ETV Bharat / state

ಫೇಸ್​ಬುಕ್​ ಲೈವ್​ನಲ್ಲಿ ಮದುವೆ, ನೋಡಿ ಹಾರೈಸಿ: ಹೀಗೊಂದು ಮದುವೆ ಕರೆಯೋಲೆ

ದಾವಣಗೆರೆಯ ಜಯನಗರದ ವಂಕದಾರಿ ಕುಟುಂಬ ಮತ್ತು ಚಿಂತಾಲ ಕುಟುಂಬ ಬಂಧುಗಳಿಗೆ ಮದುವೆಗೆ ಬರುವುದು ಬೇಡ. ಫೇಸ್​ಬುಕ್ ಲೈವ್ ಕೊಡ್ತೀವಿ, ಅಲ್ಲಿಂದಲೇ ನೀವು ವಧು - ವರರಿಗೆ ಶುಭ ಹಾರೈಸಿ ಅಂತ ಮನವಿ ಮಾಡಿಕೊಂಡು ಮದುವೆಯ ಕರೆಯೋಲೆ ಮಾಡಿಸಿದೆ.

marriage invitation
ಮದುವೆ
author img

By

Published : Jun 13, 2020, 12:15 PM IST

ದಾವಣಗೆರೆ: ಮದುವೆ ಅಂದ್ರೆ ಅಲ್ಲಿ ಸಡಗರ, ಸಂಭ್ರಮ ಮನೆ ಮಾಡಿರುತ್ತೆ. ಆಡಂಬರ, ವಿಜೃಂಭಣೆಗೆ ಕೊರತೆ ಇರಲ್ಲ.‌ ಆದ್ರೆ, ಕೊರೊನಾ ಸೋಂಕು ಹರಡುವ ಭೀತಿ ಕಾರಣಕ್ಕೆ ಸರ್ಕಾರ ಮದುವೆಗೆ ಕೆಲ ನಿಬಂಧನೆಗಳನ್ನು ಹಾಕಿದೆ. ಅದಕ್ಕೆ ಇಲ್ಲೊಂದು ಜೋಡಿ ಡಿಫರೆಂಟ್ ಆಗಿ ಮದುವೆಯ ಕರೆಯೋಲೆ ನೀಡಿದೆ. ಮನೆಯಲ್ಲೇ ಇದ್ದು ಹಾರೈಸಿ ಎಂಬ ಮನವಿ ಮಾಡಿದೆ.

ದಾವಣಗೆರೆಯ ಜಯನಗರದ ವಂಕದಾರಿ ಕುಟುಂಬ ಮತ್ತು ಚಿಂತಾಲ ಕುಟುಂಬ ಬಂಧುಗಳಿಗೆ ಮದುವೆ ಬರುವುದು ಬೇಡ. ನವಜೀವನಕ್ಕೆ ಕಾಲಿಡುತ್ತಿರುವ ನವ ವಧು - ವರರಾದ ರಂಜಿತಾ ಮತ್ತು ನವೀನ್ ಅವರ ಮದುವೆಯಲ್ಲಿ ಭಾಗವಹಿಸಲು ಕೇವಲ 50 ಜನರಿಗೆ ಅವಕಾಶ ಇದೆ. ಸ್ನೇಹಿತರು, ಬಂಧು, ಬಳಗದವರು ಬರಲು ಆಗಲ್ಲ, ಮದುವೆ ಕಣ್ತುಂಬಿಕೊಳ್ಳಲು ಆಗಲ್ಲ ಎಂಬ ಕೊರಗು ನೀಗಿಸಲು ಈ ಕುಟುಂಬ ಹೊಸ ಐಡಿಯಾ ಕಂಡುಕೊಂಡಿದೆ. ಫೇಸ್​ಬುಕ್ ಲೈವ್ ಕೋಡ್ತಿವಿ, ಅಲ್ಲಿಂದಲೇ ನೀವು ವಧು- ವರರಿಗೆ ಶುಭ ಹಾರೈಸಿ ಅಂತ ಮನವಿ ಮಾಡಿಕೊಂಡು ಮದುವೆಯ ಕರೆಯೋಲೆ ಮಾಡಿಸಲಾಗಿದೆ.

