ETV Bharat / state

ಹರಿಹರಕ್ಕೆ ಕೊರೊನಾಘಾತ: ಏಕಾಏಕಿ 9 ಜನರ ವರದಿ ಪಾಸಿಟಿವ್​

author img

By

Published : Jun 22, 2020, 9:41 PM IST

ಈವರೆಗೆ ಒಂದೇ ಒಂದು ಕೇಸ್ ಸಹ ಇಲ್ಲದಿದ್ದ ಹರಿಹರ ನಗರ, ತಾಲೂಕಿನಲ್ಲಿ ಒಟ್ಟು 9 ಕೊರೊನಾ ಕೇಸ್​​ಗಳು​ ಪತ್ತೆಯಾಗಿವೆ. ಶಿವಮೊಗ್ಗ ರಸ್ತೆಯಲ್ಲಿರುವ ಸೋಂಕಿತ ಮಹಿಳೆಯ ಗಂಡನ ಮನೆಯ 100 ಮೀಟರ್ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ.

ಹರಿಹರಕ್ಕೆ ಕೊರೊನಾಘಾತ
ಹರಿಹರಕ್ಕೆ ಕೊರೊನಾಘಾತ

ಹರಿಹರ: ನಗರದ 6 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ತಾಲೂಕಿನ ರಾನಜಹಳ್ಳಿ ಗ್ರಾಮದ ಮೂವರಲ್ಲಿ ಸೋಂಕು ದೃಢಪಟ್ಟಿದೆ. ಇದು ತಾಲೂಕಿನ ಜನರನ್ನು ಆತಂಕಕ್ಕೀಡು ಮಾಡಿದೆ.

ಹರಿಹರ ತಾಲೂಕಿನ ರಾಜನಹಳ್ಳಿ ಗ್ರಾಮದ ಓರ್ವ ಮಹಿಳೆ ಸೇರಿದಂತೆ ಮೂವರಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತ ಮಹಿಳೆ ಗಂಡನ ಮನೆ ಹರಿಹರ ನಗರದ ಶಿವಮೊಗ್ಗ ರಸ್ತೆಯಲ್ಲಿದ್ದು, ಪತಿ ಸೇರಿದಂತೆ ಆರು ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಈವರೆಗೆ ಒಂದೇ ಒಂದು ಕೇಸ್ ಸಹ ಇಲ್ಲದಿದ್ದ ಹರಿಹರ ನಗರ, ತಾಲೂಕಿನಲ್ಲಿ ಒಟ್ಟು 9 ಕೊರೊನಾ ಕೇಸ್​ಗಳು​ ಪತ್ತೆಯಾಗಿವೆ.

ಶಿವಮೊಗ್ಗ ರಸ್ತೆಯಲ್ಲಿರುವ ಸೋಂಕಿತ ಮಹಿಳೆಯ ಗಂಡನ ಮನೆಯ 100 ಮೀಟರ್ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ. ಸೋಂಕಿತರ ಮನೆಯನ್ನು ಕೇಂದ್ರವಾಗಿಟ್ಟುಕೊಂಡು, ನಿಗದಿತ ಪ್ರದೇಶವನ್ನು ಸೀಲ್ ​ಡೌನ್ ಮಾಡಲಾಗಿದೆ. ಪೊಲೀಸ್ ಮತ್ತು ಆರೋಗ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ನಗರ, ಗ್ರಾಮೀಣ ಪ್ರದೇಶವೆನ್ನದೇ ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸಬೇಕು. ಪದೇ ಪದೆ ಕೈಗಳನ್ನು ಸ್ಯಾನಿಟೈಸರ್ ಅಥವಾ ಸೋಪಿನಿಂದ ಸ್ವಚ್ಛ ಮಾಡಿಕೊಳ್ಳುವಂತೆ ತಹಶೀಲ್ದಾರ್ ಕೆ.ಬಿ.ರಾಮಚಂದ್ರಪ್ಪ ಮನವಿ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.