ದಾವಣಗೆರೆ/ಬೆಂಗಳೂರು: ಯಮರೂಪಿಯಾಗಿ ಬಂದ ಖಾಸಗಿ ಬಸ್ಸೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ನಲ್ಲಿದ್ದ ವಾಹನ ಸವಾರರಿಬ್ಬರು ಸಾವನ್ನಪ್ಪಿರುವ ಘಟನೆ ದಾವಣಗೆರೆ ತಾಲೂಕಿನ ಮಾದಾಪುರ ಕ್ರಾಸ್ ಬಳಿ ಸಂಭವಿಸಿದೆ. ಪೂರ್ಯಾ ನಾಯ್ಕ್ (35) ಮೋಹನ್ ನಾಯ್ಕ್ (30) ಮೃತರಾಗಿದ್ದು, ಇವರಿಬ್ಬರು ತಮ್ಮ ದ್ವಿಚಕ್ರವಾಹನದಲ್ಲಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿಗೆ ಪ್ರಯಾಣ ಬೆಳೆಸಿದ್ದರು. ಆದರೆ ಚನ್ನಗಿರಿಯತ್ತ ಸಾಗುವ ವೇಳೆ ಯಮರೂಪಿ ಖಾಸಗಿ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೈಕ್ಗೆ ಡಿಕ್ಕಿ ಹೊಡೆಯುತ್ತಿದ್ದಂತೆ ಚಾಲಕ ಬಸ್ ಬಿಟ್ಟು ಪರಾರಿಯಾಗಿದ್ದಾನೆ.
ಇನ್ನು, ಮೃತರು ಶಿವಮೊಗ್ಗ ನಗರದ ವಿನೋಭನಗರದ ನಿವಾಸಿಗಳು ಎಂದು ತಿಳಿದು ಬಂದಿದ್ದು. ಯಾವ ಕಾರಣಕ್ಕಾಗಿ ಯುವಕರು ದಾವಣಗೆರೆಗೆ ಬಂದಿದ್ದರು ಎಂಬ ಮಾಹಿತಿ ಮಾತ್ರ ತಿಳಿದು ಬಂದಿಲ್ಲ. ಅಪಘಾತದಿಂದ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿದ್ದು, ಪೊಲೀಸರು ಟ್ರಾಫಿಕ್ ಕ್ಲಿಯರ್ ಮಾಡಲು ಹರಸಾಹಸ ಪಡುವಂತಾಯಿತು. ಸ್ಥಳಕ್ಕೆ ಹದಡಿ ಠಾಣೆಯ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಶೆಯಲ್ಲಿ ಬಂದು ಲಾರಿಗೆ ಡಿಕ್ಕಿ ಹೊಡೆದ ವಿದೇಶಿ ಪ್ರಜೆ: ಕುಡಿದು ನಶೆಯಲ್ಲಿ ಬೈಕ್ನಲ್ಲಿ ಬಂದ ವಿದೇಶಿ ಪ್ರಜೆಯೊಬ್ಬ ಲಾರಿಗೆ ಡಿಕ್ಕಿಹೊಡೆದು ಚಿಕಿತ್ಸೆ ಪಡೆಯಲು ಪೊಲೀಸರ ಜೊತೆ ರಂಪಾಟ ಮಾಡಿಕೊಂಡಿರುವ ಘಟನೆ ಯಲಹಂಕ ತಾಲೂಕಿನ ರಾಜನುಕುಂಟೆ ಟೋಲ್ ಸಮೀಪ ಕಳೆದ ರಾತ್ರಿ ನಡೆದಿದೆ.
