ETV Bharat / state

ಯುವತಿಗೆ ಲೈಂಗಿಕ ಕಿರುಕುಳ ನೀಡಲು ಯತ್ನ: ದಾವಣಗೆರೆಯಲ್ಲಿ ಇಬ್ಬರು ಆರೋಪಿಗಳ ಬಂಧನ - Arrest of two accused for sexually abusing young woman

ಪೊಲೀಸರೆಂದು ಹೇಳಿಕೊಂಡು ಯುವತಿವೋರ್ವಳನ್ನ ಹೆದರಿಸಿ ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದ ಆರೋಪದ ಮೇಲೆ ಇಬ್ಬರನ್ನು ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು
author img

By

Published : Sep 5, 2019, 11:36 PM IST

ದಾವಣಗೆರೆ: ಪೊಲೀಸರೆಂದು ಹೇಳಿಕೊಂಡು ಯುವತಿವೋರ್ವಳನ್ನು ಹೆದರಿಸಿ, ಆಕೆಯನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದ ಇಬ್ಬರು ಕಾಮುಕರನ್ನು ಮಹಿಳಾ ಠಾಣೆ ಪೊಲೀಸರು ಕಂಬಿ ಹಿಂದೆ ತಳ್ಳಿದ್ದಾರೆ.

ಯುವತಿಗೆ ಲೈಂಗಿಕ ಕಿರುಕುಳ ನೀಡಲೆತ್ನಿಸಿದ ಇಬ್ಬರು ಆರೋಪಿಗಳು ಅಂದರ್​

ನಗರದ ನಿಟ್ಟುವಳ್ಳಿಯ ಮಲ್ಲಿಕಾರ್ಜುನ್, ದಾವಣಗೆರೆ ತಾಲೂಕಿನ ಹದಡಿ ಗ್ರಾಮದ ಕೆ. ಎನ್. ಸುರೇಶ್ ಬಂಧಿತರು. ಈ ಆರೋಪಿಗಳನ್ನು ನಗರದ ಎಸ್.ವಿ.ಎಸ್. ಕಾನ್ವೆಂಟ್ ಬಳಿ ಬಂಧಿಸಲಾಗಿದೆ.

ಪ್ರಕರಣ ಹಿನ್ನೆಲೆ:

ಕಳೆದ ಆಗಸ್ಟ್ ತಿಂಗಳ 23 ರಂದು ನಗರದ ತುಂಗಾಭದ್ರಾ ಬಡಾವಣೆಯ ಮುಂಭಾಗದಲ್ಲಿರುವ ದೈವಿಕ್ ಮೋತಿ ಪಿ. ರಾಮರಾವ್ ನಗರದಲ್ಲಿ ಹರಪನಹಳ್ಳಿ ಮೂಲದ ಯುವತಿ ತನ್ನ ಸ್ನೇಹಿತೆ ಜೊತೆ ಕುಳಿತಿದ್ದಳು. ಈ ವೇಳೆ ಪೊಲೀಸರೆಂದು ಹೇಳಿಕೊಂಡು ಬಂದ ಮಲ್ಲಿಕಾರ್ಜುನ್ ಹಾಗೂ ಸುರೇಶ್ ಯುವತಿಯರನ್ನು ಠಾಣೆಗೆ ಕರೆದೊಯ್ಯುವುದಾಗಿ ಹೇಳಿಕೊಂಡು ಬೇರೆಡೆಗೆ ಕರೆದೊಯ್ದಿದ್ದರು.

ಈ ವೇಳೆ ಆ ಇಬ್ಬರು ಯುವತಿಯರನ್ನು ಬೇರೆ ಬೇರೆ ಮಾಡಿ ನಾಗನೂರಿನ ಬಿಸ್ಲೇರಿಗೆ ಹೋಗುವ ರಸ್ತೆಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಯುವತಿಗೆ ಹೆದರಿಸಿ ಲೈಂಗಿಕವಾಗಿ ಸಹಕರಿಸುವಂತೆ ಆರೋಪಿಗಳು ಪೀಡಿಸಿದ್ದರಂತೆ. ಅಲ್ಲದೇ, ಯುವತಿಯ ಸಂಬಂಧಿಗೆ ಕರೆ ಮಾಡಿ, ಆಕೆಯ ಸ್ನೇಹಿತೆಯನ್ನು ಬಿಡಲು 20 ಸಾವಿರ ರೂಪಾಯಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು ಎನ್ನಲಾಗ್ತಿದೆ. ಬಳಿಕ ಯುವತಿ ಮೊಬೈಲ್ ಕಸಿದುಕೊಂಡು ಹೋಗಿದ್ದರು. ಈ ಸಂಬಂಧ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ. ರಾಜೀವ್​, ನಗರ ಉಪವಿಭಾಗದ ಪ್ರಭಾರ ಸಬ್​ ಇನ್​ಸ್ಪೆಕ್ಟರ್ ಮಂಜುನಾಥ್ ಗಂಗಲ್ ಮಾರ್ಗದರ್ಶನದಲ್ಲಿ ಮಹಿಳಾ ಠಾಣೆಯ ಪೊಲೀಸ್ ನಿರೀಕ್ಷಕಿ ನಾಗಮ್ಮ ಮತ್ತವರ ಸಿಬ್ಬಂದಿ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

Intro:KN_DVG_05_NAKALI POLICE ARREST_SCRIPT_02_7203307

REPORTER : YOGARAJ G. H.

