ETV Bharat / state

ದಾವಣಗೆರೆ: 750ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ಕಡಿದುಹಾಕಿ ಕಿಡಿಗೇಡಿಗಳ ಅಟ್ಟಹಾಸ!

ದಾವಣಗೆರೆ ತಾಲೂಕಿನ ಮುದಹದಡಿ-ದುರ್ಗಾಂಭಿಕಾ ಕ್ಯಾಂಪ್​ನಲ್ಲಿ ರೈತರೊಬ್ಬರ ತೋಟಕ್ಕೆ ನುಗ್ಗಿದ ದುಷ್ಕರ್ಮಿಗಳು ಅಡಿಕೆ ಗಿಡಗಳನ್ನು ಮನಬಂದಂತೆ ಕಡಿದು ಹಾಕಿದ್ದಾರೆ.

ಅಡಿಕೆ ತೋಟ ನಾಶ
ಅಡಿಕೆ ತೋಟ ನಾಶ
author img

By

Published : Aug 7, 2023, 10:16 PM IST

ಕಿಡಿಗೇಡಿಗಳ ಅಟ್ಟಹಾಸ!

ದಾವಣಗೆರೆ : ಸುಮಾರು 750ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ದುಷ್ಕರ್ಮಿಗಳು ಕಡೆದು ಹಾಕಿರುವ ಘಟನೆ ದಾವಣಗೆರೆ ತಾಲ್ಲೂಕಿನ ಮುದಹದಡಿ-ದುರ್ಗಾಂಭಿಕಾ ಕ್ಯಾಂಪ್​ನಲ್ಲಿ ನಡೆದಿದೆ. ಮುದಹದಡಿ ಗ್ರಾಮದ ರೈತ ಬೀರಪ್ಪ ಎಂಬವರಿಗೆ ಸೇರಿದ ಅಡಿಕೆ ತೋಟ ನಾಶವಾಗಿದೆ. ಹದಡಿ ಪೊಲೀಸ್​ ಠಾಣೆಯಲ್ಲಿ ಅವರು ಪ್ರಕರಣ ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಭೇಟಿ ಪರಿಶೀಲನೆ ನಡೆಸಿದರು.

ಅಡಿಕೆಗೆ ಚಿನ್ನದ ಬೆಲೆ ಇರುವ ಕಾರಣ ಸಾಕಷ್ಟು ರೈತರು ಭತ್ತದ ಬೆಳೆ ಬೆಳೆಯುವ ಬದಲು ಅಡಿಕೆ ಬೆಳೆಯಲು ಮುಂದಾಗಿದ್ದಾರೆ. ಬೀರಪ್ಪ ಕೂಡ ಅಡಿಕೆಗೆ ಉತ್ತಮ ದರ ಸಿಗುತ್ತಿದೆ ಎಂದು ಭತ್ತದ ಬದಲು ಮೂರು ವರ್ಷಗಳ ಹಿಂದೆ 5 ಲಕ್ಷ ರೂ. ಖರ್ಚು ಮಾಡಿ ಅಡಿಕೆ ಗಿಡಗಳನ್ನು ಬೆಳೆಸಿದ್ದರು. ಇನ್ನೆರಡು ವರ್ಷ ಕಳೆದರೆ ಫಸಲು ಕೈ ಸೇರುತ್ತಿತ್ತು. ಆದರೆ ಕಿಡಿಗೇಡಿಗಳ ಅಟ್ಟಹಾಸಕ್ಕೆ ಗಿಡಗಳು ನೆಲಕಚ್ಚಿವೆ. ರೈತ ಹಾಗು ಆತನ ಕುಟುಂಬಸ್ಥರಿಗೆ ದಿಕ್ಕೇ ತೋಚದಂತಾಗಿದೆ. ನಾಶವಾದ ಅಡಿಕೆ ತೋಟ ಕಂಡು ವೃದ್ದೆ ಗೋಳಾಡಿದ ದೃಶ್ಯ ಮನಕಲಕುವಂತಿತ್ತು.

ರೈತ ಬೀರಪ್ಪ ಮಾತನಾಡಿ, "ನಾನು ಜಮೀನಿನಿಂದ ರಾತ್ರಿ ಮನೆಗೆ ತೆರಳಿದಾಗ ಘಟನೆ ನಡೆದಿದೆ. ನಮ್ಮ ಹುಡುಗ ಕರೆ ಮಾಡಿ ಈ ಬಗ್ಗೆ ಹೇಳಿದ. ಜಮೀನಿನ ಬಳಿ ಬಂದು ನೋಡಿದಾಗ 750 ಅಡಿಕೆ ಗಿಡಗಳನ್ನು ಕಡಿದಿರುವುದು ತಿಳಿದುಬಂತು. ಹದಡಿ ಪೊಲೀಸ್​ ಠಾಣೆದೆ ದೂರು ನೀಡಿದ್ದೇವೆ. ನಮಗೆ ಯಾರ ಮೇಲೂ ದ್ವೇಷ ಇಲ್ಲ" ಎಂದು ಬೇಸರ ತೋಡಿಕೊಂಡರು.

ರೈತ ಮುಖಂಡ ಸತೀಶ್ ಮಾತನಾಡಿ, "ಬೀರಪ್ಪ ಅಡಿಕೆ ಗಿಡಗಳನ್ನು ಕಳೆದುಕೊಂಡು ನಷ್ಟಕ್ಕೀಡಾಗಿದ್ದಾರೆ. ಅವರು ಸೌಮ್ಯ ಸ್ವಭಾವದ ವ್ಯಕ್ತಿ. ಯಾರೊಂದಿಗೂ ದ್ವೇಷ, ವೈರತ್ವ ಹೊಂದಿಲ್ಲ. ಆದರಿಂದ ಈ ಕೃತ್ಯ ಎಸಗಿದ ಕಿಡಿಗೇಡಿಗಳ ವಿರುದ್ಧ ಕಠಣ ಕ್ರಮ ಕೈಕೊಳ್ಳಬೇಕು. ತೋಟಗಾರಿಕೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಸೂಕ್ತ ಪರಿಹಾರ ಕಲ್ಪಿಸಿಕೊಡಬೇಕು" ಎಂದು ಮನವಿ ಮಾಡಿದರು.

ಮಾಲೀಕನ ಕಣ್ಮುಂದೆಯೇ ಅಡಿಕೆ ತೋಟ ನಾಶ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ತೋಟಕ್ಕೆ ನುಗ್ಗಿದ ದುಷ್ಕರ್ಮಿಗಳು ಸುಮಾರು 350ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಕಡಿದು ಹಾಕಿರುವ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ಕೊಪ್ಪ ಗ್ರಾಮದಲ್ಲಿ ಇತ್ತೀಚೆಗೆ ನಡೆದಿತ್ತು. "ಈ ಘಟನೆ ನನ್ನ ಕಣ್ಣ ಮುಂದೆಯೇ ನಡೆದಿದ್ದು, ಈ ಬಗ್ಗೆ ಪ್ರಶ್ನಿಸಲು ಮುಂದಾದಾಗ ನನ್ನನ್ನು ಕೊಲೆ ಮಾಡಲು ಯತ್ನಿಸಿದರು" ಎಂದು ತೋಟದ ಮಾಲೀಕ ಆನಂದ ಆರೋಪಿಸಿದ್ದರು. ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಆಸ್ತಿ ವಿವಾದ: 350ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಕಡಿದು ಹಾಕಿದ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.