ETV Bharat / state

ಬೆಣ್ಣೆನಗರಿಯಲ್ಲಿ ನಿರ್ಮಾಣಗೊಳ್ಳುತ್ತಿದೆ ಐದಂತಸ್ತಿನ ಕೆಎಸ್ಆರ್​ಟಿಸಿ ಬಸ್ ನಿಲ್ದಾಣ: ಏನಿದರ ವಿಶೇಷತೆ?

ದಾವಣಗೆರೆಯಲ್ಲಿ ನಿರ್ಮಾಣಗೊಳ್ಳಲಿರುವ ಹೈಟೆಕ್ ಬಸ್​ ನಿಲ್ದಾಣದ ಕುರಿತು ಕೆಲ ಮಾಹಿತಿ ಈ ಕೆಳಗಿದೆ.

ಕೆಎಸ್ಆರ್​ಟಿಸಿ ಬಸ್ ನಿಲ್ದಾಣ
ಕೆಎಸ್ಆರ್​ಟಿಸಿ ಬಸ್ ನಿಲ್ದಾಣ
author img

By ETV Bharat Karnataka Team

Published : Nov 11, 2023, 11:21 AM IST

Updated : Nov 11, 2023, 10:09 PM IST

ಬೆಣ್ಣೆನಗರಿಯಲ್ಲಿ ನಿರ್ಮಾಣಗೊಳ್ಳುತ್ತಿದೆ ಐದಂತಸ್ತಿನ ಕೆಎಸ್ಆರ್​ಟಿಸಿ ಬಸ್ ನಿಲ್ದಾಣ

ದಾವಣಗೆರೆ: ನಗರದಲ್ಲಿ ಐದು ಅಂತಸ್ತಿನ ಕೆಎಸ್ಆರ್​ಟಿಸಿ ಬಸ್ ನಿಲ್ದಾಣ ತಲೆ ಎತ್ತುತ್ತಿದೆ. ಸ್ಮಾರ್ಟ್ ಸಿಟಿಯಡಿ ನಿರ್ಮಾಣಗೊಳ್ಳುತ್ತಿರುವ ನಿಲ್ದಾಣಕ್ಕೆ ಹೈಟೆಕ್ ಟಚ್ ನೀಡಲಾಗುತ್ತಿದೆ. ಸುಸಜ್ಜಿತವಾದ ಕಟ್ಟಡವನ್ನು ನಿರ್ಮಾಣ ಮಾಡಲಾಗಿದ್ದು, ಇದೇ ಡಿಸೆಂಬರ್​ ವೇಳೆಗೆ ಬಸ್ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸುವ ಪ್ರಯತ್ನ ನಡೆಯುತ್ತಿದೆ. ನಿಲ್ದಾಣದ ಹಿಂಭಾಗದಲ್ಲಿ ದೈತ್ಯಾಕಾರದ ಕಮಾನುಗಳು ಪ್ರಯಾಣಿಕರನ್ನು ಸ್ವಾಗತ ಮಾಡಲಿವೆ. ಜತೆಗೆ ಒಮ್ಮೆಯೇ 46ಬಸ್​ಗಳು ನಿಲ್ಲುವ ಫ್ಲಾಟ್ ಫಾರ್ಮ್​ಗಳನ್ನು ನಿರ್ಮಾಣ ಮಾಡಿರುವುದು ವಿಶೇಷ.

ಹೌದು, ದಾವಣಗೆರೆಯ ಹೃದಯ ಭಾಗದಲ್ಲಿ ನಿರ್ಮಾಣ ಆಗುತ್ತಿರುವ ಬೃಹತ್ ಬಸ್ ನಿಲ್ದಾಣ ಪ್ರಯಾಣಿಕರನ್ನು ಆಕರ್ಷಿಸುತ್ತಿದೆ. ಹಳೇ ಬಸ್ ನಿಲ್ದಾಣವನ್ನು ನೆಲಸಮ ಮಾಡುವ ಮೂಲಕ ಐದಂತಸ್ತಿನ ಸುಸಜ್ಜಿತವಾದ ಕಟ್ಟಡ ನಿರ್ಮಾಣ ಮಾಡಲಾಗಿದೆ. 120 ಕೋಟಿ ರೂಪಾಯಿ ವೆಚ್ಚದಲ್ಲಿ ಕೆಎಸ್ಆರ್​ಟಿಸಿ ಬಸ್ ನಿಲ್ದಾಣದ ಕಾಮಗಾರಿ ನಡೆಯುತ್ತಿದ್ದು, ಸ್ಮಾರ್ಟ್ ಸಿಟಿಯಿಂದ 90 ಕೋಟಿ ಅನುದಾನ ಹಾಗು ಕೆಎಸ್ಆರ್​ಟಿಸಿ ನಿಗಮದಿಂದ 30 ಕೋಟಿ ಅನುದಾನವನ್ನು ಕಾಮಗಾರಿಗೆ ವ್ಯಯಿಸಲಾಗಿದೆ.

