ಮಂಗಳೂರು: ಗೋಲಿಬಾರ್ನಲ್ಲಿ ಮೃತಪಟ್ಟವರು ಅಮಾಯಕರಲ್ಲ, ಅಪರಾಧಿಗಳೆಂದು ತನಿಖೆ ಮಾಡುವ ಮೊದಲೆ ಮುಖ್ಯಮಂತ್ರಿ ಹೇಗೆ ಹೇಳಿದರು ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಪ್ರಶ್ನಿಸಿದ್ದಾರೆ.
ಇಂದು ನಗರಕ್ಕೆ ಆಗಮಿಸಿರುವ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಪೊಲೀಸ್ನವರು ಫೈರ್ ಮಾಡಬಾರದಿತ್ತು. 300 ಮಂದಿಯನ್ನು ಕಂಟ್ರೋಲ್ ಮಾಡೋಕೆ ಆಗದಿದ್ರೆ ಪೊಲೀಸ್ ಯಾಕೆ ಬೇಕು ಎಂದು ಕಿಡಿಕಾರಿದ್ರು.
ಗಲಭೆಯಲ್ಲಿ ಮೃತಪಟ್ಟವರು ಅಪರಾಧಿಗಳು ಅನ್ನೋದು ಸಾಬೀತಾಗಿಲ್ಲ, ಈ ಪ್ರಕರಣಕ್ಕೆ ಸಿಐಡಿ ತನಿಖೆ ಬೇಡ, ನ್ಯಾಯಾಧೀಶರಿಂದ ತನಿಖೆ ಮಾಡಿಸಬೇಕು. ಸರ್ಕಾರ ಪರಿಹಾರ ವಾಪಸ್ ಪಡೆಯುತ್ತಾರೆ ಅಂತಾ ಗೊತ್ತಿತ್ತು. ಜನರಿಗೆ ಖುಷಿ ಆಗಲೆಂದು ಮೊದಲು ಘೋಷಣೆ ಮಾಡಿದ್ದರು. ಸರ್ಕಾರದ ಪರಿಹಾರದಿಂದ ಏನಾಗುತ್ತದೆ. ಕೋಟಿ ಕೊಟ್ರು ಹೋದ ಜೀವ ತರೋಕೆ ಆಗಲ್ಲ ಎಂದು ಜಮೀರ್ ಅಹ್ಮದ್ ಹೇಳಿದ್ರು.
ಮೃತರ ಕುಟುಂಬಕ್ಕೆ ಸರ್ಕಾರದ ಬಳಿ ಪರಿಹಾರ ಕೇಳಿಲ್ಲ, ಘೋಷಣೆ ಮಾಡಿ ವಾಪಸ್ ಪಡೆದಿದ್ದಾರೆ, ಸಾರ್ವಜನಿಕ ಆಸ್ತಿಪಾಸ್ತಿಯನ್ನು ಬೇಕಂತಲೇ ಯಾರೂ ನಷ್ಟ ಮಾಡಲ್ಲ. ಸರ್ಕಾರ ಹಿಟ್ಲರ್ ಆಡಳಿ ಮಾಡುತ್ತಿದೆ. ಪ್ರತಿಪಕ್ಷಗಳು ಕೈಕಟ್ಟಿ ಕೂರೋದಿಲ್ಲ. ವಿಧಾನಸಭೆಯ ಅಧಿವೇಶನದಲ್ಲಿ ಚರ್ಚೆ ಮಾಡುತ್ತೇವೆ ಎಂದು ಮಾಜಿ ಸಚಿವ ಗುಡುಗಿದರು.