ETV Bharat / state

ಮಾಡಾಳ್ ಫ್ಯಾಮಿಲಿ ಬಿಟ್ಟು ಬೇರೆಯವರಿಗೆ ಟಿಕೆಟ್ ಕೊಟ್ಟರೆ ಸರಿ ಇರಲ್ಲ: ಬಿಜೆಪಿ ಮುಖಂಡ ಉಮೇಶ್ ವಾರ್ನಿಂಗ್​ - ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ

ಲೋಕಾಯುಕ್ತ ದಾಳಿ ಪ್ರಕರಣದಲ್ಲಿ A1 ಆರೋಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರಿಗೆ ಟಿಕೆಟ್​ ನೀಡಬೇಕೆಂದು ಬಿಜೆಪಿ ಮುಖಂಡ ಉಮೇಶ್​ ಬಹಿರಂಗವಾಗಿ ಬೇಡಿಕೆ ಇಟ್ಟಿದ್ದಾರೆ.

ಬಿಜೆಪಿ ಮುಖಂಡ ಉಮೇಶ್
ಬಿಜೆಪಿ ಮುಖಂಡ ಉಮೇಶ್
author img

By

Published : Mar 17, 2023, 3:23 PM IST

ಬಿಜೆಪಿ ಮುಖಂಡ ಉಮೇಶ್

ದಾವಣಗೆರೆ : ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಕುಟುಂಬಕ್ಕೆ ಬಿಟ್ಟು ಅನ್ಯರಿಗೆ ಟಿಕೆಟ್ ಕೊಟ್ರೆ ಸರಿ ಇರಲ್ಲ. ತಳಮಟ್ಟದಿಂದ ಪಕ್ಷ ಕಟ್ಟಿದ್ದು ವಿರೂಪಾಕ್ಷಪ್ಪ ಅವರು. ಅವರು ಕಟ್ಟಿದ ಮನೆಯಲ್ಲಿ ಬೇರೆಯವರು ವಾಸ ಮಾಡಿದ್ರೆ ನಾವು ಸಹಿಸಲ್ಲ ಎಂದು ತುಂಬಿದ ಸಭೆಯಲ್ಲಿ ಮಾಡಾಳ್ ಬೆಂಬಲಗ ಹಾಗೂ ಸ್ಥಳೀಯ ಬಿಜೆಪಿ ಮುಖಂಡ ಉಮೇಶ್ ಆಕ್ರೋಶ ಹೊರಹಾಕಿದ್ರು. ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಬಿಟ್ಟು ಬೇರೆಯವರಿಗೆ ಟಿಕೆಟ್ ಕೊಟ್ಟರೆ ಬಿಜೆಪಿ ಕೇವಲ ಎರಡ್ಮೂರು ಸಾವಿರ ಮತಗಳನ್ನು ಪಡೆಯಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಕಳೆದ ದಿನ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕು ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪರ ಅವರು ಬ್ಯಾಟ್ ಬೀಸಿದರು. ಕಳೆದ ದಿನ ಚನ್ನಗಿರಿಯಲ್ಲಿ‌ ನಡೆದ ವಿಜಯ ಸಂಕಲ್ಪಯಾತ್ರೆ ಪೂರ್ವಾಭಾವಿ ಸಭೆಯಲ್ಲಿ ಕಾರ್ಯಕರ್ತರಿಂದ ಮಾಡಾಳ್ ಕುಟುಂಬಕ್ಕೆ ಟಿಕೆಟ್​​ ನೀಡಬೇಕು ಎಂಬ ಒತ್ತಾಯ ಕೇಳಿಬಂತು.

ವಿಜಯ ಸಂಕಲ್ಪ ಯಾತ್ರೆಗೆ ಮಾಡಾಳ್ ವಿರೂಪಾಕ್ಷಪ್ಪ ಸೇರಿದಂತೆ ಅವರ ಕುಟುಂಬಸ್ಥರು ಭಾಗವಹಿಸಬೇಕು. ಇಲ್ಲವಾದರೆ ನಾವು ಯಾರೂ ಕೂಡಾ ವಿಜಯಸಂಕಲ್ಪ ಯಾತ್ರೆಗೆ ಹೋಗುವುದಿಲ್ಲ. ಲೋಕಾಯುಕ್ತ ದಾಳಿ ಪ್ರಕರಣದಲ್ಲಿ A1 ಆರೋಪಿಯಾಗಿರುವ ಶಾಸಕ‌ ಮಾಡಾಳ್ ವಿರೂಪಾಕ್ಷಪ್ಪನವರಿಗೆ ಟಿಕೆಟ್ ಕೊಡ್ಬೇಕು. ಇದು ಎಚ್ಚರಿಕೆ ಅಂತಾದರೂ ತಿಳಿದುಕೊಳ್ಳಿ, ಇಲ್ಲ ಸಲಹೆ ಅಥವಾ ಬೇಡಿಕೆ ಎಂದಾದರೂ ಬಿಜೆಪಿಯ ವರಿಷ್ಠರು ತಿಳಿದುಕೊಳ್ಳಬೇಕು ಎಂದು ಬಹಿರಂಗವಾಗಿಯೇ ಉಮೇಶ್ ಹೇಳಿದ್ದಾರೆ.