marriage invitation
ಮದುವೆಯ ಕರೆಯೋಲೆ

ಮದುವೆ ಇದೇ 15 ರಂದು ದಾವಣಗೆರೆಯ ಓಲ್ಡ್ ಸಿಟಿಯಲ್ಲಿನ ಕನ್ನಿಕಾ ಪರಮೇಶ್ವರಿ ದೇಗುಲದಲ್ಲಿ ಬೆಳಗ್ಗೆ 9.30 ಕ್ಕೆ ವಿವಾಹ ಮುಹೂರ್ತವಿದ್ದು, ಮಧ್ಯಾಹ್ನ 1 ಗಂಟೆಗೆ ಆರತಕ್ಷತೆ ನಡೆಯಲಿದೆ. ಮದುವೆಯ ಶಾಸ್ತ್ರ, ವಿಧಿ ವಿಧಾನ ಫೇಸ್​ಬುಕ್ ಲೈವ್ ಬರಲಿದೆ. ಮನೆಯಲ್ಲೇ ಇದ್ದು ಕಣ್ತುಂಬಿಕೊಂಡು ಮನತುಂಬಿ ಹಾರೈಸಿ ಎಂದು ಮನವಿ ಮಾಡಿಕೊಳ್ಳಲಾಗಿದೆ.

ಈ ಬಗ್ಗೆ ಲಗ್ನಪತ್ರಿಕೆಯಲ್ಲಿ ನಂದ ಕಿಶೋರ್ (Nand Kishore) ಅವರ ಪ್ರೊಫೈಲ್ ನೇಮ್ ಹಾಕಲಾಗಿದ್ದು, ಈ ಪ್ರೊಫೈಲ್ ಮೂಲಕ ರಂಜಿತಾ - ನವೀನ್ ಅವರ ಮದುವೆ ಲೈವ್ ವೀಕ್ಷಿಸಬಹುದು ಎಂದು ಕುಟುಂಬದವರು ಮಾಹಿತಿ‌ ನೀಡಿದ್ದಾರೆ. ಇನ್ನು ವಧುವಿನ ಕಡೆಯಿಂದ 25 ಜನ ಮತ್ತು ವರನ ಕಡೆಯಿಂದ 25 ಮಂದಿ ಮಾತ್ರ ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮದುವೆಗೆ ಬರುವವರಿಗೆ ಥರ್ಮಲ್ ಸ್ಕ್ರೀನಿಂಗ್, ಮಾಸ್ಕ್, ಸ್ಯಾನಿಟೈಸರ್ ನೀಡುವ ವ್ಯವಸ್ಥೆ ಕೂಡ ವಧುವಿನ ಕಡೆಯವರು ಮಾಡಿಕೊಂಡಿದ್ದಾರೆ.

ವಧುವಿನ ಕಡೆಯಿಂದ ಕೇವಲ 25 ಜನ ಮಾತ್ರ ಮದುವೆಯಲ್ಲಿ ಭಾಗವಹಿಸಬೇಕಾಗಿದ್ದು, ವಂಕದಾರಿ ಮನೆತನದ ಕುಟುಂಬ ದೊಡ್ಡದಿದ್ದು, ಸಾವಿರಾರು ಜನರು ಭಾಗವಹಿಸಲು ಆಗಲ್ಲ ಎಂಬ ಕಾರಣಕ್ಕೆ ಫೇಸ್​ಬುಕ್ ಲೈವ್ ನೀಡುತಿದ್ದಾರೆ. ಇನ್ನು ಮದುವೆಗೆ ಬರುವ ಮಕ್ಕಳಿಗೆ, 60 ವರ್ಷ ಮೇಲ್ಪಟ್ಟವರಿಗೆ ಮನೆಯಲ್ಲೇ ಇರುವ ವ್ಯವಸ್ಥೆಯನ್ನ ವಂಕದಾರಿ ಕುಟುಂಬ ಮಾಡಿದೆ.

ಒಟ್ಟಿನಲ್ಲಿ ಮದುವೆಯನ್ನು ಫೇಸ್​ಬುಕ್ ಲೈವ್​ನಲ್ಲಿ ವೀಕ್ಷಿಸಿ ಎಂಬ ಮನವಿ ಮಾಡುವ ಮೂಲಕ ಕೋವಿಡ್ 19 ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಲು ಮುಂದಾಗಿರುವುದು ನಿಜಕ್ಕೂ ಅಭಿನಂದನಾರ್ಹ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.