ದಾವಣಗೆರೆ: ಆಪೆ ಆಟೋ ಡಿಕ್ಕಿ ಹೊಡೆದ ಪರಿಣಾಮ ಬೈಕ್ನಲ್ಲಿದ್ದ ಮಾವ, ಅಳಿಯ ಮೃತಪಟ್ಟ ದಾರುಣ ಘಟನೆ ತಾಲೂಕಿನ ಹೆಬ್ಬಾಳು ಗ್ರೀನ್ ಆಗ್ರೋ ಕಾರ್ಖಾನೆ ಬಳಿ ಜರುಗಿದೆ.
ನಲ್ಕುಂದ ಗ್ರಾಮದ 50 ವರ್ಷದ ಈಶ್ವರಪ್ಪ ಹಾಗೂ ಮಹಾಬಲೇಶ್ ಮೃತರು. ಕಾಟಿಹಳ್ಳಿ ಗ್ರಾಮಕ್ಕೆ ಮದುವೆಗೆಂದು ಮಹಾಬಲೇಶ್ ಅವರು ಈಶ್ವರಪ್ಪ ಅವರನ್ನು ಬೈಕ್ನಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಬರುವ ಹೆಬ್ಬಾಳು ಸಮೀಪ ಆಪೆ ಆಟೋ ಬೈಕ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಮಾವ, ಅಳಿಯ ಸಾವನ್ನಪ್ಪಿದ್ದಾರೆ.
ಇನ್ನು ಆಪೆ ಆಟೋ ಚಾಲಕ ರಾಣೆಬೆನ್ನೂರಿನ ಖಾಸೀಂ ಸಾಬ್ ವಿರುದ್ಧ ನಲ್ಕುಂದ ವಿಜಯ್ ಕುಮಾರ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.