ದಾವಣಗೆರೆ: ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ದೇಶ್ವರ್ ಅವರು ತಮ್ಮ ಪ್ರತಿಸ್ಪರ್ಧಿ ಹೆಚ್.ಬಿ. ಮಂಜಪ್ಪ ವಿರುದ್ಧ ಗೆಲುವು ಸಾಧಿಸುವ ಮೂಲಕ ನಾಲ್ಕನೇ ಬಾರಿ ಸಂಸತ್ ಬಾಗಿಲು ತಟ್ಟಿದ್ದಾರೆ. ಇದು ಅತ್ಯದ್ಭುತ ಗೆಲುವು ಎಂದು ಜಗಳೂರು ಶಾಸಕ ಎಸ್.ವಿ. ರಾಮಚಂದ್ರಪ್ಪ ಸಂತಸ ವ್ಯಕ್ತಪಡಿಸಿದರು.
ಈಟಿವಿ ಭಾರತ್ ಜೊತೆ ಮಾತನಾಡಿದ ಅವರು, ಮೋದಿಯವರ ಅಭಿವೃದ್ಧಿ ಕೆಲಸಗಳು ಹಾಗೂ ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ಮಾಡಿದ್ದ ಕಾರ್ಯಗಳಿಂದ ಬಿಜೆಪಿ ಮತ್ತೆ ಗೆಲುವು ಸಾಧಿಸಿದೆ. ಸಿದ್ದೇಶ್ವರ್ ಅವರು ಮತ್ತೊಮ್ಮೆ ಗೆಲ್ಲುವುದು ಅವಶ್ಯವಾಗಿತ್ತು. ಇಬ್ಬರು ಸೇರಿ ಜಗಳೂರು ತಾಲೂಕು ಅಭಿವೃದ್ಧಿಗೆ ಪಣ ತೊಡುತ್ತೇವೆ ಎಂದು ವಾಗ್ಧಾನ ಮಾಡಿದರು.
ಇನ್ನು ಜಿ.ಎಂ. ಸಿದ್ದೇಶ್ವರ್ ಅವರು ಲೋಕಸಭೆಗೆ ಪುನರಾಯ್ಕೆಯಾದ ಪ್ರಯುಕ್ತ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ವಿಜಯೋತ್ಸವ ಆಚರಿಸಿದರು.