ETV Bharat / state

ದಾವಣಗೆರೆಯಲ್ಲಿ ಕಂಟ್ರೋಲ್ ಕಮಾಂಡ್ ರೂಂ ಸಿದ್ಧ: ಹೆಲ್ಮೆಟ್​ ಧರಿಸದೇ ಓಡಾಡಿದ್ರೆ ದಂಡ

ಹೆಲ್ಮೆಟ್ ಇಲ್ಲದೇ ದಿಲ್‌ದಾರ್ ಆಗಿ ವಾಹನ ಓಡಿಸಬಹುದು. ಏನ್ ಮಾಡಿದ್ರೂ ನಡೆಯುತ್ತದೆ ಎನ್ನುವವರು ಇನ್ಮುಂದೆ ಅಲರ್ಟ್ ಆಗಿರಬೇಕು.

CCTV surveillance system
ದಾವಣಗೆರೆಯಲ್ಲಿ ಕಂಟ್ರೋಲ್ ಕಮಾಂಡ್ ರೂಮ್ ಸಿದ್ಧ
author img

By

Published : Oct 20, 2022, 5:42 PM IST

ದಾವಣಗೆರೆ: ಸ್ಮಾರ್ಟ್​ಸಿಟಿ ಯೋಜನೆಯಡಿ ವಿಶಿಷ್ಟ ರೀತಿಯಲ್ಲಿ ಕಂಟ್ರೋಲ್ ಕಮಾಂಡ್ ರೂಂ ಸಿದ್ಧವಾಗಿದೆ. ಇಲ್ಲಿರುವ 20 ಪೊಲೀಸ್ ಸಿಬ್ಬಂದಿ ಇಡೀ ನಗರದ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಅಲ್ಲದೇ ಸಂಚಾರಿ ನಿಯಮ ಪಾಲಿಸದವರಿಗೆ ದಂಡದ ಬಿಸಿ ಮುಟ್ಟಿಸುತ್ತಿದ್ದಾರೆ.

ನಗರದ 109 ಕಡೆಗಳಲ್ಲಿ ಸಿಸಿಟಿವಿ ಸರ್ವೆಲೆನ್ಸ್ ವ್ಯವಸ್ಥೆ ಮಾಡಲಾಗಿದ್ದು, ಒಟ್ಟು 211 ಕಡೆ ಸಿಸಿ ಕ್ಯಾಮೆರಾಗಳನ್ನು ಆಳವಡಿಕೆ ಮಾಡಲಾಗಿದೆ. 5 ಜಾಗಗಳಲ್ಲಿ ವೇರಿಯೇಬಲ್ ಮೆಸೇಜ್ ಸೈನ್ ಬೋರ್ಡ್‌ಗಳನ್ನು ಅಳವಡಿಸಲಾಗಿದೆ. ಮೊಬೈಲ್ ಸರ್ವೆಲೆನ್ಸ್ ವಾಹನಗಳು ಜನರ ಸಹಾಯಕ್ಕೆ ಬರುತ್ತಿದ್ದು, ಸಿಸಿಟಿವಿ ಕ್ಯಾಮೆರಾಗಳ ಸಹಾಯದಿಂದ ವಾಹನಗಳ ನಂಬರ್ ಪ್ಲೇಟ್‌ಗಳನ್ನು ಗುರುತಿಸುವ ಕೆಲಸ ಮಾಡಲಾಗುತ್ತಿದೆ.

ದಾವಣಗೆರೆಯಲ್ಲಿ ಕಂಟ್ರೋಲ್ ಕಮಾಂಡ್ ರೂಮ್ ಸಿದ್ಧ

ಕಳ್ಳತನವಾದ ಅಥವಾ ಸಂಶಯಾಸ್ಪದ ವಾಹನಗಳನ್ನು ಗುರುತಿಸಲು ಇದು ಸಹಾಯಕವಾಗಿದೆ. ಈ ವ್ಯವಸ್ಥೆಯನ್ನು ಬಳಸಿ ಬೈಕ್ ಕಳ್ಳತನ, ಕೊಲೆ, ಹಣ ದೋಚಿದ ಒಟ್ಟು 12 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ‌ಕಳೆದ ಮೂರು ತಿಂಗಳಲ್ಲಿ ನಿಯಮ ಉಲ್ಲಂಘನೆ ಮಾಡಿದ 29,080 ವಾಹನಗಳಿಗೆ ಚಲನ್‌ ಮೂಲಕ ದಂಡದ ನೋಟಿಸ್​​ಗಳನ್ನು ಮನೆಗಳಿಗೆ ಕಳುಹಿಸಲಾಗಿದೆ ಎಂದು ಎಸ್ಪಿ ಸಿಬಿ ರಿಷ್ಯಂತ್ ತಿಳಿಸಿದರು.

ಇದನ್ನೂ ಓದಿ: ಎಲ್ಲೆಡೆ ಪೊಲೀಸರು ಇರೋಕಾಗಲ್ಲ.. ಅವರಿಟ್ಟ ಕಣ್ಣುಗಳಿವೆ, ಹುಷಾರು!

ಜಿಲ್ಲೆಯಲ್ಲಿನ ಸೂಕ್ಷ್ಮ, ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಕೂಡ ಸಿಸಿ ಕ್ಯಾಮೆರಾಗಳ ಅಳವಡಿಕೆ ಮಾಡಲಾಗಿದೆ. ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಬೇಕಾದ ಗುರಿಯನ್ನು ಸ್ಮಾರ್ಟ್ ಸಿಟಿ ಹೊಂದಿದೆ. ಪೊಲೀಸ್ ಇಲಾಖೆಗೆ ಯಾವ ಮಾದರಿಯ ಸಿಸಿ ಕ್ಯಾಮೆರಾಗಳ ಅವಶ್ಯಕತೆ ಇದೆ ಎನ್ನುವುದನ್ನು ಮಾಹಿತಿ ಪಡೆದು ನಂತರ ಅವರ ಬಳಿ ಚರ್ಚೆ ಮಾಡಿ ಅಳವಡಿಕೆ ಮಾಡಲಾಗುತ್ತದೆ.

ಹಿಂದಿನ ಪೊಲೀಸ್​​ ಅಧೀಕ್ಷಕರ ಒಪ್ಪಿಗೆಯ ಮೇರೆಗೆ 211 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಕ್ಯಾಮೆರಾಗಳಿಂದ ಸಂಚಾರಿ ನಿಯಮ ಉಲ್ಲಂಘನೆ ಮಾಡಿದವರ ವಾಹನದ ನಂಬರ್ ಅಟೋಮ್ಯಾಟಿಕ್ ಡಿಟೆಕ್ಟ್ ಮಾಡಲಾಗುತ್ತದೆ ಎಂದು ಸ್ಮಾರ್ಟ್ ಸಿಟಿ ಎಂಡಿ ರವೀಂದ್ರ ಮಲ್ಲಾಪುರ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.