ETV Bharat / state

ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಚುನಾವಣೆ: ಬಿಜೆಪಿ ತೆಕ್ಕೆಗೆ ಮೇಯರ್ ಗಾದಿ!

ಮೂರನೇ ಬಾರಿಯೂ ಕೂಡ ಬಿಜೆಪಿ ಪಕ್ಷ ಪಾಲಿಕೆಯ ಮೇಯರ್ ಹಾಗೂ ಉಪ ಮೇಯರ್ ಸ್ಥಾನಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತು. ಇನ್ನು ಮೇಯರ್ ಗಾದಿ ಬಿಜೆಪಿ ಪಾಲಾಗುತ್ತಿದ್ದಂತೆ ಹಿರಿಯ ಕಾಂಗ್ರೆಸ್ ಶಾಸಕ ಹಾಗೂ ಪರಿಷತ್ ಸದಸ್ಯ ಮೋಹನ್ ಕೊಂಡಜ್ಜಿ ಇಬ್ಬರು ಎದ್ದು ಹೋದರು.

bjp-wins-mayar-election-in-davanagere
ಜಿ. ಎಂ ಸಿದ್ದೇಶ್ವರ್
author img

By

Published : Feb 25, 2022, 5:21 PM IST

ದಾವಣಗೆರೆ: ಇಂದು ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಚುನಾವಣೆ ನಡೆದಿದ್ದು, ಮೂರನೇ ಬಾರಿಗೆ ಪಾಲಿಕೆ ಅಧಿಕಾರದ ಚುಕ್ಕಾಣಿ ಬಿಜೆಪಿ ಪಾಲಾಗಿದೆ. ಮೇಯರ್ ಆಗಿ 30 ನೇ ವಾರ್ಡ್​ನ ಬಿಜೆಪಿ ಕಾರ್ಪೋರೇಟರ್ ಜಯಮ್ಮ ಗೋಪಿನಾಯ್ಕ್ ಆಯ್ಕೆ ಆಗಿದ್ದು, ಎಸ್ ಸಿ ಮಹಿಳೆಗೆ ಮೀಸಲಾಗಿರುವ ಮೇಯರ್ ಸ್ಥಾನವನ್ನು ಬಿಜೆಪಿ ತನ್ನ ತೆಕ್ಕೆಗೆ ಹಾಕಿಕೊಂಡಿದೆ.

ಸಂಸದ ಜಿ. ಎಂ ಸಿದ್ದೇಶ್ವರ್ ಮಾತನಾಡಿದರು

ಇನ್ನು ಉಪಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲು ಬಂದಿದ್ದು, 8 ನೇ ವಾರ್ಡ್​ನ ಬಿಜೆಪಿ ಕಾರ್ಪೋರೇಟರ್ ಗಾಯತ್ರಿಬಾಯಿಯವರು ಆಯ್ಕೆಯಾಗಿದ್ದಾರೆ. ಮೂರನೇ ಬಾರಿಯೂ ಕೂಡ ಬಿಜೆಪಿ ಪಕ್ಷ ಪಾಲಿಕೆಯ ಮೇಯರ್ ಹಾಗೂ ಉಪ ಮೇಯರ್ ಸ್ಥಾನಗಳನ್ನು ತನ್ನ ತೆಕ್ಕೆ ಹಾಕಿಕೊಂಡಿತು. ಇನ್ನು ಮೇಯರ್ ಗಾದಿ ಬಿಜೆಪಿ ಪಾಲಾಗುತ್ತಿದ್ದಂತೆ ಹಿರಿಯ ಕಾಂಗ್ರೆಸ್ ಶಾಸಕ ಹಾಗೂ ಪರಿಷತ್ ಸದಸ್ಯ ಮೋಹನ್ ಕೊಂಡಜ್ಜಿ ಇಬ್ಬರು ಎದ್ದು ಹೋಗಿದ್ರು.

ಮತದಾರರ ಬಲಾಬಲ..! ಪಾಲಿಕೆಯಲ್ಲಿ 18 ಬಿಜೆಪಿ, 4 ಪಕ್ಷೇತರ, ಒಬ್ಬ ಎಂಎಲ್​ಎ, ಎಂಪಿ, 5 ಎಂಎಲ್ ಸಿ ಸೇರಿ ಬಿಜೆಪಿ ಬಲಾಬಲ 29 ಇದ್ದು, ಇತ್ತ 21 ಕಾಂಗ್ರೆಸ್, ಒಬ್ಬ ಪಕ್ಷೇತರ, ಒಬ್ಬ ಎಂಎಲ್​ಎ, ಇಬ್ಬರು ಎಂಎಲ್​ಸಿ ಸೇರಿ 25 ಕಾಂಗ್ರೆಸ್ ಬಲಾಬಲ ಇರುವುದರಿಂದ ಮೇಯರ್ ಗಾದಿ ಬಿಜೆಪಿ ಪಾಲಾಗಿದೆ.

ಇನ್ನು ಜೆಡಿಎಸ್​ನ ಓರ್ವ ಮಹಿಳಾ ಸದಸ್ಯೆ ಚುನಾವಣೆಗೆ ಗೈರಾಗಿ ಬಿಜೆಪಿಗೆ ಬೆಂಬಲಿಸಿದ್ರು. ಇದೇ ವೇಳೆ ಸಂಸದ ಜಿ. ಎಂ ಸಿದ್ದೇಶ್ವರ್, ಬಿಜೆಪಿ ಶಾಸಕ ಎಸ್. ಎ ರವೀಂದ್ರನಾಥ್ ಹಾಗೂ ಹಿರಿಯ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ತಮ್ಮ ಹಕ್ಕು ಚಲಾಯಿಸಿದರು.

ಓದಿ: ಜಾತಿ ಪ್ರಮಾಣ ಪತ್ರಕ್ಕಾಗಿ ಮಕ್ಕಳ ಪರದಾಟ: ಅಧಿಕಾರಿಗಳ ವಿರುದ್ಧ ಪೋಷಕರ ಆಕ್ರೋಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.