ETV Bharat / state

ಪಿಪಿಇ ಕಿಟ್​​ ದಹನಕ್ಕೆ ಬಂತು ಹೊಸ ಯಂತ್ರ.. ತ್ಯಾಜ್ಯ ವಿಲೇವಾರಿಗೆ ಸುಲಭೋಪಾಯ - Medical Waste Disposal

ಈ ಯಂತ್ರದಲ್ಲಿ ಕೇವಲ ಅರ್ಧ ಗಂಟೆಯಲ್ಲಿ ಪಿಪಿಇ‌ ಕಿಟ್‌ನ ಯಾವುದೇ ಅಪಾಯವಿಲ್ಲದೇ ಸುಟ್ಟು ಹಾಕಬಹುದು. ಇದಕ್ಕೆ ತಗುಲಿರುವ ವೆಚ್ಚ ಕೇವಲ 75 ಸಾವಿರ ರೂಪಾಯಿ. ಇದಲ್ಲದೆ ಹ್ಯಾಂಡ್ ಗ್ಲೌಸ್, ಮಾಸ್ಕ್, ರೋಗಿಗೆ ಹಾಕಿದ್ದ ಬ್ಯಾಂಡೇಜ್ ಸೇರಿ ಬೇರೆ ಬೇರೆ ರೀತಿಯ ಪ್ಲಾಸ್ಟಿಕ್ ವಸ್ತುಗಳನ್ನು ದಹಿಸಬಹುದಾಗಿದೆ..

A new machine for destroying PPE Kit
ಪಿಪಿಇ ಕಿಟ್​​ ದಹನಕ್ಕೆ ಬಂತು ಹೊಸ ಯಂತ್ರ...ತ್ಯಾಜ್ಯ ವಿಲೇವಾರಿಗೆ ಸುಲಭೋಪಾಯ
author img

By

Published : Jul 31, 2020, 9:44 PM IST

ದಾವಣಗೆರೆ : ಕೊರೊನಾದಿಂದ ಪಾರಾಗಲು ಸುರಕ್ಷತಾ ಕ್ರಮವಾಗಿ ಪಿಪಿಇ ಕಿಟ್, ಗ್ಲೌಸ್, ಮಾಸ್ಕ್ ಸೇರಿ ವೈದ್ಯಕೀಯ ರಕ್ಷಣಾ ವಸ್ತುಗಳನ್ನು ಬಳಸಲಾಗುತ್ತಿದೆ. ಆದರೆ, ಇವುಗಳ ಬಳಕೆ ಬಳಿಕ ತ್ಯಾಜ್ಯವಾಗಿ ದೊಡ್ಡ ಸಮಸ್ಯೆ ತಂದೊಡ್ಡುತ್ತಿವೆ.

ಅಲ್ಲದೆ ಇವುಗಳ ವಿಲೇವಾರಿಯೇ ಸಮಸ್ಯೆಯಾಗಿ ಕಾಡತೊಡಗಿದೆ. ಆದರೆ, ಇಂತಹ ತ್ಯಾಜ್ಯವನ್ನು ನಾಶ ಮಾಡಲು ದಾವಣಗೆರೆಯಲ್ಲಿ ‘ವೈದ್ಯಕೀಯ ತ್ಯಾಜ್ಯಗಳ ದಹನ ಯಂತ್ರ'ವನ್ನು ಆವಿಷ್ಕರಿಸಲಾಗಿದೆ.

ಪಿಪಿಇ ಕಿಟ್​​ ದಹನಕ್ಕೆ ಬಂತು ಹೊಸ ಯಂತ್ರ.. ತ್ಯಾಜ್ಯ ವಿಲೇವಾರಿಗೆ ಸುಲಭೋಪಾಯ

ಇದು ಮಾಲಿನ್ಯ ರಹಿತ ಮೆಷಿನ್ ಅನ್ನೋದೇ ಇದರ ವಿಶೇಷವಾಗಿದೆ. ದಾವಣಗೆರೆಯ ಜಿಲ್ಲಾಧಿಕಾರಿ ಕಚೇರಿ ಬಳಿ ಎಲೆಕ್ಟ್ರಾನಿಕ್ಸ್ ಮಳಿಗೆಯ ಮಾಲೀಕ ಎ ಪಿ ದಿವಾಕರ್ ಈ ಯಂತ್ರ ಕಂಡು ಹಿಡಿದಿದ್ದಾರೆ. ಇದಕ್ಕಾಗಿ 6 ವರ್ಷಗಳ ಕಾಲ ಶ್ರಮ ಪಟ್ಟಿದ್ದಾರೆ. ಈಗಾಗಲೇ 2018ರಲ್ಲಿ ಪೇಟೆಂಟ್ ಕೂಡ ಪಡೆದಿದ್ದಾರೆ.

