ETV Bharat / state

ದಾವಣಗೆರೆ: ಆರು ತಿಂಗಳ ಗರ್ಭಿಣಿ ಪತ್ನಿಯನ್ನೇ ಕೊಂದ ಪತಿ - ಆರು ತಿಂಗಳ ಗರ್ಭಿಣಿ

ಆರು ತಿಂಗಳ ಗರ್ಭಿಣಿ ಪತ್ನಿಯನ್ನೇ ಕೊಂದು ಕಾಡಿನಲ್ಲಿ ಹೂತು ಹಾಕಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.

6 months pregnant murder
ದಾವಣಗೆರೆ: ಆರು ತಿಂಗಳ ಗರ್ಭಿಣಿ ಪತ್ನಿಯನ್ನೇ ಕೊಂದ ಪತಿ
author img

By

Published : Nov 21, 2022, 2:43 PM IST

ದಾವಣಗೆರೆ: ತನ್ನ ಆರು ತಿಂಗಳ ಗರ್ಭಿಣಿ ಪತ್ನಿಯನ್ನೇ ಕೊಲೆ ಮಾಡಿ ಹೂತು ಹಾಕಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಗಂಗಗೊಂಡನಹಳ್ಳಿಯಲ್ಲಿ ನಡೆದಿದೆ. ಚಂದ್ರಕಲಾ ಅಲಿಯಾಸ್ ರೇಷ್ಮಾ (20) ಕೊಲೆಯಾದ ಮಹಿಳೆ. ಮೋಹನ್ ಕುಮಾರ್ (24) ಕೊಲೆ ಮಾಡಿದ ಆರೋಪಿ.

ರೇಷ್ಮಾ ಕೆಲ ದಿನಗಳಿಂದ ನಾಪತ್ತೆಯಾಗಿದ್ದು, ಪತಿ ವಿರುದ್ಧ ಆಕೆಯ ತಂದೆ ದೂರು ದಾಖಲಿಸಿದ್ದರು. ಮೋಹನ್ ಮಗಳಿಗೆ ವರದಕ್ಷಿಣೆ ಕಿರುಕುಳ ಮತ್ತು ಶೀಲ ಶಂಕಿಸಿ ಹಿಂಸೆ ನೀಡುತ್ತಿದ್ದ ಎಂದು ಆರೋಪಿಸಿದ್ದರು. ಚನ್ನಗಿರಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದು, ತನಿಖೆ ತೀವ್ರಗೊಳಿಸಿದಾಗ ತಾನೇ ಕೊಂದು ಹೂತು ಹಾಕಿರುವುದಾಗಿ ಒಪ್ಪಿಕೊಂಡಿದ್ದಾನೆ.

ಘಟನೆ ಹಿನ್ನೆಲೆ: ಜಿಲ್ಲೆಯ ಐಗೂರು ಗ್ರಾಮದ ರೇಷ್ಮಾ ಕಳೆದ ಎಪ್ರಿಲ್ 13 ರಂದು ಮೋಹನ್ ಕುಮಾರ್ ಎಂಬವರನ್ನು ವಿವಾಹವಾಗಿದ್ದರು. ಕೆಲ ದಿನಗಳಿಂದ ಆಕೆ ನಾಪತ್ತೆಯಾಗಿದ್ದಾಳೆ. ಅಲ್ಲದೇ ಆರು ತಿಂಗಳ ಗರ್ಭಿಣಿ. ರೇಷ್ಮಾಳನ್ನು ಹುಡುಕಿ ಕೊಡಿ ಎಂದು ಪತಿ ಮೋಹನ್ ಚನ್ನಗಿರಿ ಪೊಲೀಸ್​​ ಠಾಣೆಯಲ್ಲಿ ದೂರು ದಾಖಲಿಸಿದ್ದ.

ಇನ್ನು ಹೆಂಡತಿಗೆ ನಾನೇನು ಮಾಡಿಲ್ಲ ಎಂದು ಆಣೆ ಪ್ರಮಾಣ ಮಾಡಿ ಊರವರನ್ನು ನಂಬಿಸಿದ್ದನು. ಅನುಮಾನ ಬಾರದಂತೆ ರೇಷ್ಮಾಳ ಕಥೆ ಮುಗಿಸಿ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಪೋಲಿಸ್ ಠಾಣಾ ವ್ಯಾಪ್ತಿಯ ಕಾಡಿನಲ್ಲಿ ಹೂತು ಹಾಕಿದ್ದಾನೆ.

ಇದನ್ನೂ ಓದಿ:ಅಕ್ರಮ ಸಂಬಂಧದ ಶಂಕೆ: ಪತ್ನಿ ಕೊಲೆ ಮಾಡಿದ ಪತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.