ದಾವಣಗೆರೆ: ಮುಖ್ಯಮಂತ್ರಿಗಳು ಇಳಿವಯಸ್ಸಿನಲ್ಲಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಸಚಿವರಿಗೆ ಏನಾಗಿದೆ, ಸಚಿವರುಗಳು ಸರ್ಕಾರ, ಪಕ್ಷ, ಮುಖ್ಯಮಂತ್ರಿಗಳಿಗೆ ವರ್ಚಸ್ಸು ತರುವ ಕೆಲಸ ಮಾಡಬೇಕು ಎಂದು ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಪರೋಕ್ಷವಾಗಿ ಆರೋಗ್ಯ ಸಚಿವ ಸುಧಾಕರ್ಗೆ ಟಾಂಗ್ ನೀಡಿದರು.
ಹೊನ್ನಾಳಿಯಲ್ಲಿ ಮಾತನಾಡಿದ ಅವರು, ಕೆಲಸ ಮಾಡ್ತಾ ಇದ್ದೀವಾ ಇಲ್ವಾ ಅಂತ ಸಚಿವರುಗಳು ಆತ್ಮವಲೋಕನ ಮಾಡಿಕೊಳ್ಳಬೇಕು. ಯಾರಿಗೆ ಯಾವ ಜವಾಬ್ದಾರಿ ಇದೆ ಅಂತ ನಾವಾಗಲಿ, ಮುಖ್ಯಮಂತ್ರಿ ಹೇಳೋದಲ್ಲ ,ಅವರೆ ಅರ್ಥ ಮಾಡಿಕೊಳ್ಳಬೇಕು.
ನೀವು ಒಳ್ಳೇ ಕೆಲಸ ಮಾಡಿದ್ದರೆ ಯಾಕೆ ನಿಮ್ಮ ಜವಾಬ್ದಾರಿಗಳನ್ನ ಬೇರೆಯವರಿಗೆ ಹಂಚಿಕೆ ಮಾಡ್ತಾ ಇದ್ವಿ, ನಿಮ್ಮ ಕೆಲಸದ ಬಗ್ಗೆ ನಿಮಗೆ ನೀವೇ ಮಾರ್ಕ್ಸ್ ಕೊಟ್ಕೊಳ್ಳಿ ಎಂದು ಶಾಸಕ ರೇಣುಕಾಚಾರ್ಯ ಮತ್ತೆ ಸ್ವಪಕ್ಷದವರ ವಿರುದ್ಧವೇ ಗುಡುಗಿದ್ದಾರೆ.