ETV Bharat / state

ಸೇವೆ ಖಾಯಂಗೊಳಿಸಲು ಒತ್ತಾಯಿಸಿ ನೌಕರರ ಪ್ರತಿಭಟನೆ... - Davanagere protest news

ಸೇವೆ ಖಾಯಂಗೆ ಒತ್ತಾಯಿಸಿ ದಾದಿಯರು, ಜಿಲ್ಲಾ ಚಿಗಟೇರಿ ಆಸ್ಪತ್ರೆಯ ನೌಕರರು ದಾವಣಗೆರೆ ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ‌ ನಡೆಸಿದರು.

Davangere
ಖಾಯಂಯೇತರ ನೌಕರರ ಪ್ರತಿಭಟನೆ
author img

By

Published : Oct 1, 2020, 5:30 PM IST

ದಾವಣಗೆರೆ: ಸೇವೆ ಖಾಯಂಗೆ ಒತ್ತಾಯಿಸಿ ರಾಜ್ಯ ಸರ್ಕಾರದ ಖಾಯಂಯೇತರ ನೌಕರರ ಒಕ್ಕೂಟದ ಜಿಲ್ಲಾ ಘಟಕದ ನೇತೃತ್ವದಲ್ಲಿ ದಾದಿಯರು, ಜಿಲ್ಲಾ ಚಿಗಟೇರಿ ಆಸ್ಪತ್ರೆಯ ನೌಕರರು ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ‌ ನಡೆಸಿದರು.

ಕಳೆದ ಏಳು ದಿನಗಳಿಂದ ಕೆಲಸ ಬಹಿಷ್ಕರಿಸಿ ಮುಷ್ಕರ ನಡೆಸುತ್ತಿರುವ ಖಾಯಂಯೇತರ ನೌಕರರ ಬೇಡಿಕೆ‌ ಈಡೇರಿಸುವತ್ತ ಸರ್ಕಾರ ಮುಂದಾಗುತ್ತಿಲ್ಲ. ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದೇವೆ. ಬೇರೆ ಸರ್ಕಾರಿ ನೌಕರರಿಗೆ ನೀಡುವ ಸೌಲಭ್ಯಗಳನ್ನು ನಮಗೂ ನೀಡಬೇಕು. ಸುಮಾರು ಹದಿನಾರು ವರ್ಷಗಳಿಂದ ಕೆಲಸ ಮಾಡುತ್ತಿರುವ ನೌಕರರಿಗೆ ನೀಡುತ್ತಿರುವ ವೇತನ ತುಂಬಾನೇ ಕಡಿಮೆ ಇದೆ ಎಂದು ಅಳಲು ತೋಡಿಕೊಂಡರು.

ದಾದಿಯರು, ಜಿಲ್ಲಾ ಚಿಗಟೇರಿ ಆಸ್ಪತ್ರೆಯ ನೌಕರರು ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ‌ ನಡೆಸಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ನರ್ಸ್​ಗಳು ಕೊರೊನಾದಂಥ ಸಂಕಷ್ಟದ ವೇಳೆಯಲ್ಲಿ ಹಗಲುರಾತ್ರಿ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ಆದ್ರೆ ಸೇವೆಗೆ ತಕ್ಕಂತೆ ಸಂಬಳ‌ ನೀಡುತ್ತಿಲ್ಲ.‌ ಈಗ ನೀಡುತ್ತಿರುವ ವೇತನದಿಂದ ಮನೆ ಖರ್ಚುವೆಚ್ಚ, ಮಕ್ಕಳ ವಿದ್ಯಾಭ್ಯಾಸಕ್ಕೆ ಸಾಕಾಗುತ್ತಿಲ್ಲ. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ ಎಂಬುದಷ್ಟೇ ನಮ್ಮ ಬೇಡಿಕೆಯಾಗಿದ್ದು, ಆದಷ್ಟು ಬೇಗ ಬೇಡಿಕೆ ಈಡೇರಿಸದಿದ್ದರೆ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.