ETV Bharat / state

ಹರಿಹರ ತಾಲೂಕಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ 2909 ವಿದ್ಯಾರ್ಥಿಗಳು

author img

By

Published : Jun 25, 2020, 7:43 PM IST

ಒಂದು ಗಂಟೆ 30 ನಿಮಿಷ ಮುಂಚಿತವಾಗಿ ಬಂದ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ನೀಡಿದ ಸೂಚನೆಗಳನ್ನು ಚಾಚೂ ತಪ್ಪದೆ ಮೂಲಕ ಮೊದಲ ಪರೀಕ್ಷೆಯನ್ನು ಯಶಸ್ವಿಯಾಗಿ ಬರೆದಿದ್ದಾರೆ. 150 ವಿದ್ಯಾರ್ಥಿಗಳು ಗೈರಾಗಿರುವ ಬಗ್ಗೆ ವರದಿಯಾಗಿದೆ.

Sslc exam in harihara
Sslc exam in harihara

ಹರಿಹರ: ತಾಲೂಕಿನ 10 ಪರೀಕ್ಷಾ ಕೇಂದ್ರಗಳಲ್ಲಿ 2909 ವಿದ್ಯಾರ್ಥಿಗಳು ಇಂದು ಎಸ್‌ಎಸ್‌ಎಲ್‌ಸಿ ಇಂಗ್ಲಿಷ್ ಪರೀಕ್ಷೆಯನ್ನು ಕೋವಿಡ್-19 ಮಾರ್ಗಸೂಚಿಗಳ ಪಾಲಿಸುವ ಮೂಲಕ ಬರೆಯುವಲ್ಲಿ ಯಶಸ್ವಿಯಾಗಿದ್ದಾರೆ.

ನಗರದ ಎಂಕೆಇಟಿ, ಎಂಆರ್‌ಬಿ, ಧರಾಮ, ಹಾಲಮ್ಮ ಶಾಮನೂರು ಶಿವಪ್ಪ ಪ್ರೌಢಶಾಲೆ ಸೇರಿದಂತೆ ಗ್ರಾಮಾಂತರ ಪ್ರದೇಶದ ಆರು ಕೇಂದ್ರಗಳಿಗೆ ಆಗಮಿಸಿದ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಥರ್ಮಲ್ ಸ್ಕ್ಯಾನಿಂಗ್ ಮುಖಾಂತರ ತಪಾಸಣೆ ನಡೆಸಿದರು. ಕೈಗಳಿಗೆ ಹಾಗೂ ಪರೀಕ್ಷಾ ಪರಿಕರಗಳಿಗೆ ಸ್ಯಾನಿಟೈಸಿಂಗ್​ ಮಾಡುವ ಮೂಲಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರು.

ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ತಲಾ ಮೂರು ಮಾಸ್ಕ್ ಕೊಡಲಾಯಿತು. ಇಲಾಖೆ ಸೂಚನೆಯಂತೆ ಒಂದು ಗಂಟೆ ಮೂವತ್ತು ನಿಮಿಷ ಮುಂಚಿತವಾಗಿ ಬಂದ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ನೀಡಿದ ಸೂಚನೆಗಳನ್ನು ಚಾಚೂ ತಪ್ಪದೆ ಪಾಲಿಸುವ ಮೂಲಕ ಪ್ರಥಮ ಪರೀಕ್ಷೆಯನ್ನು ಯಶಸ್ವಿಯಾಗಿ ಬರೆದಿದ್ದಾರೆ.

ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿಗಳಿಗೆ ಒಂದು ಗಂಟೆ ಓದಿಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿತ್ತು. ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ 20 ವಿದ್ಯಾರ್ಥಿಗಳನ್ನು ಮಾತ್ರ ಒಂದು ಕೊಠಡಿಯಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿತ್ತು. ಕಂಟೈನ್​ಮೆಂಟ್ ಝೋನ್ ಹಾಗೂ ಬಫರ್ ಝೋನ್ ನಿಂದ ಬಂದ ವಿದ್ಯಾರ್ಥಿಗಳಿಗಾಗಿ ಮೀಸಲಿಟ್ಟಿದ್ದ ಪ್ರತ್ಯೇಕ ಕೊಠಡಿಯಲ್ಲಿ ತಾಲೂಕಿನ ಸುಮಾರು 25 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದಾರೆ.

ನಗರದ ಎಂಆರ್‌ಬಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರಕ್ಕೆ ಜಂಟಿ ನೀರ್ದೆಶಕ ವೀರಣ್ಣ ಜತ್ತಿ ಭೇಟಿ ನೀಡಿ ಪರೀಶಿಲಿಸಿದ್ದಾರೆ. ತಾಲೂಕಿನ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅಕ್ರಮ ಚಟುವಟಿಕೆ ಇಲ್ಲದೇ ಪರೀಕ್ಷೆ ನಡೆದಿದ್ದು, 150 ವಿದ್ಯಾರ್ಥಿಗಳು ಗೈರಾಗಿರುವ ವರದಿಯಾಗಿದೆ.

ಪರೀಕ್ಷೆ ಮುಗಿದ ನಂತರ ಶಾಲೆಯನ್ನು ಸಂಪೂರ್ಣವಾಗಿ ಸ್ಯಾನಿಟೈಸರ್ ಮಾಡಿಸುತ್ತೇವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಯು. ಬಸವರಾಜಪ್ಪ ಮಾಹಿತಿ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.