ETV Bharat / state

ದಾವಣಗೆರೆ: ಅಧಿಕಾರಿಗಳೊಂದಿಗಿ ಭೈರತಿ ಸಭೆ, ಗೈರಾದವರಿಗೆ ಎಚ್ಚರಿಕೆ!

author img

By

Published : Sep 3, 2022, 4:25 PM IST

ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಅಧಿಕಾರಿಗಳೊಂದಿಗೆ ಸಚಿವ ಭೈರತಿ ಬಸವರಾಜ್ ಸಭೆ ನಡೆಸಿದ್ದು, ಸಭೆಯಲ್ಲಿ ಗೈರಾದ ಅಧಿಕಾರಿಗಳಿಗೆ ಎಚ್ಚರಿಗೆ ನೀಡಿದರು.​

kn_dvg_03_03_bhairati_garam_av_7204336.
ಅಧಿಕಾರಿಗಳೊಂದಿಗಿ ಸಚಿವರ ಸಭೆ

ದಾವಣಗೆರೆ: ಮುಂದಿನ ಸಭೆಯಲ್ಲಿ ಪ್ರತಿಯೊಬ್ಬ ಅಧಿಕಾರಿ ಇರಬೇಕು, ನಾನು ಅಲ್ಲಿದೀನಿ ಇಲ್ಲಿದೀನಿ ಅಂದ್ರೇ ನಾನು ಕೇಳಲ್ಲ ಎಂದು ಸಭೆಗೆ ಗೈರಾದ ಅಧಿಕಾರಿಗಳಿಗೆ ಸಚಿವ ಭೈರಾತಿ ಬಸವರಾಜ್​ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಅಧಿಕಾರಿಗಳೊಂದಿಗೆ ಸಚಿವರ ಸಭೆ ಏರ್ಪಡಿಸಲಾಗಿತ್ತು. ಸಚಿವರ ಸಭೆಗೆ ಅಧಿಕಾರಿಗಳು ಗೈರಾಗಿದ್ದ ಹಿನ್ನೆಲೆ ಅಧಿಕಾರಿಗಳ ವಿರುದ್ಧ ಸಚಿವ ಭೈರತಿ ಬಸವರಾಜ್ ಗರಂ ಆದ್ರು. ನೋಡ್ರೀ ಇದೇ ತಿಂಗಳು 24ಕ್ಕೆ ಮತ್ತೇ ಸಭೆ ಕರೆದಿದ್ದೇನೆ.

ಅಧಿಕಾರಿಗಳೊಂದಿಗಿ ಸಚಿವರ ಸಭೆ

ಅಂದು ಎಲ್ಲಾ ಮಾಹಿತಿಯೊಂದಿಗೆ ಪ್ರತಿಯೊಬ್ಬ ಅಧಿಕಾರಿಗಳು ಸಭೆಯಲ್ಲಿರಬೇಕು, ನಾನು ಅಲ್ಲಿದೀನಿ ಇಲ್ಲಿದೀನಿ ಎಂದು ನೆಪ ಹೇಳಿದರೆ ನಾನು ಕೇಳುವುದಿಲ್ಲ, ಸಭೆಯಲ್ಲಿ ಪ್ರತಿಯೊಂದು ಇಲಾಖೆಗಳಲ್ಲಿ ಏನಾಗಿದೆ, ಇಲಾಖೆ ಕಾರ್ಯಕ್ರಮಗಳು ಸೇರಿದಂತೆ ಸಮಗ್ರ ಅಭಿವೃದ್ಧಿ ಬಗ್ಗೆ ಮಾಹಿತಿ ನೀಡಬೇಕು. ಇನ್ನೂ ವಿಶೇಷವಾಗಿ ಮಳೆಯಿಂದ ಹಾನಿಯಾಗಿರುವ ಬೆಳೆ, ಮನೆಗಳ ಬಗ್ಗೆ ಮಾಹಿತಿ ಕಲೆಹಾಕ್ಬೇಕು ಹೇಳಿದರು.

ಇನ್ನು ಕೃಷಿ ಹಾಗೂ ತೋಟಗಾರಿಗೆ ಅಧಿಕಾರಿಗಳು ಮಳೆಗಾಲದಲ್ಲಿ ಹೆಚ್ಚು ಹಾನಿ ಯಾಗಿರುವ ಪ್ರದೇಶಗಳ ಬಗ್ಗೆ ಗಮನ ಹರಿಸಿ, ಜಾಯಿಂಟ್ ಸರ್ವೆ ಮಾಡ್ತಿಲ್ಲ, ಜಾಯಿಂಟ್ ಸರ್ವೆ ಮಾಡಲು ನಿಮ್ಮ ಬಳಿ ತಂಡ ಇಲ್ಲ ಎಂಬ ಲೋಪ ಕೇಳಿಬರುತ್ತಿದೆ. ಇನ್ನುಂದೇ ಎಲ್ಲಿಯಾದರೂ ಲೋಪ ಕಂಡು ಬಂದಲ್ಲಿ ನೀವೇ ಹೊಣೆಯಾಗಿರುತ್ತೀರಿ. ತಕ್ಷಣ ಹಾನಿಯಾದ ಬೆಳೆ ಬಗ್ಗೆ ಜಾಯಿಂಟ್ ಸರ್ವೆ ಮಾಡಲು ತಂಡ ರಚಿಸಿ, ಯಾರಾದರೂ ದೂರವಾಣಿ ಕರೆ ಮಾಡಿ ಸಬೂಬು ಹೇಳಿದ್ರೇ ನಾನು ಕೇಳಲ್ಲ ಎಂದು ಕೃಷಿ ಹಾಗು ತೋಟಗಾರಿಗೆ ಇಲಾಖೆಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಜವಾಬ್ದಾರಿ ನೀಡಿದ್ದಾರೆ, ರಾಜ್ಯದಲ್ಲಿ 140 ಸ್ಥಾನ ಗೆಲ್ಲಿಸುತ್ತೇನೆ : ಬಿ.ಎಸ್. ಯಡಿಯೂರಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.