ದಾವಣಗೆರೆ:ಉತ್ತರ ಕರ್ನಾಟಕದಲ್ಲಿ ನೆರೆ ಪ್ರವಾಹದಿಂದ ತತ್ತರಿಸಿ ಹೋದ ಸಂತ್ರಸ್ತರಿಗೆ ದಾವಣಗೆರೆಯಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ದಿನನಿತ್ಯದ ವಸ್ತುಗಳನ್ನು ಸಂಗ್ರಹಿಸಿ ಉತ್ತರ ಕರ್ನಾಟಕ ಭಾಗಕ್ಕೆ ತಲುಪಿಸಲು ಮುಂದಾಗಿದ್ದಾರೆ.
ಒಂದು ವಾರಕ್ಕೂ ಹೆಚ್ಚು ಕಾಲ ನಗರಾದಾದ್ಯಂತ ಪರಿಹಾರ ಸಾಮಾಗ್ರಿ, ನಗದು ಸಂಗ್ರಹಿಸಿದ್ದ ಕಾರ್ಯಕರ್ತರು, ಇಂದು ಉತ್ತರ ಕರ್ನಾಟಕಕ್ಕೆ ಪ್ರಯಾಣ ಬೆಳೆಸಿದರು. 3 ಲಕ್ಷ ರೂಪಾಯಿಗೂ ಹೆಚ್ಚು ನಗದು, 15 ಸಾವಿರ ರೊಟ್ಟಿ, 300 ಬಾಕ್ಸ್ ನೀರು, ಗೋಧಿ ಹಿಟ್ಟು, 75 ಮೆಡಿಸಿನ್ ಬಾಕ್ಸ್, 225 ಬಿಸ್ಕೆಟ್ ಪ್ಯಾಕೆಟ್ಸ್, 150 ಬಾಕ್ಸ್ ಗುಡ್ ಲೈಫ್ ಹಾಲು, 150 ಪ್ಯಾಕೆಟ್ ಅಕ್ಕಿ, 20 ಬಾಕ್ಸ್ ಸೋಪು, 15 ಸಾವಿರ ಅಡಿಕೆ ತಟ್ಟೆ, 600 ಬ್ಲಾಂಕೆಟ್, ಬಟ್ಟೆಗಳು ಸೇರಿದಂತೆ ದಿನನಿತ್ಯ ವಸ್ತುಗಳನ್ನು ಹೊತ್ತು ಉತ್ತರ ಕರ್ನಾಟಕ ಭಾಗದ ಜಮಖಂಡಿ, ತೇರದಾಳ ಪ್ರದೇಶಗಳಿಗೆ ಹಂಚಲು ಹೊರಟಿದ್ದಾರೆ.
ಇನ್ನೂ ಈ ಬಗ್ಗೆ ವಿವರ ನೀಡಿದ ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ನೂರಾರು ದಿನನಿತ್ಯ ವಸ್ತುಗಳನ್ನು ವಾಹನದಲ್ಲಿ ಹೊತ್ತೊಯ್ದ ಹತ್ತಕ್ಕೂ ಹೆಚ್ಚು ಯುವಮೋರ್ಚಾ ಕಾರ್ಯಕರ್ತರು ಸಂತ್ರಸ್ತರ ನೋವಿಗೆ ಸ್ಪಂದಿಸಲಿದ್ದಾರೆ. ವಾರಕ್ಕೂ ಹೆಚ್ಚು ಕಾಲ ಉತ್ತರ ಕರ್ನಾಟಕ ಭಾಗದಲ್ಲಿದ್ದು ಅವರಿಗೆ ಸಹಾಯ ಮಾಡಿ ಬರಲಿದ್ದಾರೆ ಎಂದು ತಿಳಿಸಿದರು.