ETV Bharat / state

ಹರಿಹರ ತಾಲೂಕಿನಲ್ಲಿ ಕೊರೊನಾ ಕೇಸ್ ಪತ್ತೆ: ಜನರಲ್ಲಿ ಆತಂಕ - Harihara latest news

ಹರಿಹರ ತಾಲೂಕಿನ ರಾಜನಹಳ್ಳಿ ಗ್ರಾಮದಲ್ಲಿ ಕೊರೊನಾ ಕೇಸ್ ಪತ್ತೆಯಾಗಿದೆ. ಇದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

Harihara
Harihara
author img

By

Published : Jun 19, 2020, 9:22 PM IST

ಹರಿಹರ: ತಾಲೂಕಿನ ರಾಜನಹಳ್ಳಿ ಗ್ರಾಮದಲ್ಲಿ ಕೊರೊನಾ ಕೇಸ್ ಪತ್ತೆಯಾದ ಹಿನ್ನೆಲೆಯಲ್ಲಿ ಇಂದು ನಗರದ ಮಾರುಕಟ್ಟೆಯಲ್ಲಿ ಜನದಟ್ಟಣೆ ವಿರಳವಾಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.

ನಗರದಲ್ಲಿರುವ ಮಹಿಳೆಯ ಕುಟುಂಬ ಸದಸ್ಯರನ್ನು ಹೋಂ ಕೊರಂಟೈನ್ ಮಾಡಿ ಅವರ ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಲಾಗಿದೆ. ಇವರು ವಾಸವಿರುವ ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶಕ್ಕೆ ನಗರಸಭೆಯಿಂದ ಕ್ರಿಮಿನಾಶಕ ಸಿಂಪಡಿಸಲಾಯಿತು.

ಅಷ್ಟೇ ಅಲ್ಲದೆ ಮಹಿಳೆ ಚಿಕಿತ್ಸೆಗೆಂದು ಹೋಗಿದ್ದ ಖಾಸಗಿ ನರ್ಸಿಂಗ್ ಹೋಮ್‌ಅನ್ನು ಸೀಲ್ ಡೌನ್ ಮಾಡಿ ಅಲ್ಲಿನ ವೈದ್ಯರು ಹಾಗೂ ಸಿಬ್ಬಂದಿಗೆ ಹೋಂ ಕೊರಂಟೈನ್ ಮಾಡಲಾಗಿದೆ.

ಸೋಂಕಿತಳ ಎರಡನೇ ಹಂತದ ಸಂಪರ್ಕ ಹೊಂದಿರುವ ರಾಜನಹಳ್ಳಿ ಗ್ರಾಮದ ಸುಮಾರು 53 ಜನ ಹಾಗೂ ನಗರದ ಏಳು ಜನರ ಗಂಟಲು ದ್ರವವನ್ನು ಪರೀಕ್ಷೆಗೆಂದು ಕಳಿಸಲಾಗಿದೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.