ದಾವಣಗೆರೆ: ಹಲವು ವರ್ಗದವರು ಮೀಸಲಾತಿ ಹೋರಾಟ ಮಾಡಿ ಒತ್ತಡ ಹಾಕ್ತಾ ಇದ್ದು, ಎಲ್ಲವನ್ನೂ ಕೂಡ ಕೂಲಂಕಶವಾಗಿ ಪರಿಶೀಲನೆ ನಡೆಸಿ ನ್ಯಾಯ ಕೊಡಬೇಕು ಎಂಬ ಉದ್ದೇಶ ಸಿಎಂ ಅವರದ್ದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಕೆಲವು ಮೀಸಲಾತಿ ಬಗ್ಗೆ ಸಂವಿಧಾನದಲ್ಲಿ ಉಲ್ಲೇಖ ಆಗಿದೆ. ಜಡ್ಜ್ಮೆಂಟ್ ಕೂಡ ಆಗಿದ್ದು, ತಮಿಳುನಾಡಿನ 50% ಹೆಚ್ಚು ಮೀಸಲಾತಿ ಹಾಗೂ ಶೆಡ್ಯುಲ್ 9 ಬಗ್ಗೆ ಕೋರ್ಟ್ ಪರಾಮರ್ಶೆ ಮಾಡಬೇಕಿದೆ. ಬ್ಯಾಕ್ವರ್ಡ್ ಕ್ಲಾಸ್ಗೆ ಯಾರು ಸೇರಬೇಕು ಎಂಬ ಅಧ್ಯಯನ ಕೂಡ ಇದೆ. ಕೇಂದ್ರದಲ್ಲಿ ಎಸ್ಸಿ, ಎಸ್ಟಿ ಕಮಿಷನ್ ಇದೆ. ಅರ್ಜಿಗಳನ್ನು ಕಮಿಷನ್ಗೆ ಕಳುಹಿಸಲು ಶಿಫಾರಸು ಮಾಡಬೇಕಿದೆ. ನಂತರ ಒಪ್ಪಿಗೆ ಆದರೆ ಅನುಷ್ಠಾನ ಚಿಂತನೆ ಮಾಡಬೇಕಿದೆ. ಸಿಎಂ ಬಿಎಸ್ವೈ ಈ ಬಗ್ಗೆ ಕಾನೂನು ತಜ್ಞರ ಜೊತೆ ಚರ್ಚೆ ಮಾಡುತ್ತಿದ್ದು, ಸಮಗ್ರವಾಗಿ ಎಲ್ಲರಿಗೂ ನ್ಯಾಯ ಕೊಡಿಸುವ ಕೆಲಸ ಮಾಡುತ್ತಾರೆ ಎಂದು ಭರವಸೆ ನೀಡಿದರು.
ಇನ್ನು ಕಲ್ಲು ಕ್ವಾರಿ ಗಣಿಗಾರಿಕೆಗಳಲ್ಲಿ ಜಿಲೆಟಿನ್ ಸ್ಫೋಟದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಯ್ದೆ ಪ್ರಕಾರ ಗಣಿಗಾರಿಕೆ ಮಾಡಬೇಕಾಗುತ್ತೆ. ಆದರೆ ಕೆಲವರು ಅದನ್ನು ಉಲ್ಲಂಘನೆ ಮಾಡುತ್ತಿದ್ದು, ಲೈಸೆನ್ಸ್ ಇಲ್ಲದ ಗಣಿಗಾರಿಕೆ ಮೇಲೆ ಡ್ರೈವ್ ಮಾಡಬೇಕು ಎಂಬ ಆಡಿಟ್ ಮಾಡುತ್ತೇವೆ. ರಾಜ್ಯ ಪೊಲೀಸ್ ಹಾಗೂ ಗಣಿ ಇಲಾಖೆಯಿಂದ ಸಮಗ್ರ ಜಂಟಿ ಕಾರ್ಯಾಚರಣೆ ಮಾಡುತ್ತೇವೆ ಎಂದರು.
ಡಿಜೆ, ಕೆಜಿ ಹಳ್ಳಿ ಪ್ರಕರಣದ ಬಗ್ಗೆ ಮಾತನಾಡಿ, ಗಂಭೀರವಾದ ಜಾರ್ಜ್ಶೀಟ್ ಹಾಕಲಾಗಿದ್ದು, ಈ ಬಗ್ಗೆ ಕೋರ್ಟ್ಲ್ಲಿ ತೀರ್ಮಾನವಾಗುತ್ತದೆ ಎಂದು ಮಾಹಿತಿ ನೀಡಿದರು.