ETV Bharat / state

ಎರಡನೇ ಹಂತದ ಗ್ರಾಮ ಪಂಚಾಯತಿ ಚುನಾವಣೆ; 1112 ಸ್ಥಾನಗಳಿಗೆ ಮತದಾನ - gram panchayat election 2020

ದಾವಣಗೆರೆ ಜಿಲ್ಲೆಯಲ್ಲಿ 101 ಗ್ರಾಮ ಪಂಚಾಯತಿಗಳ ಪೈಕಿ ಒಟ್ಟು 1112 ಸ್ಥಾನಗಳಿಗೆ ಇಂದು ಮತದಾನ ನಡೆಯಲಿದೆ. ಹಾಗಾಗಿ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ವಹಿಸಲಾಗಿದೆ.

2nd phase gram panchayat election in Davanagere
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ
author img

By

Published : Dec 27, 2020, 3:57 AM IST

ದಾವಣಗೆರೆ: ಜಿಲ್ಲೆಯಲ್ಲಿ ಇಂದು ಎರಡನೇ ಹಂತದ ಗ್ರಾಮ ಪಂಚಾಯತಿ​ ಚುನಾವಣೆ ನಡೆಯಲಿದ್ದು ಜಿಲ್ಲಾಡಳಿತವು ಸಕಲ ತಯಾರಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, 101 ಗ್ರಾಪಂ ಗಳ ಪೈಕಿ ಒಟ್ಟು 1112 ಸ್ಥಾನಗಳಿಗೆ ಇಂದು ಮತದಾನ ನಡೆಯಲಿದೆ. ಹರಿಹರ, ಚನ್ನಗಿರಿ ಹಾಗೂ ನ್ಯಾಮತಿ ತಾಲೂಕುಗಳ 101 ಗ್ರಾಮ ಪಂಚಾಯತಿಗಳ ಒಟ್ಟು 586 ಮತಗಟ್ಟೆಗಳಲ್ಲಿ ಮತದಾನ ನಡೆಸಲಾಗುತ್ತಿದೆ.

ಹರಿಹರ ತಾಲೂಕಿನ 23 ಗ್ರಾಮ ಪಂಚಾಯತಿಗಳ 151 ಮತಗಟ್ಟೆಗಳು, ಚನ್ನಗಿರಿ ತಾಲೂಕಿನ 61 ಗ್ರಾಮ ಪಂಚಾಯತಿಗಳ 342 ಮತಗಟ್ಟೆಗಳಲ್ಲಿ ಹಾಗೂ ನ್ಯಾಮತಿ ತಾಲೂಕಿನ 17 ಗ್ರಾಮ ಪಂಚಾಯತಿಗಳ 93 ಮತಗಟ್ಟೆಗಳಲ್ಲಿ ಎರಡನೇ ಹಂತದ ಮತದಾನ ನಡೆಯಲಿದೆ ಎಂದರು.

ಮತದಾರರ ಬಲಬಲ:

ಚನ್ನಗಿರಿ ತಾಲೂಕಿನಲ್ಲಿ 229616 ಮತದಾರರು, ಹರಿಹರ ತಾಲೂಕಿನಲ್ಲಿ 100629 ಮತದಾರರು ಮತ್ತು ನ್ಯಾಮತಿ ತಾಲೂಕಿನ 59704 ಮತದಾರರು ಸೇರಿದಂತೆ ಒಟ್ಟಾರೆ 3,89,949 ಮತದಾರರಿದ್ದಾರೆ.

ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳು:

ಚನ್ನಗಿರಿ ತಾಲೂಕಿನ ವ್ಯಾಪ್ತಿಯಲ್ಲಿ 45 ಸೂಕ್ಷ್ಮ ಹಾಗೂ 47 ಅತಿ ಸೂಕ್ಷ್ಮ ಸೇರಿದ್ದಂತೆ 267 ಸಾಮಾನ್ಯ ಮತಗಟ್ಟೆಗಳಿವೆ. ಹರಿಹರ ತಾಲೂಕಿನಲ್ಲಿ 17 ಸೂಕ್ಷ್ಮ ಮತ್ತು 17 ಅತಿ ಸೂಕ್ಷ್ಮ ಹಾಗೂ 133 ಸಾಮಾನ್ಯ ಮತಗಟ್ಟೆಗಳಿವೆ. ಇನ್ನು ನೂತನ ತಾಲೂಕು ನ್ಯಾಮತಿಯಲ್ಲಿ 11 ಸೂಕ್ಷ್ಮ ಹಾಗೂ 15 ಅತಿ ಸೂಕ್ಷ್ಮ ಸೇರಿದಂತೆ 71 ಸಾಮಾನ್ಯ ಮತಗಟ್ಟೆಗಳಿವೆ.

ಅವಿರೋಧ ಆಯ್ಕೆಯ ಬಲಬಲ:

ಹರಿಹರ ತಾಲೂಕಿನ 23 ಗ್ರಾಪಂ ಗಳ ಪೈಕಿ 55 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ಮಾಡಿದರೆ, ಚನ್ನಗಿರಿ ತಾಲೂಕಿನ 61 ಗ್ರಾಪಂ ಗಳ ಪೈಕಿ ಒಟ್ಟು 94 ಸ್ಥಾನಗಳಿಗೆ ಅವಿರೋಧ ಆಯ್ಕೆ ಆಗಿದ್ದಾರೆ. ಇನ್ನು ನ್ಯಾಮತಿಯ 17 ಗ್ರಾಪಂ ಗಳ ವ್ಯಾಪ್ತಿಯಲ್ಲಿ 164 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, ಒಟ್ಟು 313 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಮೂರು ತಾಲೂಕುಗಳ ಪೈಕಿ 6 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಯಾಗಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.