ETV Bharat / state

ಬಿಜೆಪಿ 150 ಸ್ಥಾನ ಗೆದ್ದು ಮತ್ತೆ ಅಧಿಕಾರಕ್ಕೆ; ಕಾಂಗ್ರೆಸ್​ಗೆ ಬರೋದು ಜಸ್ಟ್​ 50-60 ಸ್ಥಾನ: ರೇಣುಕಾಚಾರ್ಯ

ಮಾಜಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪನವರು ಹಿರಿಯ ರಾಜಕಾರಣಿ. ಅದಕ್ಕಾಗಿ ಅವರ ಆಶೀರ್ವಾದ, ಮಾರ್ಗದರ್ಶನ ಪಡೆಯಲು ಕಾಂಗ್ರೆಸ್​ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ ಮಾಡಿರಬಹುದು. ಇದರಲ್ಲಿ ತಪ್ಪೇನಿದೆ ಎಂದು ರೇಣುಕಾಚಾರ್ಯ ಪ್ರಶ್ನಿಸಿದರು.

congress-dreaming-to-come-power-in-karnataka-says-bjp-mla-renukacharya
ಬಿಜೆಪಿ 150 ಸ್ಥಾನ ಗೆದ್ದು ಮತ್ತೆ ಅಧಿಕಾರಕ್ಕೆ, ಕಾಂಗ್ರೆಸ್​ಗೆ ಬರೋದು 50-60 ಸ್ಥಾನ ಮಾತ್ರ: ಶಾಸಕ ರೇಣುಕಾಚಾರ್ಯ
author img

By

Published : Jul 13, 2022, 6:57 PM IST

ದಾವಣಗೆರೆ: ರಾಜ್ಯದಲ್ಲಿ ಬಿಜೆಪಿ ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಗೆದ್ದು ಮತ್ತೆ ಅಧಿಕಾರಕ್ಕೆ ಬರುತ್ತದೆ. ಕಾಂಗ್ರೆಸ್ 50ರಿಂದ 60 ಸ್ಥಾನ ಮಾತ್ರ ಗೆಲ್ಲುತ್ತದೆ. ಆದರೆ, ಈಗಲೇ ಕಾಂಗ್ರೆಸ್​ನವರು ಸ್ವರ್ಗಕ್ಕೆ ಮೂರೇ ಗೇಣು ಎನ್ನುವ ಭ್ರಮೆಯಲ್ಲಿದ್ದಾರೆ ಎಂದು ಶಾಸಕ ಎಂ.ಪಿ‌.ರೇಣುಕಾಚಾರ್ಯ ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದ್ದಾರೆ.

ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ನವರಿಗೆ ಭಯ ಶುರುವಾಗಿದೆ‌. ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ. ಕಾಂಗ್ರೆಸ್​ನವರು ಜನರಿಗೆ ಕೆಲಸ ಮಾಡದೇ ಅಧಿಕಾರವನ್ನು ಎಂಜಾಯ್ ಮಾಡಿದ್ದಾರೆ. ನಾವು ಎಂಜಾಯ್ ಮಾಡಲ್ಲ. ಭ್ರಷ್ಟಾಚಾರ ಮುಕ್ತವಾಗಿ ಒಳ್ಳೆ ಕೆಲಸ ಮಾಡಿ ತೋರಿಸುತ್ತೇವೆ. ಅಲ್ಲದೇ, ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ನಾನು ಅವಕಾಶವಾದಿನೂ ಅಲ್ಲ. ನಾನು ಆಶಾವಾದಿ, ನಾನು ಅಧಿಕಾರ ಹುಡುಕಿಕೊಂಡು ಹೊಗಲ್ಲ. ಅದೇ ನನ್ನನ್ನು ಹುಡುಕಿಕೊಂಡು ಬರುತ್ತದೆ ಎಂದರು.

ಬಿಜೆಪಿ 150 ಸ್ಥಾನ ಗೆದ್ದು ಮತ್ತೆ ಅಧಿಕಾರಕ್ಕೆ, ಕಾಂಗ್ರೆಸ್​ಗೆ ಬರೋದು 50-60 ಸ್ಥಾನ ಮಾತ್ರ: ಶಾಸಕ ರೇಣುಕಾಚಾರ್ಯ

ನಿಗಮ ಮಂಡಳಿ ಅಧ್ಯಕ್ಷರ ಕೈಬಿಟ್ಟ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಿಗಮ ಮಂಡಳಿಯ 45 ಜನ ಅಧ್ಯಕ್ಷರನ್ನು ಸಿಎಂ ಬೊಮ್ಮಾಯಿ ಕೈಬಿಟ್ಟಿದ್ದಾರೆ. ಆದರೆ, ಬಹುತೇಕ ಬಿ.ಎಸ್.ಯಡಿಯೂರಪ್ಪ ಬೆಂಬಲಿಗರನ್ನು ಕೈ ಬಿಡಲಾಗಿದೆ ಎನ್ನುವುದು ಸರಿಯಲ್ಲ. ಎಲ್ಲರೂ ಕಮಲದ ಚಿಹ್ನೆಯಡಿಯಲ್ಲಿ ಕೆಲಸ ಮಾಡಿದವರು ಎಂದರು.

ಪಿಎಸ್​​ಐ ನೇಮಕಾತಿ ಹಗರಣ ಕುರಿತು ಈಗಾಗಲೇ ತನಿಖೆ ಜಾರಿಯಲ್ಲಿದೆ. ಸತ್ಯಾಂಶ ಹೊರ ಬರಲಿದೆ,. ಅಧಿಕಾರಿಗಳನ್ನು ರಕ್ಷಣೆ ಮಾಡುವ ಮಾತೇ ಇಲ್ಲ. ಸಿಐಡಿ ತನಿಖೆಯ ವೇಳೆ ಕೇಡರ್ ಅಧಿಕಾರಿಗಳನ್ನು ಬಂಧಿಸಲಾಗಿದೆ. ಇದೇ ರೀತಿಯಾಗಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಯಾರಿಗಾದರೂ ಬಂಧಿಸಿದ್ದರಾ?. ಕಾಂಗ್ರೆಸ್​ನವರು ಕೇವಲ ಆರೋಪ ಮಾಡುತ್ತಿದ್ದಾರೆ. ಸಿಎಂ ಹಾಗೂ ಗೃಹ ಸಚಿವರ ಬಗ್ಗೆ ದಾಖಲೆ ಬಿಡುಗಡೆ ಮಾಡಲಿ ಎಂದರು.

ಇದನ್ನೂ ಓದಿ: ರಾಮಸೇನಾದ ಜಿಲ್ಲಾಧ್ಯಕ್ಷನಿಂದ ಪ್ರೇಯಸಿಯ ಕೊಲೆ ಯತ್ನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.