ETV Bharat / state

ದಾವಣಗೆರೆ: ಶಬರಿಮಲೆಗೆ ಹೋಗಿ ಬಂದ 31 ಭಕ್ತರಿಗೆ ಕೊರೊನಾ ದೃಢ

ತಾಲೂಕಿನ ಕುಕ್ಕವಾಡ ಬಳಿ ಇರುವ ಆಂಜನೇಯ ನಗರದಿಂದ ಶಬರಿಮಲೆಗೆ ಹೋಗಿ ಬಂದಿದ್ದ 65 ಮಂದಿ ಪೈಕಿ 31 ಭಕ್ತರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ದಾವಣಗೆರೆ
ದಾವಣಗೆರೆ
author img

By

Published : Jan 20, 2022, 8:17 PM IST

ದಾವಣಗೆರೆ: ತಾಲೂಕಿನ ಕುಕ್ಕವಾಡ ಬಳಿ ಇರುವ ಆಂಜನೇಯ ನಗರದಿಂದ ಶಬರಿಮಲೆಗೆ ಹೋಗಿ ಬಂದಿದ್ದ 31 ಜನ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಕೊರೊನಾ ದೃಢಪಟ್ಟಿದ್ದು, ಜಿಲ್ಲಾಡಳಿತಕ್ಕೆ ತಲೆಬಿಸಿಯಾಗಿ ಪರಿಣಮಿಸಿದೆ.

ಕೇರಳದ ಶಬರಿಮಲೆಗೆ ಹೋಗುವಾಗ ನೆಗೆಟಿವ್ ರಿಪೋರ್ಟ್​ನೊಂದಿಗೆ 65 ಅಯ್ಯಪ್ಪ ಭಕ್ತರ ತಂಡ ಶಬರಿಮಲೆಗೆ ಹೋಗಿದ್ದರು.‌ ಶಬರಿಮಲೆಯಿಂದ 65 ಜನ ವಾಪಸ್​​ ಬಂದ ತಕ್ಷಣ ಆರೋಗ್ಯ ಇಲಾಖೆ ಸಿಬ್ಬಂದಿ ಸ್ವಾಬ್ ಟೆಸ್ಟ್ ಮಾಡಿಸಿ ಕ್ವಾರಂಟೈನ್​ಗೊಳಪಡಿಸಲಾಗಿತ್ತು. ಇದೀಗ ಅವರ ಪರೀಕ್ಷಾ ವರದಿ ಬಂದಿದ್ದು, 65 ಮಂದಿ ಪೈಕಿ 31 ಜನರಿಗೆ ಕೋವಿಡ್​​​ ಪಾಸಿಟಿವ್ ಬಂದಿದೆ.

31 ಜನರನ್ನು ಹೋಂ ಐಸೋಲೇಷನ್​ ಮಾಡಲಾಗಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ತೀವ್ರ ನಿಗಾ ವಹಿಸಿದ್ದಾರೆ. ‌ಶಬರಿಮಲೆ ಅಲ್ಲದೆ ಓಂ ಶಕ್ತಿಗೆ ಹೋಗಿ ಬಂದವರ ಮೇಲು ಕೂಡ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ.

ಜಾಹಿರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.