ದಾವಣಗೆರೆ : ಗೋದಾಮಿನಲ್ಲಿ ದಾಸ್ತಾನಿಟ್ಟಿದ್ದ ಬರೋಬ್ಬರಿ 18 ಲಕ್ಷ ರೂಪಾಯಿ ಮೌಲ್ಯದ ಐಟಿಸಿ ಕಂಪನಿಯ 12 ಸಿಗರೇಟ್ ಬಾಕ್ಸ್ಗಳನ್ನು ಕಳ್ಳತನ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನಗರದ ವಿದ್ಯಾನಗರದ 17ನೇ ಕ್ರಾಸ್ನ ಶ್ರೀ ಬಾಲಾಜಿ ಏಜೆನ್ಸಿಯನ್ನು ಐಟಿಸಿ ಕಂಪನಿಯ ವಿತರಕರಾಗಿದ್ದ ಸಂತೋಷ್ ಕುಮಾರ್ ನಡೆಸುತ್ತಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಎಂದಿನಂತೆ ಐಟಿಸಿ ಕಂಪನಿಯ ಸಿಗರೇಟ್, ಬಿಸ್ಕೇಟ್ ಸೇರಿ ಮತ್ತಿತರ ಸರಕುಗಳು ಬಂದಿದ್ದು, ಕೆಲ ಸರಕುಗಳನ್ನು ಚಿಲ್ಲರೆ ಮಾರಾಟಗಾರರಿಗೆ ಮಾರಾಟ ಮಾಡಿದ್ದಾರೆ. ಸಂಜೆ ಗೋದಾಮಿಗೆ ಬೀಗ ಹಾಕಿದ್ದಾರೆ. ಆದ್ರೆ, ಬೆಳಗ್ಗೆ ಬಂದು ನೋಡಿದ್ರೆ ಕಳ್ಳತನವಾಗಿರುವುದು ಗೊತ್ತಾಗಿದೆ.
ಇದನ್ನೂ ಓದಿ: ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ಗೆ ಕೊಲೆ ಬೆದರಿಕೆ ಪತ್ರ
ಗೋದಾಮಿನ ಬಾಗಿಲು ಒಡೆದು ಒಳ ನುಗ್ಗಿದ ದುಷ್ಕರ್ಮಿಗಳು, ಐಟಿಸಿ ಕಂಪನಿಯ 12 ಸಿಗರೇಟ್ ಬಾಕ್ಸ್ಗಳು ಮತ್ತು ಗೋದಾಮಿಗೆ ಅಳವಡಿಸಿದ್ದ ಸಿಸಿಟಿವಿ ಡಿವಿಆರ್ ಕಿತ್ತುಕೊಂಡು ಹೋಗಿದ್ದಾರೆ. ಇವುಗಳ ಮೌಲ್ಯ ಒಟ್ಟು 18 ಲಕ್ಷ ರೂ. ಆಗಿದೆ.
ಆರೋಪಿಗಳನ್ನು ಬಂಧಿಸಿ ನ್ಯಾಯ ದೊರಕಿಸಿಕೊಡಬೇಕು ಎಂದು ಸಂತೋಷ್ ಕುಮಾರ್ ವಿದ್ಯಾನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.