09 ಎಕರೆ ಪ್ರದೇಶದಲ್ಲಿ ಈ ಬಸ್ ನಿಲ್ದಾಣ ಸಿದ್ದಗೊಳ್ಳುತ್ತಿದ್ದು, ಇದರಲ್ಲಿ ಎರಡು ಮಾಲ್, 03 ಸಿನಿಮಾ ಮಂದಿರ, ಹಾಗು ಆರು ಲಿಫ್ಟ್ ಸೇರಿದಂತೆ ಎರಡು ಎಕ್ಸ್​ಲೇಟರ್ ವ್ಯವಸ್ಥೆ ಮಾಡಲಾಗಿದೆ.‌ ಮುಖ್ಯವಾಗಿ ಈ ಬಸ್ ನಿಲ್ದಾಣದಲ್ಲಿ 46 ಬಸ್​ಗಳು ಒಂದೇ ಬಾರಿಗೆ ನಿಲ್ಲಬಹುದಾಗಿದೆ. ತಾಯಂದಿರು ತಮ್ಮ ಮಕ್ಕಳಿಗೆ ಹಾಲುಣಿಸಲು ಪ್ರತ್ಯೆಕ ಕೋಣೆಗಳ ವ್ಯವಸ್ಥೆ ಇದೆ. ಉಪಹಾರ ಸೇವಿಸಲು ಒಂದು ಕ್ಯಾಂಟೀನ್ ವ್ಯವಸ್ಥೆ ಸಹ ಮಾಡಲಾಗಿದೆ.

ಇನ್ನು, 500 ದ್ವಿಚಕ್ರ ಹಾಗು 104 ಕಾರುಗಳು ನಿಲ್ಲಲು ಪಾರ್ಕಿಂಗ್ ವ್ಯವಸ್ಥೆ ಕೂಡ ಇರಲಿದೆ. ಈ ನಿಲ್ದಾಣದಲ್ಲಿರುವ ಮಾಲ್, ಸಿನಿಮಾ ಥಿಯೇಟರ್ ಹಾಗು ಉಳಿದ ಕಾಂಪ್ಲೆಕ್ಸ್​ಗಳಿಂದ ಬರುವ ಆದಾಯ 50% ರಷ್ಟು ಸ್ಮಾರ್ಟ್​ಸಿಟಿಗೆ, ಉಳಿದ 50% ರಷ್ಟು ಕೆಎಸ್ಆರ್​ಟಿಸಿಗೆ ಸೇರಬೇಕೆಂದು ಒಪ್ಪಂದ ಮಾಡಿಕೊಳ್ಳಲಾಗಿದೆ. ಇನ್ನು 80% ರಷ್ಟು ಕಾಮಗಾರಿ ಮುಕ್ತಾಯವಾಗಿದ್ದು, ಇದೇ ಡಿಸೆಂಬರ್​ ವೇಳೆಗೆ ಕೆಲಸ ಪೂರ್ಣಗೊಳಿಸುವ ಪ್ರಯತ್ನ ನಡೆದಿದೆ.

ಈ ಬಗ್ಗೆ ಸ್ಮಾರ್ಟ್ ಸಿಟಿಯ ಪ್ರಧಾನ ವ್ಯವಸ್ಥಾಪಕ ತಾಂತ್ರಿಕ ಜನರಲ್ ಮ್ಯಾನೇಜರ್ ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದು, 120 ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿ ನಡೆಯುತ್ತಿದೆ. ನಿಲ್ದಾಣದ ವಿಶೇಷತೆ ಏನೆಂದರೆ ಒಟ್ಟು 09 ಎಕರೆ ಇದ್ದು, ಅದರಲ್ಲಿ 06 ಎಕರೆಯಲ್ಲಿ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಲಾಗುತ್ತಿದೆ. ಇದರಲ್ಲಿ ಮಾಲ್​ ಸೇರಿದಂತೆ, ಚಿತ್ರಮಂದಿರ ಇರಲಿದೆ ಎಂದು ಹೇಳಿದರು.

ಈ ವೇಳೆ ಪ್ರಯಾಣಿಕರಾದ ಲಕ್ಷ್ಮಿ ಎಂಬುವರು ಮಾತನಾಡಿ, ಮೊದಲು ಬಹಳ ಚಿಕ್ಕದಾದ ಬಸ್ ನಿಲ್ದಾಣ ಇತ್ತು, ಇದೀಗ ದೊಡ್ಡ ಬಸ್ ನಿಲ್ದಾಣ ಸಿದ್ಧಗೊಳ್ಳುತ್ತಿದೆ. ಇದರ ಕೀರ್ತಿ ಸಚಿವ ಎಸ್ಎಸ್ ಮಲ್ಲಿಕಾರ್ಜುನ್​ ಅವರಿಗೆ ಸಲ್ಲಬೇಕು. ಒಂದು ಮಾಲ್ ಮೂರು ಥಿಯೇಟರ್​ಗಳಿದ್ದು, ಸುಸಜ್ಜಿತವಾದ ನಿಲ್ದಾಣ ಆಗ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಪ್ರಯಾಣಿಕರ ಅನುಕೂಲಕ್ಕಾಗಿ ನಮ್ಮ ಮೆಟ್ರೋದಲ್ಲಿ ಮೊಬೈಲ್ ಕ್ಯೂಆರ್ ಗ್ರೂಪ್ ಟಿಕೆಟ್ ಜಾರಿ: ಬಿಎಂಆರ್​ಸಿಎಲ್

Last Updated : Nov 11, 2023, 10:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.