ಬೈಕ್ ನಲ್ಲಿ ಬಂದು ಆಕ್ಸಿಡೆಂಟ್ ಮಾಡಿಕೊಂಡು ವಿದೇಶಿ ಪ್ರಜೆಯ ರಂಪಾಟ: ಅಂದಹಾಗೆ ದೊಡ್ಡಬಳ್ಳಾಪುರ ಕಡೆಯಿಂದ ಯಲಹಂಕಕ್ಕೆ ಬೈಕ್ ನಲ್ಲಿ ಬರುತ್ತಿದ್ದ ಜಪಾನ್ ಪ್ರಜೆಯೊಬ್ಬ ನಶೆಯಲ್ಲಿ ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ. ಈ ವೇಳೆ ಅವರ ಮುಖ ಮೂತಿಗೆ ಗಾಯ ಹೋಗಿದ್ದರು ಚಿಕಿತ್ಸೆಗೆ ಹೋಗದೆ ಈತ ದಿಮಾಕು ತೋರಿಸಿದ್ದಾನೆ. ರಕ್ತ ಸುರಿಯುತ್ತಿದ್ದರು ಪೊಲೀಸರನ್ನು ಮುಟ್ಟಬೇಡಿ ಅಂತ ಹೇಳಿ ಈ ಭೂಪ ನಡೆದುಕೊಂಡೆ ಬಂದಿದ್ದಾನೆ. ನಡೆದುಕೊಂಡು ಬಂದು ಆಸ್ವತ್ರೆ ಬಳಿ ಒಳಗಡೆ ಹೋಗಲು ವಾಪಸ್ ರಂಪಾಟ ಮಾಡಿದ್ದಾನೆ. ನಂತರ ಆತನ ಮನವೊಲಿಸಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಪೊಲೀಸರು ಕಳಿಸಿದ್ದಾರೆ. ಇನ್ನು, ಈ ಬಗ್ಗೆ ರಾಜಾನುಕುಂಟೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಗಾಡಿಯಿಂದ ಸ್ಕಿಡ್ ಆಗಿ ರಸ್ತೆ ಮೇಲೆ ಬಿದ್ದ ‘ಮಹಿಳೆ’ ಮೇಲೆ ಟಿಪ್ಪರ್ ಹರಿದು ಸಾವು: ಬೆಂಗಳೂರಿನಲ್ಲಿ ನಿನ್ನೆ ಮಹಿಳೆಯೊಬ್ಬರು ತಮ್ಮ ಮಗಳನ್ನು ಕಾಲೇಜಿಗೆ ಬಿಟ್ಟು ವಾಪಸಾಗುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ವಾಹನದಿಂದ ಆಯಿಲ್ ಸೋರಿಕೆ ಆಗಿತ್ತು. ಇದನ್ನು ಗಮನಿಸದೇ ಇದ್ದ ಈ ಮಹಿಳೆ ವೇಗವಾಗಿ ಚಲಿಸಿದ್ದಾರೆ, ಪರಿಣಾಮ ತನ್ನ ದ್ವಿಚಕ್ರ ವಾಹನ ಸ್ಕಿಡ್ ಆಗಿ ಬಿದ್ದಿದ್ದು ಗಾಡಿಯಿಂದ ಮಹಿಳೆ ರಸ್ತೆ ಮೇಲೆ ತೂರಿಬಿದ್ದಿದ್ದರು. ಪರಿಣಾಮ ಹಿಂದಿನಿಂದ ಬರುತ್ತಿದ್ದ ಟಿಪ್ಪರ್ ವಾಹನವು ಅವರ ತಲೆ ಮೆಲೆ ಹರಿದಿತ್ತು. ಗಂಭೀರ ಗಾಯ ಹಾಗೂ ರಕ್ತಸ್ರಾವದಿಂದ ಮಹಿಳೆ ಸಾವನಪ್ಪಿದ್ದಾರೆ.
ಇದನ್ನೂ ಓದಿ: ಕಾರು - ಬಸ್ ನಡುವೆ ಮುಖಾಮುಖಿ ಡಿಕ್ಕಿ: ಬಾಲಕ ಸಾವು, ಆರು ಮಂದಿಗೆ ಗಾಯ