ಮಂಗಳೂರು(ದಕ್ಷಿಣ ಕನ್ನಡ): ಈ ವರ್ಷಾರಂಭಕ್ಕೂ ಮುನ್ನ ದೆಹಲಿಯಲ್ಲಿ ನಡೆದ ಹಿಟ್ ಅಂಡ್ ರನ್ ಪ್ರಕರಣದ ನಂತರ ಬೆನ್ನು ಬೆನ್ನಿಗೆ ಘಟನೆಗಳು ವರದಿಯಾಗುತ್ತಿದೆ. ದೆಹಲಿಯ ಕಾಂಜಾವಾಲ ಪ್ರಕರಣದಲ್ಲಿ ಕಾರುನಲ್ಲಿ ಯುವರು ಸ್ಕೂಟಿಯಲ್ಲಿ ಬರುತ್ತಿರದ್ದ ಯುವತಿಗೆ ಗುದ್ದಿ, ನಂತರ ಕಾರಿ ನಡಿ ಯುವತಿ ಸಿಲುಕಿದ್ದರೂ ಸುಮಾರು ಕಿಮೀ ಚಲಾಯಿಸಿ ದಾರುಣ ಘಟನೆ ನಡೆದಿತ್ತು. ಇದಾದ ಬೆನ್ನಲ್ಲೆ ಪಂಜಾಬ್ನಲ್ಲಿ ಬೀದಿ ನಾಯಿಗೆ ಆಹಾರ ಹಾಕುತ್ತಿದ್ದ ಯುವತಿಗೆ ಗುದ್ದಿ ಥಾರ್ ಜೀಪಿನವನು ಪರಾರಿಯಾಗಿದ್ದ. ಬೆಂಗಳೂರಿನಲ್ಲಿ ಫೆಬ್ರವರಿ 2 ರಂದು ಕಾಲೇಜು ಹುಡುಗಿಗೆ ಕಾರು ಗುದ್ದಿ ತಪ್ಪಿಸಿಕೊಂಡ ಪ್ರಕರಣವೂ ಇಂದು ಬೆಳಕಿಗೆ ಬಂದಿದೆ.
ಇದರ ಬೆನ್ನಲ್ಲೇ ಮಂಗಳೂರಿನ ಹೊರ ವಲಯದಲ್ಲಿ ನಡೆದ ಹಿಟ್ ಅಂಡ್ ರನ್ ಪ್ರಕರಣದ ಆರೋಪಿ ಬಂಧನ ಆಗಿದೆ. ಹಳೆಯಂಗಡಿ - ಪಡುಪಣಂಬೂರು ರಾಷ್ಟ್ರೀಯ ಹೆದ್ದಾರಿಯ ಪೆಟ್ರೋಲ್ ಬಂಕ್ ಬಳಿ ಕಳೆದ ಮಂಗಳವಾರ ಮಧ್ಯರಾತ್ರಿ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಇಬ್ಬರು ಬಲಿಯಾಗಿದ್ದು, ಈ ಪ್ರಕರಣದ ಆರೋಪಿ ಯೂಟ್ಯೂಬರನ್ನು ಮಂಗಳೂರು ಉತ್ತರ ಸಂಚಾರ ಠಾಣಾ ಪೊಲೀಸರು ಬಂಧಿಸಿದ್ದಾರೆ.
