಗಿದೆ.
ಮದುವೆ ಸಮಾರಂಭಗಳು ಹೆಚ್ಚಿರುವ ಈ ಸಮಯದಲ್ಲಿ ಮೊದಲೆಲ್ಲಾ ಹೂವಿನ ವ್ಯಾಪಾರ ಅಚ್ಚುಕಟ್ಟಾಗಿ ನಡೆಯುತ್ತಿತ್ತು. ಅದ್ರೆ ಲಾಕ್ಡೌನ್ ಮಾಡಿದ ಬೆನ್ನಲ್ಲೇ ವ್ಯಾಪಾರವಿಲ್ಲದೇ ಹೂವಿನ ವ್ಯಾಪಾರಿಗಳು ಜೀವನ ನಡೆಸುವುದು ಕಷ್ಷಕರವಾಗಿದೆ.
ಜಿಲ್ಲೆಗೆ ಹೂವಿನಹಡಗಲಿ, ಹರಪ್ಪನಹಳ್ಳಿ, ಚನ್ನಗಿರಿ, ಮಾಯಕೊಂಡ, ಚಿತ್ರದುರ್ಗ, ಜಗಳೂರು ಸೇರಿದಂತೆ ನಾನಾ ಭಾಗದಿಂದ ಹೂವು ರಫ್ತಾಗುತ್ತಿತ್ತು. ಇದೀಗ ಲಾಕ್ಡೌನ್ ಇರುವ ಕಾರಣ ಹೂವು ಬೆಳೆದರೂ ಕೂಡ ಮಾರುಕಟ್ಟೆಯಲ್ಲಿ ಹೂವು ಕೊಳ್ಳುವರಿಲ್ಲದೇ ಹೂವಿನ ವ್ಯಾಪಾರಿಗಳು ನಷ್ಟ ಅನುಭವಿಸುವಂತಾಗಿದೆ.
ಹೂವಿನ ದರ ಕುಸಿತ:
ಜಿಲ್ಲೆಯಲ್ಲಿ ಹೂವಿನ ಮಾರುಕಟ್ಟೆ ಇದ್ದು, ಅಲ್ಲಿಗೆ ಹೂವು ರಫ್ತಾಗುತ್ತದೆ. ಇದೀಗ ಲಾಕ್ಡೌನ್ ಇರುವ ಕಾರಣ ರಫ್ತು ಹಾಗೂ ಆಮದಿನಲ್ಲಿ ಇಳಿಮುಖವಾಗಿದೆ. ದುಂಡು ಮಲ್ಲಿಗೆ ಕೆಜಿಗೆ 100 ರೂ., ಸೇವಂತಿಗೆ ಹೂವು ಕೆಜಿಗೆ 40ರಿಂದ 50 ರೂಪಾಯಿ, ಗುಲಾಬಿ ಕೆಜಿಗೆ 50 ರೂ., ಸುಗಂಧ ರಾಜಾ ಕೆಜಿಗೆ 20 ರೂ. ಇದ್ದು, ಹೂವಿನ ದರ ಪಾತಾಳಕ್ಕೆ ತಲುಪಿದೆ. ಇನ್ನು ಮಾರುಕಟ್ಟೆಯಲ್ಲಿ ಸುಗಂಧ ರಾಜ ಹೂವುಗಳನ್ನು ಕೊಳ್ಳುವರಿಲ್ಲದೆ ಹೈರಾಣಾದ ರೈತರು ಸೆಂಟ್ ತಯಾರಿಕಾ ಕಾರ್ಖಾನೆಗೆ ರಫ್ತು ಮಾಡುತ್ತಿದ್ದಾರೆ.
ಇದನ್ನೂ ಓದಿ: ಬೀದಿ ನಾಯಿಗಳ ಹಸಿವು ನೀಗಿಸುವ ಅನ್ನದಾತ.. 150ಕ್ಕೂ ಹೆಚ್ಚು ನಾಯಿಗಳ ನಿತ್ಯ ಆರೈಕೆ