ದಾವಣಗೆರೆ: ಕೋವಿಡ್-19 ಸೋಂಕಿನಿಂದ ಈಗಾಗಲೇ ಬೆಣ್ಣೆನಗರಿ ಜನರು ಹೈರಾಣಾಗಿದ್ದಾರೆ. ಮಹಾಮಾರಿ ಬಗ್ಗೆ ಜಿಲ್ಲಾಡಳಿತ ಜನಜಾಗೃತಿ ಮೂಡಿಸುತ್ತಿದೆ. ಇದ್ರ ಜೊತೆಗೆ, ದಾವಣಗೆರೆಯ ಯುವಕರು ಕೊರೊನಾ ವೇಷ ಧರಿಸಿ ವಿನೂತನವಾಗಿ ಮಾರುಕಟ್ಟೆಯಲ್ಲಿ ಅರಿವು ಮೂಡಿಸುತ್ತಿದ್ದಾರೆ.
ಭರತ್ ಕಾಲೋನಿಯ ಯುವಕ ರಾಕೇಶ್ ಹಾಗೂ ಆತನ ಸ್ನೇಹಿತರು ಕೆ.ಆರ್ ಮಾರುಕಟ್ಟೆ ಸೇರಿದಂತೆ ಜನಸಂದಣಿ ಇರುವ ಸ್ಥಳಗಳಿಗೆ ತೆರಳಿ ಮಾರ್ಗಸೂಚಿಗಳನ್ನು ಪಾಲಿಸುವಂತೆ ಜನರಿಗೆ ತಿಳಿ ಹೇಳುತ್ತಿದ್ದಾರೆ. ಯಾರು ಮಾಸ್ಕ್ ಹಾಕೋದಿಲ್ವೋ ಅಂತವರಿಗೆ ಮಾಸ್ಕ್ ಹಾಕಿ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಮನವಿ ಮಾಡುತ್ತಿದ್ದಾರೆ.
ಯುವಕ ರಾಕೇಶ್, ಅನುಪಯುಕ್ತ ಥರ್ಮಕೋಲ್ ಅನ್ನು ಬಳಸಿ ಕೊರೊನಾ ವೇಷಭೂಷಣಗಳನ್ನು ತಯಾರಿಸಿದ್ದಾನೆ.
ಇದನ್ನೂ ಓದಿ: ಪರೀಕ್ಷೆ ಕುರಿತು ಮಕ್ಕಳು-ಪೋಷಕರಲ್ಲಿ ಆತ್ಮವಿಶ್ವಾಸ ಮೂಡಿಸಿ: ಸಚಿವ ಸುರೇಶ್ ಕುಮಾರ್