ಪೊಲೀಸರೆಂದು ಹೇಳಿಕೊಂಡು ಯುವತಿಗೆ ಲೈಂಗಿಕ ಕಿರುಕುಳ ನೀಡಲೆತ್ನಿಸಿದ ಇಬ್ಬರು ಆರೋಪಿಗಳ ಬಂಧನ

ದಾವಣಗೆರೆ : ಪೊಲೀಸರೆಂದು ಹೇಳಿಕೊಂಡು ಯುವತಿಯೊಬ್ಬಳನ್ನು ಹೆದರಿಸಿ ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದ ಇಬ್ಬರು ಆರೋಪಿಗಳನ್ನು ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಗರದ ನಿಟ್ಟುವಳ್ಳಿಯ ಮಲ್ಲಿಕಾರ್ಜುನ್, ದಾವಣಗೆರೆ ತಾಲೂಕಿನ ಹದಡಿ ಗ್ರಾಮದ ಕೆ. ಎನ್. ಸುರೇಶ್ ಬಂಧಿತ ಆರೋಪಿಗಳು. ಈ ಆರೋಪಿಗಳನ್ನು ಎಸ್ ವಿ ಎಸ್ ಕಾನ್ವೆಂಟ್ ಬಳಿ ಅರೆಸ್ಟ್
ಮಾಡಲಾಗಿದೆ.

ಘಟನೆಯ ಹಿನ್ನೆಲೆ ಏನು...?

ಕಳೆದ ಆಗಸ್ಟ್ ತಿಂಗಳ 23 ನೇ ತಾರೀಖಿನಂದು ದಾವಣಗೆರೆ ನಗರದ ತುಂಗಾಭದ್ರಾ ಬಡಾವಣೆಯ ಮುಂಭಾಗದಲ್ಲಿರುವ ದೈವಿಕ್ ಮೋತಿ ಪಿ. ರಾಮರಾವ್ ನಗರದಲ್ಲಿ ಹರಪನಹಳ್ಳಿ ಮೂಲದ
ಯುವತಿ ತನ್ನ ಸ್ನೇಹಿತೆ ಜೊತೆ ಕುಳಿತಿದ್ದಳು. ಈ ವೇಳೆ ಪೊಲೀಸರೆಂದು ಹೇಳಿಕೊಂಡು ಬಂದ ಮಲ್ಲಿಕಾರ್ಜುನ್ ಹಾಗೂ ಸುರೇಶ್ ಯುವತಿಯರನ್ನು ಠಾಣೆಗೆ ಕರೆದುಕೊಂಡು ಹೋಗುವುದಾಗಿ
ಹೇಳಿಕೊಂಡು ಕರೆದುಕೊಂಡು ಬಂದರು.

ಈ ವೇಳೆ ಅವರಿಬ್ಬರನ್ನು ಬೇರೆ ಬೇರೆ ಮಾಡಿ ನಾಗನೂರಿನ ಬಿಸ್ಲೇರಿಗೆ ಹೋಗುವ ರಸ್ತೆಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಯುವತಿಗೆ ಹೆದರಿಸಿ ಲೈಂಗಿಕವಾಗಿ ಸಹಕರಿಸುವಂತೆ
ಆರೋಪಿಗಳು ಪೀಡಿಸಿದ್ದಾರೆ. ಅಲ್ಲದೇ, ಯುವತಿಯ ಸಂಬಂಧಿಗೆ ಕರೆ ಮಾಡಿ, ಯುವತಿಯ ಸ್ನೇಹಿತೆಯನ್ನು ಬಿಡಲು 20 ಸಾವಿರ ರೂಪಾಯಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಬಳಿಕ
ಯುವತಿ ಮೊಬೈಲ್ ಕಸಿದುಕೊಂಡು ಹೋಗಿದ್ದರು. ಈ ಸಂಬಂಧ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದರು. ಹೆಚ್ಚುವರಿ ಪೊಲೀಸ್
ವರಿಷ್ಠಾಧಿಕಾರಿ ಎಂ. ರಾಜೀವ, ನಗರ ಉಪವಿಭಾಗದ ಪ್ರಭಾರ ಸಬ್ ಇನ್ ಸ್ಪೆಕ್ಟರ್ ಮಂಜುನಾಥ್ ಗಂಗಲ್ ಮಾರ್ಗದರ್ಶನದಲ್ಲಿ ಮಹಿಳಾ ಠಾಣೆಯ ಪೊಲೀಸ್ ನಿರೀಕ್ಷಕಿ ನಾಗಮ್ಮ ಮತ್ತವರ
ಸಿಬ್ಬಂದಿ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. Body:KN_DVG_05_NAKALI POLICE ARREST_SCRIPT_02_7203307

ಸಿಬ್ಬಂದಿ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.