ETV Bharat / state

ದಾವಣಗೆರೆ ಜಿಲ್ಲೆಯಲ್ಲಿ ಕೊರೊನಾಗೆ ಆರು ಮಂದಿ‌ ಬಲಿ... 371 ಜನ ಗುಣಮುಖ - ಕೊರೊನಾ

ಕೊರೊನಾ ಸೋಂಕಿನಿಂದ ದಾವಣಗೆರೆ ಜಿಲ್ಲೆಯಲ್ಲಿ 6 ಮಂದಿ ಸಾವನ್ನಪ್ಪಿದ್ದರೆ, 371 ಜನ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.

Davanagere
Davanagere
author img

By

Published : Aug 31, 2020, 10:02 PM IST

ದಾವಣಗೆರೆ: ಜಿಲ್ಲೆಯಲ್ಲಿ ಸೋಮವಾರ 255 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದರೆ, 6 ಮಂದಿ ಸೋಂಕಿಗೆ ಬಲಿಯಾಗಿರುವುದು ದೃಢಪಟ್ಟಿದೆ. ಈವರೆಗೆ 9,486 ಜನರು ಸೋಂಕಿಗೆ ತುತ್ತಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 191ಕ್ಕೆ ಏರಿದೆ.

ದಾವಣಗೆರೆ ತಾಲೂಕಿನ ಹಳೆಕುಂದುವಾಡ ಗ್ರಾಮದ 69 ವರ್ಷದ ಮಹಿಳೆ, ಭಗತ್ ಸಿಂಗ್ ನಗರದ 70 ವರ್ಷದ ವೃದ್ಧ ಆಗಸ್ಟ್ 29 ರಂದು ಸಾವನ್ನಪ್ಪಿದ್ದಾರೆ‌‌.

ನಿಟುವಳ್ಳಿಯ 53 ವರ್ಷದ ಮಹಿಳೆ, ಎಸ್. ಎಸ್. ಲೇಔಟ್ ನ 68 ವರ್ಷದ ವೃದ್ಧೆ, ರಂಗನಾಥ ಬಡಾವಣೆಯ 79 ವರ್ಷದ ವೃದ್ಧೆ ಹಾಗೂ ಚನ್ನಗಿರಿಯ ಲಕ್ಷ್ಮೀನಗರದ 65 ವರ್ಷದ ವೃದ್ಧ ಮೃತಪಟ್ಟಿದ್ದಾರೆ.

ಸೋಮವಾರ ದಾವಣಗೆರೆಯಲ್ಲಿ 134, ಹರಿಹರ 23, ಜಗಳೂರು 26, ಚನ್ನಗಿರಿ 38, ಹೊನ್ನಾಳಿ 26, ಹೊರ ಜಿಲ್ಲೆಯಿಂದ ಬಂದಿದ್ದ 8 ಮಂದಿಯಲ್ಲಿ ಸೋಂಕಿರುವುದು ಖಚಿತವಾಗಿದೆ‌.

ಕೊರೊನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ 371 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಇದುವರೆಗೆ 7,003 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಪ್ರಸ್ತುತ 2,292 ಸಕ್ರಿಯ ಪ್ರಕರಣಗಳಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.