ETV Bharat / state

ಬಜೆಟ್​ನಲ್ಲಿ ಕೊರಚ ಸಮಾಜಕ್ಕೆ ಸೌಲಭ್ಯ ಒದಗಿಸದಿದ್ರೆ ರಾಜ್ಯಾದ್ಯಂತ ಅರೆಬೆತ್ತಲೆ ಮೆರವಣಿಗೆ: ಮುಖಂಡರ ಎಚ್ಚರಿಕೆ

ಬರುವ ಬಜೆಟ್​ನಲ್ಲಿ ರಾಜ್ಯ ಸರ್ಕಾರ ಕೊರಚ ಸಮಾಜಕ್ಕೆ ಸೌಲಭ್ಯ ನೀಡದಿದ್ದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಅರೆಬೆತ್ತಲೆ ಮೆರವಣಿಗೆ ನಡೆಸುತ್ತೇವೆ ಎಂದು ಕೊರಚ ಸಮಾಜದ ಹಿರಿಯ ಮುಖಂಡ ಓಂಕಾರಪ್ಪ ಎಚ್ಚರಿಕೆ ನೀಡಿದ್ದಾರೆ.

koracha society
ಬಜೆಟ್​ನಲ್ಲಿ ಕೊರಚ ಸಮಾಜಕ್ಕೆ ಸೌಲಭ್ಯ ಒದಗಿಸುವಂತೆ ಮನವಿ
author img

By

Published : Mar 1, 2020, 4:26 PM IST

ದಾವಣಗೆರೆ: ಬರುವ ಬಜೆಟ್​ನಲ್ಲಿ ರಾಜ್ಯ ಸರ್ಕಾರ ಕೊರಚ ಸಮಾಜಕ್ಕೆ ಸೌಲಭ್ಯ ನೀಡದಿದ್ದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಅರೆಬೆತ್ತಲೆ ಮೆರವಣಿಗೆ ನಡೆಸುತ್ತೇವೆ ಎಂದು ಕೊರಚ ಸಮಾಜದ ಹಿರಿಯ ಮುಖಂಡ ಓಂಕಾರಪ್ಪ ಎಚ್ಚರಿಕೆ ನೀಡಿದ್ದಾರೆ.

ಬಜೆಟ್​ನಲ್ಲಿ ಕೊರಚ ಸಮಾಜಕ್ಕೆ ಸೌಲಭ್ಯ ಒದಗಿಸುವಂತೆ ಮನವಿ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಸಿಎಂ ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿದ್ದೇವೆ. ಸಮಾಜದ ಅಭಿವೃದ್ದಿ ನಿಗಮ ಸ್ಥಾಪನೆ ಮಾಡಬೇಕು. ಈ‌ ಮೂಲಕ ಸಮಾಜಕ್ಕೆ ಜಿಲ್ಲೆಗೊಂದರಂತೆ ನಿವೇಶನ ಒದಗಿಸಬೇಕು. ಸಮಾಜದ ಭವನ ನಿರ್ಮಿಸಬೇಕು, ಹಾಸ್ಟೆಲ್ ನಿರ್ಮಿಸಬೇಕು, ನಮ್ಮ ಸಮಾಜದಲ್ಲಿ ಹಲವು ಕ್ರೀಡಾಪಟುಗಳಿದ್ದು, ಅವರನ್ನು ಗುರುತಿಸಬೇಕು, ಕೊರಚ ಜನಾಂಗದ ಮನೆಗಳಿಗೆ ಹಕ್ಕುಪತ್ರ ನೀಡಬೇಕು, ಅಂಬೇಡ್ಕರ್ ಅಭಿವೃದ್ದಿ ನಿಗಮದಿಂದ ನಮಗೆ ಇದುವರೆಗೂ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಸಿಕ್ಕಿಲ್ಲ ಈ ಎಲ್ಲಾ ಬೇಡಿಕೆಗಳು ಬರುವ ಬಜೆಟ್​ನಲ್ಲಿ ಈಡೇರದಿದ್ದಲ್ಲಿ ಮುಂಬರುವ ದಿನಗಳಲ್ಲಿ ಅರೆಬೆತ್ತಲೆ ಮೆರವಣಿಗೆ ನಡೆಸುತ್ತೇವೆ ಎಂದು ಎಚ್ಚರಿಕೆ‌ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.