ETV Bharat / state

6 ಮಂದಿಗೆ ಸೋಂಕಿದೆ ಎಂದು ತಪ್ಪು ವರದಿ ಕೊಟ್ಟಿದ್ದ ಲ್ಯಾಬ್​​​​ಗೆ ನೋಟಿಸ್‌.. ಜಿಲ್ಲಾಧಿಕಾರಿ ಬೀಳಗಿ - ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ

ಈ ಆರು ಮಂದಿಯಲ್ಲಿ ನಾಲ್ವರು ಗರ್ಭಿಣಿಯರಿದ್ದು, ಮೂವರಿಗೆ ಹೆರಿಗೆಯಾಗಿದೆ. ಮುಂಜಾಗ್ರತಾ ಕ್ರಮವಾಗಿ ಎರಡು ವಾರಗಳ ಕಾಲ ಹೋಮ್​​ ಕ್ವಾರಂಟೈನ್ ಆಗಲು ತಿಳಿಸಲಾಗಿದೆ. ಮತ್ತೊಮ್ಮೆ ಸ್ವ್ಯಾಬ್ ಪರೀಕ್ಷೆ ಮಾಡಲಾಗುವುದು ಎಂದು ಅಭಿಪ್ರಾಯಪಟ್ಟರು..

District Collector Mahantesh R. bilagi
ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ
author img

By

Published : Jun 24, 2020, 4:27 PM IST

ದಾವಣಗೆರೆ : ನಾಲ್ವರು ಗರ್ಭಿಣಿಯರು ಸೇರಿ ಆರು ಮಂದಿಗೆ ನೆಗಟಿವ್​​ ಬಂದಿದೆ. ಆದರೆ, ಈ ಮೊದಲು ಕೊರೊನಾ ಪಾಸಿಟಿವ್ ವರದಿ ನೀಡಿದ್ದ ಖಾಸಗಿ ಲ್ಯಾಬ್​​​ಗೆ ಉತ್ತರಿಸುವಂತೆ ಪತ್ರ ಬರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಆರ್.ಬೀಳಗಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್ 18ರಂದು ದೊಡ್ಡಬಾತಿ, ಶ್ಯಾಗಲೆ, ಬಸವನಹಳ್ಳಿ, ಮಾದನಬಾವಿಗೆ ಸಂಬಂಧಿಸಿದ ರೋಗಿ ಸಂಖ್ಯೆ-7804, 7805, 8066, 8067, 8068, 8069ರ ಗಂಟಲು ದ್ರವ ಮಾದರಿಯನ್ನು ನಗರದ ಖಾಸಗಿ ಲ್ಯಾಬ್​​​​ಗೆ ಕಳುಹಿಸಿದಾಗ ಪಾಸಿಟಿವ್ ಎಂದು ವರದಿ ಬಂದಿತ್ತು.‌

ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ

ಆದರೆ, ಅವರು ಯಾವುದೇ ಕಂಟೇನ್​​​​ಮೆಂಟ್ ಝೋನ್ ಅಥವಾ ಸೋಂಕಿತರ ಸಂಪರ್ಕಕ್ಕೆ ಬಾರದ ಕಾರಣ ಮತ್ತೊಮ್ಮೆ ಜೂನ್ 20ರಂದು ಮತ್ತೊಂದು ಖಾಸಗಿ ಲ್ಯಾಬ್​​​ಗೆ ಕಳುಹಿಸಿದಾಗ ನೆಗೆಟಿವ್ ಬಂದಿದೆ. ಹಾಗೆಯೇ ಮತ್ತೊಮ್ಮೆ ದೃಢಪಡಿಸಲು ಬೆಂಗಳೂರಿನ ಲ್ಯಾಬ್​​​​ಗೆ ಕಳುಹಿಸಿದಾಗಲೂ ನೆಗೆಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ನಿಯಮಾನುಸಾರ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ಹೇಳಿದರು.

ಈ ಆರು ಮಂದಿಯಲ್ಲಿ ನಾಲ್ವರು ಗರ್ಭಿಣಿಯರಿದ್ದು, ಮೂವರಿಗೆ ಹೆರಿಗೆಯಾಗಿದೆ. ಮುಂಜಾಗ್ರತಾ ಕ್ರಮವಾಗಿ ಎರಡು ವಾರಗಳ ಕಾಲ ಹೋಮ್​​ ಕ್ವಾರಂಟೈನ್ ಆಗಲು ತಿಳಿಸಲಾಗಿದೆ. ಮತ್ತೊಮ್ಮೆ ಸ್ವ್ಯಾಬ್ ಪರೀಕ್ಷೆ ಮಾಡಲಾಗುವುದು ಎಂದು ಅಭಿಪ್ರಾಯಪಟ್ಟರು.

ಜಿಲ್ಲೆಯಲ್ಲಿ ಇಂದು ಇಬ್ಬರಲ್ಲಿ ಕೊರೊನಾ ದೃಢ

  • ರೋಗಿ ಸಂಖ್ಯೆ-9420, 34 ವರ್ಷ
  • ರೋಗಿ ಸಂಖ್ಯೆ-9421, 68 ವರ್ಷ

ರೋಗಿ ಸಂಖ್ಯೆ 9420ರ ಪ್ರಾಥಮಿಕ ಸಂಪರ್ಕದಲ್ಲಿದ್ದ 8 ಹಾಗೂ ಮಹಾರಾಜಪೇಟೆಯ ರೋಗಿ ಸಂಖ್ಯೆ 9421 ವೃದ್ಧನಿಗೆ ಸಂಬಂಧಿಸಿದ 12 ಮಂದಿಯ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಎಸ್​​​ಎಆರ್​​​ಐ ಪ್ರಕರಣಗಳ ಹಿನ್ನೆಲೆ ಹೊಂದಿದವರಾಗಿದ್ದಾರೆ. ಒಟ್ಟು 267 ಸೋಂಕಿತರ ಪೈಕಿ 226 ಮಂದಿ ಬಿಡುಗಡೆ ಹೊಂದಿದ್ದಾರೆ. 32 ಸಕ್ರಿಯ ಪ್ರಕರಣಗಳಿವೆ. ಏಳು ಮಂದಿ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.