ದಾವಣಗೆರೆ: ರಾಜ್ಯದಲ್ಲಿ ನಡೆಯುವ ಉಪಚುನಾವಣೆಯಲ್ಲಿ 15 ಬಿಜೆಪಿ ಅಭ್ಯರ್ಥಿಗಳು ವಿಜಯಶಾಲಿಯಾಗಲಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೇವೇಗೌಡರವರ ಕುಟುಂಬ ರಾಜಕಾರಣ ಮುಗಿದು ಅವರ ಅಂಗಡಿ ಬಂದ್ ಆಗಲಿದೆ. ಅನರ್ಹ ಶಾಸಕರಿಗೆ ಸುಪ್ರೀಂನಲ್ಲಿ ಸಿಹಿ ಸುದ್ದಿ ಸಿಗಲಿದೆ. ಬಿಜೆಪಿ ಸಂಘಟನೆಯಿಂದ ಬೆಳೆದ ಪಕ್ಷ, ಉಪಚುನಾವಣೆಯಲ್ಲಿ ಗೆದ್ದು ಬರುತ್ತೇವೆ ಎಂದರು.
ಸಿಎಂ ಯಡಿಯೂರಪ್ಪನವರ ಪತ್ನಿ ಸಾವಿನ ಬಗ್ಗೆ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ ರೇಣುಕಾಚಾರ್ಯ, ಕುಟುಂಬದ ವೈಯಕ್ತಿಕ ವಿಚಾರಗಳನ್ನು ಕೆದಕುವುದು ಸರಿಯಲ್ಲ. ಸಾವನ್ನು ಮುಂದಿಟ್ಟು ರಾಜಕಾರಣ ಮಾಡುವುದು ಸರಿಯಿಲ್ಲ. ಅಂದೇ ರಿಪೋರ್ಟ್ ಬಂದು ಸತ್ಯ ಎಲ್ಲರಿಗು ತಿಳಿದಿದೆ. ಈ ಬಗ್ಗೆ ಹೇಳಿಕೆ ಸರಿಯಲ್ಲ ಎಂದು ಕುಮಾರಸ್ವಾಮಿ ವಿರುದ್ಧ ಕಿಡಿ ಕಾರಿದರು.