ಇದನ್ನೂ ಓದಿ : ಬೊಮ್ಮಾಯಿ ಕಟ್ಟಿ ಹಾಕಲು ಕಾಂಗ್ರೆಸ್​ ಕಾರ್ಯತಂತ್ರ; ಶಿಗ್ಗಾಂವಿಯಿಂದ ವಿನಯ್ ಕುಲಕರ್ಣಿ ಕಣಕ್ಕೆ?

ಇದೇ 19 ರಂದು ನಡೆಯಲಿದೆ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ: ಇದೇ ತಿಂಗಳು 19 ರಂದು ಹಮ್ಮಿಕೊಂಡಿರುವ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾಡಾಳ್ ಕುಟುಂಬಸ್ಥರಿಗೆ ಅವಕಾಶ ನೀಡಬೇಕು. ಇಲ್ಲವಾದರೆ ನಾವು ಯಾರೂ ಕೂಡ ಪಾಲ್ಗೊಳ್ಳುವುದಿಲ್ಲ ಎಂದು ಕಾರ್ಯಕರ್ತರು ಪಟ್ಟು ಹಿಡಿದರು.‌

ಇದನ್ನೂ ಓದಿ : ಮಂಡ್ಯ ಗೌಡರ ಬಗ್ಗೆ ಮುನಿರತ್ನಗೆ ಏನು ಗೊತ್ತು?: ಹೆಚ್​.ಡಿ.ಕುಮಾರಸ್ವಾಮಿ

ಈ ವೇಳೆ ಮಾತನಾಡಿದ ಬಿಜೆಪಿ ಮುಖಂಡ ಉಮೇಶ್, ಚನ್ನಗಿರಿಯನ್ನು ಬಿಜೆಪಿಯ ಭದ್ರಕೋಟೆಯನ್ನಾಗಿ ಮಾಡಿದ್ದು ಮಾಡಾಳ್ ವಿರೂಪಾಕ್ಷಪ್ಪ ಅವರು. ಆದರೆ, ಈಗ ಆರೋಪ ಬಂದಿದೆ ಎಂದ ಮಾತ್ರಕ್ಕೆ ಹಲವರು ನಾನೇ ಅಭ್ಯರ್ಥಿ ಎಂದು ಓಡಾಡುತ್ತಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದರು.

ಇದನ್ನೂ ಓದಿ : 65 ಅಡಿ ಎತ್ತರದ ಅಕ್ಕಮಹಾದೇವಿ ಪುತ್ಥಳಿ ಉದ್ಘಾಟಿಸಿದ ಸಿಎಂ ಬೊಮ್ಮಾಯಿ

ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಅವರಿಂದ ಯಾವುದೇ ಶ್ರಮವಿಲ್ಲ. ಆದರೆ ಈಗ ತಾವೇ ಅಭ್ಯರ್ಥಿ ಎಂದು ಓಡಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಿಜಯಸಂಕಲ್ಪ ಯಾತ್ರೆಗೆ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಅದ್ದೂರಿಯಾಗಿ ಕರೆತರುತ್ತೇವೆ ಎಂದು ಬಿಜೆಪಿಯ ತಾಲೂಕು ಉಸ್ತುವಾರಿಗಳ ಸಮ್ಮುಖದಲ್ಲಿ ನಡೆದ ಪೂರ್ವಾಭಾವಿ ಸಭೆಯಲ್ಲಿ ಬೆಂಬಲಿಗರು ಬಹಿರಂಗ ಹೇಳಿಕೆಗಳನ್ನು ಕೊಟ್ಟರು.

ಇದನ್ನೂ ಓದಿ : ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್ ದರ ವಿರೋಧಿಸಿ ಹೆಚ್.ವಿಶ್ವನಾಥ್ ಪ್ರತಿಭಟನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.