ದಾವಣಗೆರೆ : ಡಿಕೆಶಿಗೆ ಸಿದ್ದರಾಮಯ್ಯ ಕಂಡ್ರೆ ಆಗಲ್ಲ. ಸಿದ್ದರಾಮಯ್ಯಗೆ ಡಿಕೆಶಿ ಕಂಡ್ರೆ ಆಗಲ್ಲ ಎಂದು ಕೇಂದ್ರ ಸಚಿವ ಭಗವಂತ ಖೂಬಾ ವ್ಯಂಗ್ಯವಾಡಿದರು.
ದಾವಣಗೆರೆ ವಿವಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನಲ್ಲಿ ಅನೇಕ ಗುಂಪುಗಳಿವೆ. ಕಾಂಗ್ರೆಸ್ನಲ್ಲಿ ಆಪ್ತರ ಘರ್ಷಣೆ ನಡೆಯುತ್ತಲೇ ಇರುತ್ತೆ. ಈಗಾಗಲೇ ಇದರ ಬಗ್ಗೆ ಸಲೀಂ, ಉಗ್ರಪ್ಪ ಸತ್ಯ ಬಾಯ್ಬಿಟ್ಟಿದ್ದಾರೆ.
ಡಿ ಕೆ ಶಿವಕುಮಾರ್ ಅವರದ್ದಷ್ಟೇ ಅಲ್ಲ, ಕಾಂಗ್ರೆಸ್‌ನ ಎಲ್ಲರ ಸಂಸ್ಕೃತಿ ಇದೇ ಆಗಿದೆ. ಇದು ಕಾಂಗ್ರೆಸ್‌ನ ಒಳಜಗಳದ ನಿದರ್ಶನ. ಇನ್ನೂ ಹಲವು ಸತ್ಯಗಳು ಹೊರ ಬರಲಿದೆ ಕಾದು ನೋಡಿ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಖೂಬಾ ಹರಿಹಾಯ್ದರು.
ಹೆಚ್ಡಿಕೆ ಆರ್ಎಸ್ಎಸ್ ಹೇಳಿಕೆ ವಿಚಾರಕ್ಕೆ ಖೂಬಾ ಟಾಂಗ್ : ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರಿಗೆ ಅನುಭವದ ಕೊರತೆ ಇದೆ. ಚಿಲ್ಲರೆ ರಾಜಕೀಯ ಮಾಡಲು ಈ ಹೇಳಿಕೆ ನೀಡಿದ್ದಾರೆ. ಇಂತಹ ಹೇಳಿಕೆಗಳಿಂದ ನಿಮ್ಮ ಮರ್ಯಾದೆಯನ್ನ ನೀವೇ ಕಳೆದುಕೊಳ್ಳುತ್ತಿದ್ದೀರಿ.
ಮುಸ್ಲಿಂ ವೋಟಿಗಾಗಿ ಈ ರೀತಿ ಹೇಳಿಕೆಗಳು ಹೊರ ಬರುತ್ತಿವೆ. ಒಂದೆರಡು ದಿನ ಆರ್ಎಸ್ಎಸ್ ಕಚೇರಿಯಲ್ಲಿ ಬಂದು ಕೂರಿ ಅಧ್ಯಯನ ಮಾಡಿ,ಆರ್ಎಸ್ಎಸ್ ಒಂದು ಸೇವಾ ಸಂಸ್ಥೆ, ನಿಸ್ವಾರ್ಥ ಸೇವೆ ಮಾಡುವ ಸಂಘ ಎಂದು ಸಮರ್ಥಿಸಿಕೊಂಡರು.