ಹರಿಹರ : ಟಿಪ್ಪುವಿನ ಇತಿಹಾಸ ಅರಿಯದ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ತಮ್ಮ ಶಾಸಕ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡುವಂತೆ ಮತ್ತು ಸಾರ್ವಜನಿಕವಾಗಿ ಕ್ಷಮೆ ಕೇಳುವಂತೆ ಇಂಡಿಯನ್ ನ್ಯೂ (ಐಎನ್‌ಸಿಪಿ) ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಮುದ್ದಾಪುರದ ರೆಹಮಾನ್ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಗೆ ತಿಳಿದಿರುವುದೇ ನಿಜವಾದ ಇತಿಹಾಸ ಎಂದು ತಿಳಿದು ಸಮಾಜದಲ್ಲಿ ಜಾತಿ ವಿಷಬೀಜ ಬಿತ್ತಿ ಟಿಪ್ಪುವಿನ ಇತಿಹಾಸವನ್ನು ಪಠ್ಯ ಪುಸ್ತಕದಿಂದ ತೆಗೆಯುವಂತೆ ಒತ್ತಾಯಿಸುತ್ತಿರುವುದು ಬಾಲಿಷ ಎಂದರು.
ನ್ಯಾಯಾಂಗವು ಟಿಪ್ಪುವಿನ ಇತಿಹಾಸವನ್ನು ಪ್ರಾಥಮಿಕ ಹಂತದಿಂದ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪತ್ರದ ಮೂಲಕ ನಿರ್ದೇಶಿಸಿದೆ. ಸರ್ಕಾರ ನೇಮಿಸಿದ್ದ ತಜ್ಞನರ ಸಮಿತಿ ಸರ್ಕಾರಕ್ಕೆ ಸಲ್ಲಿಸಿರುವ ತನ್ನ ವರದಿಯಲ್ಲಿ ಪಠ್ಯ ಪುಸ್ತಕದಿಂದ ಟಿಪ್ಪುವಿನ ಇತಿಹಾಸ ತಗೆಯದಂತೆ ಶಿಫಾರಸು ಮಾಡಿದ್ದಾರೆ ಎಂಬುದು ಸತ್ಯ ಸಂಗತಿ. ಈ ವರದಿಯನ್ನು ಗಮನಿಸಿದರೆ ಟಿಪ್ಪು ಒಬ್ಬ ದೇಶ ಭಕ್ತ ಎಂದು ಸಾಬೀತು ಪಡಿಸುತ್ತದೆ ಎಂದರು.
ಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಮೌನೇಶ್ವರಚಾರಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಲ್ ಹಾಜ್ ಅಲ್ಲಾಬಕ್ಷ್, ಶಿಗ್ಲಿ ಹುಸೇನ್, ಮುಖಂಡರಾದ ಹಪೀಸ್ ಖಾನ್, ರಹೀಮ್ ಖಾನ್, ತಾಲೂಕು ಅಧ್ಯಕ್ಷ ರಾಟೆ ಮನೆ ರಾಜಾಸಾಬ್, ಖಾಸಿಂಸಾಬ್, ಮಲ್ಲಿಕಾರ್ಜನ ಸ್ವಾಮಿ ಇತರರಿದ್ದರು.