"ಮ್ಯಾಡ್ ಇನ್ ಕುಡ್ಲ" ಹೆಸರಿನ ಯೂಟ್ಯೂಬರ್ ಹಳೆಯಂಗಡಿ ಇಂದಿರಾನಗರ ನಿವಾಸಿ ಅರ್ಪಿತ್ (35) ಬಂಧಿತ ಆರೋಪಿ. ಈತ ಮಂಗಳವಾರ ರಾತ್ರಿ 1 ಗಂಟೆಯ ಸುಮಾರಿಗೆ ಹಿಟ್ ಆಂಡ್ ರನ್ ಮಾಡಿದ ಪರಿಣಾಮ ಇಬ್ಬರು ಬಲಿಯಾಗಿ, ಒಬ್ಬ ಗಂಭೀರ ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಕಾರು ಚಾಲಕ ಯೂಟ್ಯೂಬರ್ನನ್ನು ಮಂಗಳೂರು ಉತ್ತರ ಸಂಚಾರಿ ಠಾಣಾ ಪೊಲೀಸರು ಕಾರ್ ಸಮೇತ ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿ ಜಾಮೀನು ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮಂಗಳವಾರ ತಡರಾತ್ರಿ ಒಂದು ಗಂಟೆ ಸುಮಾರಿಗೆ ಮಧ್ಯಪ್ರದೇಶದಿಂದ ಬಂದಿದ್ದ ಲಾರಿ ಮೂಲ್ಕಿ ಪಡು ಪಣಂಬೂರಿನಲ್ಲಿ ಟೈರ್ ಪಂಕ್ಚರ್ ಆಗಿತ್ತು. ಹೆದ್ದಾರಿ ಬದಿ ಲಾರಿಯನ್ನು ನಿಲ್ಲಿಸಿ ಟಯರ್ ಬದಲಾವಣೆ ಮಾಡುತ್ತಿದ್ದಾಗ ಆರೋಪಿ ಅರ್ಪಿತ್ ಚಲಾಯಿಸುತ್ತಿದ್ದ ಕಾರು ಅತಿವೇಗ ಮತ್ತು ಅಜಾಗರೂಕತೆಯಿಂದ ತೀರಾ ಎಡಗಡೆಗೆ ಬಂದು ಅಲ್ಲಿದ್ದವರಿಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ಬಳಿಕ ಅರ್ಪಿತ್ ಕಾರು ಸಮೇತ ಪರಾರಿಯಾಗಿದ್ದರು. ಘಟನೆಯಲ್ಲಿ ಮಧ್ಯಪ್ರದೇಶ ಮೂಲದ ಬಬ್ದು (23) ಮತ್ತು ಅಚಲ್ ಸಿಂಗ್ (30) ಸ್ಥಳದಲ್ಲೇ ಮೃತ ಪಟ್ಟಿದ್ದರು. ಮೃತರ ಶವದ ಭಾಗಗಳು ಹೆದ್ದಾರಿ ತುಂಬಾ ಚೆಲ್ಲಾಡಿದ್ದವು. ಘಟನೆಯಲ್ಲಿ ಕೇರಳ ನಿವಾಸಿ ಅನೀಶ್ (42) ಗಂಭೀರ ಗಾಯಗೊಂಡಿದ್ದರು. ಪ್ರಕರಣದ ಬೆನ್ನು ಹತ್ತಿದ ಮುಲ್ಕಿ ಪೊಲೀಸರು ಆರೋಪಿಯನ್ನು ಸೆರೆಹಿಡಿದಿದ್ದಾರೆ.
ಬೆಂಗಳೂರಿನಲ್ಲಿ ಇಂದು ಬೆಳಕಿಗೆ ಬಂದ ಹಿಟ್ ಅಂಡ್ ರನ್ ಪ್ರಕರಣ: ಬೆಂಗಳೂರಿನಲ್ಲಿ ಹಿಟ್ ಅಂಡ್ ರನ್ ಪ್ರಕರಣ ಒಂದು ತಡವಾಗಿ ಬೆಳಕಿಗೆ ಬಂದಿದ್ದು, ವಿದ್ಯಾರ್ಥಿನಿಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಕೆಂಗೇರಿ ಮುಖ್ಯರಸ್ತೆಯ ಆರ್ವಿ ಕಾಲೇಜ್ ಬಳಿ ನಡೆದಿದೆ. ವಿದ್ಯಾರ್ಥಿನಿ ಹುಬ್ಬಳ್ಳಿ ಮೂಲದ ಸ್ವಾತಿ ಪಟ್ಟಣಗೆರೆ ಎಂದು ತಿಳಿದು ಬಂದಿದೆ. ಗಂಭೀರವಾಗಿ ಗಾಯಗೊಂಡಿರುವ ಯುವತಿ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಿಟ್ ಅಂಡ್ ರನ್ ಮಾಡಿ ತಲೆ ಮರೆಸಿಕೊಂಡಿದ್ದ ಕಾರು ಚಾಲಕ ಕೃಷ್ಣಭಾರ್ಗವ್ (20) ನನ್ನ ಕೆಂಗೇರಿ ಸಂಚಾರಿ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಹಿಟ್ ಅಂಡ್ ರನ್ .. ಯುವತಿಗೆ ಗಂಭೀರ ಗಾಯ, ಆರೋಪಿ ಬಂಧನ