ಈ ಯಂತ್ರದಲ್ಲಿ ಕೇವಲ ಅರ್ಧ ಗಂಟೆಯಲ್ಲಿ ಪಿಪಿಇ‌ ಕಿಟ್‌ನ ಯಾವುದೇ ಅಪಾಯವಿಲ್ಲದೇ ಸುಟ್ಟು ಹಾಕಬಹುದು. ಇದಕ್ಕೆ ತಗುಲಿರುವ ವೆಚ್ಚ ಕೇವಲ 75 ಸಾವಿರ ರೂಪಾಯಿ. ಇದಲ್ಲದೆ ಹ್ಯಾಂಡ್ ಗ್ಲೌಸ್, ಮಾಸ್ಕ್, ರೋಗಿಗೆ ಹಾಕಿದ್ದ ಬ್ಯಾಂಡೇಜ್ ಸೇರಿ ಬೇರೆ ಬೇರೆ ರೀತಿಯ ಪ್ಲಾಸ್ಟಿಕ್ ವಸ್ತುಗಳನ್ನು ದಹಿಸಬಹುದಾಗಿದೆ.

ಯಂತ್ರ ಹೇಗೆ ಕಾರ್ಯನಿರ್ವಹಿಸುತ್ತದೆ : ಮೊದಲು ಯಂತ್ರದೊಳಗೆ ಪಿಪಿಇ ಕಿಟ್ ಹಾಕಲಾಗುತ್ತದೆ. ಒಂದು ಅಥವಾ ಮೂರು ಕಿಟ್ ಆದರೂ 20 ಲೀಟರ್ ನೀರು ಸಾಕಬೇಕಾಗುತ್ತದೆ.‌ ಬಳಿಕ ಯಥೇಚ್ಛವಾಗಿ ಗಾಳಿ ನೀಡಿ ಒಣಗಿಸಿ ಒಳಗಡೆಯೇ ಬೆಂಕಿಯ ಕಿಡಿ ಹೊತ್ತಿಸಿ ಸಂಪೂರ್ಣ ಸುಡುವುದರಿಂದ ಕಾರ್ಬನ್ ಮೊನಾಕ್ಸೈಡ್ ತುಂಬಾನೇ ಕಡಿಮೆ‌ ಬರುತ್ತದೆ. ಈ ಮೂಲಕ ವಾಯುಮಾಲಿನ್ಯ ತಡೆಯಬಹುದು. ತ್ಯಾಜ್ಯ ನಿರ್ವಹಣೆಗೆ ಸಾಕಷ್ಟು ಕೆಲಸ‌ ನಡೆಯುತ್ತಿದೆಯಾದರೂ ಆಸ್ಪತ್ರೆಗಳಿಂದ ಸಂಗ್ರಹಿಸಿ ನಾಶ ಮಾಡುವುದು ಸುಲಭವಲ್ಲ.

ಈ ಯಂತ್ರ ಇದ್ದರೆ ಅಲ್ಲಿಯೇ ಸುಟ್ಟು ಹಾಕಬಹುದು. ಅಪಾಯವನ್ನೂ ತಪ್ಪಿಸಬಹುದು. ರಾಜ್ಯ ಸರ್ಕಾರ ಇದಕ್ಕೆ ಅನುಮತಿ ನೀಡಿದರೆ ಆಸ್ಪತ್ರೆಗಳ ತ್ಯಾಜ್ಯ ನಿರ್ವಹಣೆಯನ್ನು ಸುಲಭವಾಗಿ ಮಾಡಬಹುದು.‌ ಮಾತ್ರವಲ್ಲ ಸುಟ್ಟು ಬರುವ ಬೂದಿಯನ್ನು ಗೊಬ್ಬರವಾಗಿಯೂ ಉಪಯೋಗಿಸಬಹುದು ಎನ್ನುತ್ತಾರೆ ಯಂತ್ರ ಆವಿಷ್ಕರಿಸಿರುವ ದಿವಾಕರ್.

ಕೊರೊನಾ ಹೆಚ್ಚಳವಾಗುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಪಿಪಿಇ ಕಿಟ್, ಮಾಸ್ಕ್, ಗ್ಲೌಸ್ ಬಳಕೆ ಹೆಚ್ಚಾಗುತ್ತಿದೆ. ವಿಲೇವಾರಿ ಸಹ ಅಷ್ಟೇ ಸಮಸ್ಯೆ ಆಗಿದೆ. ಜಿಲ್ಲಾಡಳಿತಕ್ಕೂ ಇದು ಸಮಸ್ಯೆ ಆಗಿದೆ. ಈ ಯಂತ್ರವನ್ನು ಮತ್ತಷ್ಟು ಅಭಿವೃದ್ಧಿಪಡಿಸಿ ಆಸ್ಪತ್ರೆಗಳಲ್ಲಿ ವಿಲೇವಾರಿ ಮಾಡುವ ವ್ಯವಸ್ಥೆ ಮಾಡಿದರೆ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಆವಿಷ್ಕಾರ ಮುಂಚೂಣಿಗೆ ಬರಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.